ಮೈಸೂರು ದಸರಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟುಗಳಿಗೆ ಈ ಬಾರಿ ನಗದು ಬಹುಮಾನ ಇಲ್ಲವೆಂದು ಹೇಳಲಾಗುತ್ತಿದೆ.
ಸಾಲದು ಎಂಬಂತೆ ವಿಭಾಗೀಯ ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ನೀಡಬೇಕಿದ್ದ ಪ್ರಯಾಣ ಭತ್ಯೆಯನ್ನೂ ಸಹ ನೀಡದೇ ಕ್ರೀಡಾ ಇಲಾಖೆಯು ಸಣ್ಣತನ ತೋರುತ್ತಿದೆ.
ಕ್ರೀಡಾಪಟುಗಳ ಸಿದ್ಧತೆ ಮತ್ತು ಅವರ ಬದುಕಿಗೆ ಕನಿಷ್ಠ ಮಟ್ಟದಲ್ಲಿ ನೆರವಾಗಬಹುದಾದ ನಗದು ಬಹುಮಾನ ನೀಡಲು ಕ್ರೀಡಾಪಟುಗಳು ಸರ್ಕಾರಕ್ಕೇನಾದರೂ 40% ಕಮಿಷನ್ ಕೊಡಬೇಕೇ? ಹಾಗೇನಾದರೂ ಇದ್ದರೆ ಸರ್ಕಾರ ಅದನ್ನು ಸ್ಪಷ್ಟಪಡಿಸಲಿ.
ಇನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದಸರಾದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಸೂಕ್ತ ರೀತಿಯಲ್ಲಿ ಭತ್ಯೆ ಹಾಗೂ ನಗದು ಬಹುಮಾನವನ್ನು ನೀಡಲಾಗುತ್ತಿತ್ತು. ಇದೀಗ ಸರ್ಕಾರ ಅಂತಹ ಪ್ರೋತ್ಸಾಹದ ಕೆಲಸಕ್ಕೂ ಅಡ್ಡಿ ಮಾಡುತ್ತಿದ್ದು ಇವರ ಕಮಿಷನ್ ಭ್ರಷ್ಟಾಚಾರದ ಮನಸ್ಥಿತಿಯನ್ನು ಪಾರಂಪರಿಕ ದಸರಾ ಕ್ರೀಡಾಕೂಟಕ್ಕೂ ಸಹ ವಿಸ್ತರಿಸಿದಂತೆ ಕಾಣುತ್ತಿದೆ.
ಸರ್ಕಾರ ಕೂಡಲೇ ಸಣ್ಣತನವನ್ನು ತೋರದೇ ದಸರಾದಲ್ಲಿ ಭಾಗಿಯಾಗುವ ಕ್ರೀಡಾಪಟುಗಳಿಗೆ ಸೂಕ್ತ ರೀತಿಯಲ್ಲಿ ಭತ್ಯೆ ಹಾಗೂ ನಗದು ಬಹುಮಾನವನ್ನು ನೀಡಿ ಅವರ ಪ್ರತಿಭೆಯನ್ನು ಗೌರವಿಸಬೇಕು ಮತ್ತು ಆ ಮೂಲಕ ಅವರ ಕ್ರೀಡಾ ಸಿದ್ಧತೆಯ ಶ್ರಮದ ಮಹತ್ವವನ್ನು ಅರಿಯಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ!
– ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ




