ಕಾರವಾರ: ಕರಾವಳಿ ಉತ್ಸವದ-2025 ರ ಅಂಗವಾಗಿ ಹೆಲಿಕ್ಯಾಪ್ಟರ್ ಜಾಲಿ ರೈಡ್ಗೆ ಕಾರವಾರದ ಲಂಡನ್ ಬ್ರಿಡ್ಜ್ ಬಳಿ ಕರ್ನಾಟಕ ಮಾರ್ಕೇಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಕೆ. ಸೈಲ್ ಚಾಲನೆ ನೀಡಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಬಳಿಕ ಮಾತನಾಡಿದ ಅವರು, ಹೇಲಿಕ್ಯಾಪ್ಟರ್ ಜಾಲಿ ರೈಡ್ ನಡೆಸಲು ತಹಶೀಲ್ದಾರ, ಲೋಕೋಪಯೋಗಿ ಇಲಾಖೆ, ನಗರಸಭೆ, ಅರಣ್ಯ ಇಲಾಖೆ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಮತ್ತು ಇವೆಂಟ್ ಮ್ಯಾನೇಜ್ ಮೆಂಟ್ ಅವರ ಸಹಕಾರ ಅಪಾರವಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರತಿ ಟಿಕೆಟ್ಗೆ ರೂ 3,900 ನಿಗದಿಪಡಿಸಲಾಗಿದೆ. ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಅವರು ಅಧ್ಯಕ್ಷತೆಯಲ್ಲಿ ವಿಶೇಷವಾಗಿ ಆಶಾ ನಿಕೇತನ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಹೆಲಿಕ್ಯಾಪ್ಟರ್ ರೈಡ್ ಮಾಡುವ ಮೂಲಕ ಚಾಲನೆ ನೀಡಲಾಗಿದೆ. ಮುಂದಿನ 5 ದಿನಗಳ ಕಾಲ ಹೇಲಿಕ್ಯಾಪ್ಟರ್ ರೈಡ್ ಬೆಳ್ಳಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹಾರಡಲಿದ್ದು, ಹೇಲಿಕ್ಯಾಪ್ಟರ್ ಕಾರವಾರ ಪ್ರದೇಶವನ್ನು 7 ನಿಮಿಷದಲ್ಲಿ ಸುತ್ತು ಹಾಕಲಾಗುವುದು ಎಂದರು.
ಹೆಲಿಕ್ಯಾಪ್ಟರ್ನ ಮೊದಲ ಜಾಲಿ ರೈಡ್ ಆಗಿ, ಆಶಾನಿಕೇತನ ವಿಶೇಷ ಶಾಲೆಯ ವಿದ್ಯಾರ್ಥಿಗಳ ಹಾರಾಟ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಶ್ ಶಶಿ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳ ಗೌರಿ ಭಟ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಮತ್ತಿತರರು ಹಾಜರಿದ್ದರು.




