ಕರ್ನಾಟಕ ರಾಜ್ಯದ ಕೆಲವೇ ಕೆಲವು ನಾಯಕರು ಅಭಿವೃದ್ಧಿ ವಿಚಾರದಲ್ಲೂ ಸಾಕಷ್ಟು ಮುಂದೆ ಇದ್ದಾರೆ. ಅದೇ ರೀತಿಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವ ವಿಚಾರದಲ್ಲೂ ಮಾದರಿಯಾಗಿದ್ದಾರೆ. ಇಂತಹ ಮಾದರಿಯಲ್ಲಿ ನಮಗೆ ಎದ್ದು ಕಾಣುವುದು ರಾಮಲಿಂಗಾರೆಡ್ಡಿಯವರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಬೆಂಗಳೂರು ನಗರದಲ್ಲಿ ಆರ್ ವಿ ರಸ್ತೆಯಿಂದ ಬೊಮ್ಮನಹಳ್ಳಿಗೆ ನೂತನವಾಗಿ ನಿರ್ಮಿಸಿರುವ ಮೆಟ್ರೋ ಮಾರ್ಗದ ಎರಡು ಬದಿಯಲ್ಲಿ ಎಲಿವೇಟೆಡ್ ರಸ್ತೆ ಮಾರ್ಗ ಬೆಂಗಳೂರುನಲ್ಲಿ ಮಾದರಿಯಾಗಿದೆ. ಇದನ್ನು ರಾಮಲಿಂಗಾರೆಡ್ಡಿ ಮಾಡೆಲ್ ಎಂದು ಇತ್ತೀಚಿಗೆ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಅಭಿಮಾನದಿಂದ ಹೇಳಿರುತ್ತಾರೆ.
ನಿಜಕ್ಕೂ ಅಭಿವೃದ್ಧಿಯ ವಿಚಾರದಲ್ಲಿ ಇವರು ಮಾದರಿಯಾಗಿದ್ದಾರೆ. ಬಿಟಿಎಂ ಕ್ಷೇತ್ರದ 22 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ ಅಭಿವೃದ್ಧಿ ಮಾಡಿರುವ ರೀತಿಯನ್ನು ಗಮನಿಸಿದಾಗ ಅನ್ಯ ಶಾಸಕರಿಗೆ ಇವರು ಮಾದರಿಯಾಗುತ್ತಾರೆ.
ತಮ್ಮ ಕ್ಷೇತ್ರದ ರಸ್ತೆಗಳ ಅಭಿವೃದ್ಧಿ ಹಾಗೂ ಅಗತ್ಯವಾಗಿರುವ ಕಡೆಯಲ್ಲೆಲ್ಲಾ ಕಾಂಕ್ರೀಟ್ ರಸ್ತೆಗಳನ್ನು ಮತ್ತು ವೈಟ್ ಟ್ಯಾಪಿಂಗ್ ರಸ್ತೆಗಳನ್ನು ನಿರ್ಮಿಸಿರುವುದು ಬಹಳಷ್ಟು ಶಾಸಕರಿಗೆ ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಮಾದರಿಯಾಗುತ್ತಾರೆ.
ತಮ್ಮ ಕ್ಷೇತ್ರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಇವರು ತೋರಿಸುವ ಆಸಕ್ತಿ ಮತ್ತು ಶ್ರದ್ಧೆಯನ್ನು ಗಮನಿಸಿದಾಗ ಹಾಗೂ ಆ ಕಾಮಗಾರಿಗಳ ಗುಣಮಟ್ಟವನ್ನ ವೀಕ್ಷಿಸಿದಾಗ ಇವರು ಬಹಳಷ್ಟು ಶಾಸಕರಿಗೆ ಮಾದರಿಯಾಗುತ್ತಾರೆ.
ತಾವು ವಹಿಸಿಕೊಂಡಂತಹ ಯಾವುದೇ ಖಾತೆ ಆದರೂ ಸರಿ ಅದಕ್ಕೆ ನ್ಯಾಯವನ್ನು ಒದಗಿಸಿಕೊಡುತ್ತ ಕರ್ತವ್ಯವನ್ನ ನಿರ್ವಹಿಸುವ ರೀತಿ ಮಾದರಿಯಾಗಿರುತ್ತದೆ. ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾಗಿ ಇವರು ಆ ಎರಡು ಇಲಾಖೆಗಳಲ್ಲಿ ಸಿಬ್ಬಂದಿ ಮತ್ತು ನಾಗರಿಕರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಸಾರಿಗೆ ಇಲಾಖೆಯಲ್ಲಿ ನೌಕರರ ಮತ್ತು ಪ್ರಯಾಣಿಕರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಮುಜರಾಯಿ ಇಲಾಖೆಯಲ್ಲಿ ಭಕ್ತರು ಮತ್ತು ಅರ್ಚಕರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.
ಇಲಾಖೆಗೆ ಸಂಪನ್ಮೂಲವನ್ನ ಕ್ರೂಢೀಕರಿಸಿ ಕೊಡುವಲ್ಲಿ ಇವರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಜೊತೆಗೆ ಇಲಾಖೆಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸಲುವಾಗಿಯೂ ಶ್ರಮಿಸುತ್ತಿದ್ದಾರೆ.
ಶಕ್ತಿ ಯೋಜನೆಯ ಅನುಷ್ಠಾನದ ವಿಚಾರದಲ್ಲಿ ಎಲ್ಲಿಯೂ ಲೋಪವಾಗದಂತೆ ಅಚ್ಚುಕಟ್ಟಾಗಿ ಯೋಜನೆಯನ್ನು ಜನರಿಗೆ ತಲುಪಿಸುತ್ತಾ ಸರ್ಕಾರದ ಕೀರ್ತಿಗೆ ಪ್ರಮುಖವಾದಂತಹ ಕಾಣಿಕೆಯನ್ನು ಕೊಟ್ಟಿರುತ್ತಾರೆ.
ಒಬ್ಬ ಜನಪ್ರತಿನಿಧಿಯಾಗಿ, ಸಚಿವರಾಗಿ, ಮಿಗಿಲಾಗಿ ಕಿರಿಯ ನಾಯಕರಾಗಿ ಸ್ಪಂದಿಸುವ ಗುಣವನ್ನು ಇವರನ್ನು ನೋಡಿ ಕಲಿಯಬೇಕು. ಯಾವುದೇ ಸಚಿವರ ಹುದ್ದೆಯನ್ನ ನಿರ್ವಹಿಸುವ ಸಂದರ್ಭದಲ್ಲಿ ವಿಶೇಷವಾಗಿ ಗೃಹ ಸಚಿವರಾಗಿದ್ದ ದಿನಗಳಲ್ಲಿಯೂ ಅನಗತ್ಯವಾದ ಅಂತಹ ಅಂಗರಕ್ಷಕರು, ವಾಹನಗಳ ಸೌಲಭ್ಯ, ಸೌಕರ್ಯ, ಅಬ್ಬರ ಆಡಂಬರ ಇವುಗಳು ಎಲ್ಲಿಯೂ ಸುಳಿಯಲು ಸಾಧ್ಯವಿರಲಿಲ್ಲ. ಕಾರಿನ ಮೇಲೆ ಕೆಂಪು ದೀಪವಿಲ್ಲದೆ ಅಂಗರಕ್ಷಕರ ಪಡೆಗಳಿಲ್ಲದೆ ಜನಸಾಮಾನ್ಯರೊಂದಿಗೆ ಬೆರೆಯುವಂತಹ ಕೆಲವೇ ಕೆಲವು ನಾಯಕರುಗಳಲ್ಲಿ ಇವರು ಒಬ್ಬರು ಎನ್ನುವುದು ಇವರ ವ್ಯಕ್ತಿತ್ವ ಮಾದರಿಯಾಗಿರುತ್ತದೆ.
ವಿಧಾನಸೌಧದಲ್ಲಿ ಸಾರ್ವಜನಿಕರು ಬಂದು ಸಚಿವರನ್ನ ಭೇಟಿ ಮಾಡಲು ಸಾಕಷ್ಟು ತೊಂದರೆಗಳು ಆಗುತ್ತದೆ ಎನ್ನುವ ಕಾರಣಕ್ಕೆ ಕೆಎಸ್ಆರ್ಟಿಸಿ ಕಚೇರಿಯಲ್ಲಿಯೇ ರಾಜ್ಯದ ಮೂಲೆ ಮೂಲೆಗಳಿಂದ ಬರುವ ಎಲ್ಲರನ್ನೂ ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಡುತ್ತಾರೆ.
ಕಚೇರಿಗೆ ಬಂದಂತಹ ವ್ಯಕ್ತಿಯ ಜಾತಿ, ಧರ್ಮ, ಪಂಗಡ, ಪಕ್ಷ ಯಾವುದನ್ನು ಕೇಳುವುದಿಲ್ಲ. ತಾವು ಒಬ್ಬ ಸರ್ಕಾರದ ಸಚಿವರು ಹಾಗೂ ಜನಪ್ರತಿನಿ ಎನ್ನುವ ಕಾರಣದಿಂದ ಎಲ್ಲರಿಗೂ ಸ್ಪಂದಿಸುತ್ತ ತಮ್ಮ ಬದ್ಧತೆಯನ್ನು ಮೆರೆದಿರುತ್ತಾರೆ.
ಪ್ರತಿದಿನವೂ ತಮ್ಮ ಮನೆಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಸ್ಥಳದಲ್ಲಿಯೇ ಪರಿಹಾರವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೆ. ಇವರ ಕಚೇರಿಯಲ್ಲಿ ಶಿಫಾರಸು ಪತ್ರಗಳಿಗೆ ನಾಳೆ ಬನ್ನಿ ಎನ್ನುವ ಮಾತೇ ಇಲ್ಲ, ಕೆಲವೇ ನಿಮಿಷಗಳಲ್ಲಿ ಶಿಫಾರಸು ಪತ್ರಗಳು ಮುದ್ರಿತವಾಗಿ ಸಚಿವರ ಸಹಿ ಆಗಿ ಸಾರ್ವಜನಿಕರ ಕೈಗೆ ದೊರೆಯುತ್ತದೆ. ಇದರಿಂದ ಸಾರ್ವಜನಿಕರು ಅಲೆದಾಡುವುದು ತಪ್ಪುತ್ತದೆ. ಇದು ಸಹ ಒಂದು ವಿಶೇಷವಾದಂತಹ ನಡವಳಿಕೆಯ ಸರಿ.
ಸರ್ಕಾರದ ವಿವಿಧ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಸಲುವಾಗಿ ತಮ್ಮ ಶಾಸಕರ ಕಚೇರಿಯಲ್ಲಿಯೇ ಬೇಕಾದಂತಹ ತಂತ್ರಜ್ಞಾನದ ಅಳವಡಿಕೆಯನ್ನ ಸಿದ್ಧಪಡಿಸಿಕೊಂಡು ಸಾರ್ವಜನಿಕರಿಗೆ ಅಗತ್ಯವಾದ ಸೌಲಭ್ಯವನ್ನು ಕಲ್ಪಿಸಿ ಕೊಡುತ್ತಾರೆ. ಇದರಿಂದ ಮುಗ್ಧ ಜನರಿಗೆ ಕಚೇರಿಯಿಂದ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಇದು ನಿಜಕ್ಕೂ ಜನರಿಗೆ ಸ್ಪಂದಿಸುವ ರೀತಿ.
ಇನ್ನು ಕಾರ್ಯಕರ್ತರ ಪಾಲಿಗಂತೂ ಇವರು ನಿಜಕ್ಕೂ ಆಪತ್ಬಾಂಧವರಾಗಿದ್ದಾರೆ. ಕಾರ್ಯಕರ್ತರು ನೇರವಾಗಿ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳಬಹುದು ಮತ್ತು ಸಹಾಯವನ್ನು ಪಡೆದುಕೊಳ್ಳಬಹುದು. ಇವರ ರೀತಿಯಲ್ಲಿ ಕಾರ್ಯಕರ್ತರಿಗೆ ಸ್ಪಂದಿಸುವ ಸಚಿವರ ಸಂಖ್ಯೆ ದುರ್ಲಭ. ಕಾರ್ಯಕರ್ತರಿಗಂತು ಇವರು ಅತ್ಯಂತ ನಂಬಿಕೆಯ ಮತ್ತು ವಿಶ್ವಾಸದ ನಾಯಕ. ಸಾಮಾನ್ಯ ಕಾರ್ಯಕರ್ತರ ಮನೆಯ ದುಃಖದ ಸಂದರ್ಭದಲ್ಲಿ ಅದೇ ರೀತಿಯಲ್ಲಿ ಅವರ ಮನೆಗಳಲ್ಲಿನ ಶುಭ ಕಾರ್ಯಕ್ರಮಗಳಲ್ಲಿ ತಪ್ಪದೇ ಹಾಜರಾಗಿ ಅವರಲ್ಲಿ ಭರವಸೆಯನ್ನ ಮೂಡಿಸುತ್ತಾರೆ.
ಈ ರೀತಿಯಲ್ಲಿ ಸಚಿವರು ಸರಳತೆಯಿಂದ ಬದುಕಿ, ಸ್ಪಂದಿಸುತ್ತಾ, ತಾವು ವಹಿಸಿಕೊಂಡ ಇಲಾಖೆಯಲ್ಲಿ ಅಭಿವೃದ್ಧಿಯನ್ನು ಮಾಡುತ್ತಾ, ತಮ್ಮ ಕ್ಷೇತ್ರದ ಪ್ರಗತಿಯ ಕಡೆಗೆ ನಮನವನ್ನು ಕೊಟ್ಟು ಜೊತೆಗೆ ಕಾರ್ಯಕರ್ತರ ಹಿತವನ್ನು ಕಾಯುತ್ತಾ ಬಂದರೆ ಎಂತಹ ಸಂದರ್ಭದಲ್ಲಿ ಕೂಡ ಪಕ್ಷಗಳಿಗೆ ಹಿನ್ನಡೆಯಾಗುವುದಿಲ್ಲ. ಇಂತಹ ವ್ಯಕ್ತಿತ್ವ ಮತ್ತು ನಡವಳಿಕೆಯನ್ನು ಬಹಳಷ್ಟು ಜನ ಮೈಗೂಡಿಸಿಕೊಂಡರೆ ಸರ್ಕಾರಕ್ಕೂ ಮತ್ತು ಪಕ್ಷಕ್ಕೂ ಅದೆಷ್ಟೋ ಶಕ್ತಿ ಬರುತ್ತದೆ.
ಕಾರ್ಯಕರ್ತರಿಗೆ ಮತ್ತು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯದೆ, ಭದ್ರತಾ ಸಿಬ್ಬಂದಿಯ ಕೋಟೆಯೊಳಗೆ ಸಂಚರಿಸುತ್ತಾ, ಆಡಂಬರದ, ಅಬ್ಬರದ, ನಡವಳಿಕೆಗಳಿಂದ ಯಾರ ವಿಶ್ವಾಸವನ್ನು ಗಳಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಬಹಳಷ್ಟು ಮಂದಿ ಅರಿಯಬೇಕು. ರಾಮಲಿಂಗಾರೆಡ್ಡಿಯವರು ಸರಳವಾಗಿ ಗನ್ ಮ್ಯಾನ್ ವ್ಯವಸ್ಥೆ ಇಲ್ಲದೆ ಜನರಿಗೆ ಸುಲಭವಾಗಿ ದೊರೆತು ಸ್ಪಂದಿಸಬಹುದು ಎನ್ನುವುದಾದರೆ ಬೇರೆಯವರು ಏಕೆ ಈ ದಾರಿಯಲ್ಲಿ ಸಾಗಬಾರದು? ಇದರಿಂದ ಅವರುಗಳ ವ್ಯಕ್ತಿತ್ವವು ದೊಡ್ಡದಾಗುತ್ತದೆ ನಾಯಕತ್ವ ಗಟ್ಟಿಯಾಗಿ ರೂಪಗೊಳ್ಳುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು




