ಬಸವ ಜ್ಯೋತಿ ಐ ಬ್ಯಾಂಕ್‍ಗೆ ನೇತ್ರದಾನ
ಚಿತ್ರದುರ್ಗ: ಹಿರಿಯೂರು ತಹಶೀಲ್ದಾರರ ಕಚೇರಿ ದ್ವಿತೀಯ ದರ್ಜೆ ಸಹಾಯಕ ಶ್ರೀನಿವಾಸ ರೆಡ್ಡಿ ಅವರ ತಾಯಿ ಟಿ.ಗಂಗಮ್ಮ (75) ಅಕಾಲಿಕ ಮರಣ ಹೊಂದಿದ್ದು, ಕುಟುಂಬಸ್ಥರ ಸ್ವ ಇಚ್ಛೆಯಂತೆ ಅವರ ಎರಡು ಕಣ್ಣುಗಳನ್ನು ದಾನ ಮಾಡಲಾಗಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಕುಟುಂಬಸ್ಥರ ಸ್ವ ಇಚ್ಛೆಯಂತೆ ಅವರ ಎರಡು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿ ಶ್ರೀ ಬಸವ ಜ್ಯೋತಿ ಐ ಬ್ಯಾಂಕ್‍ಗೆ ಸಂಪರ್ಕ ಸಾಧಿಸಿ ಡಾ. ವೆನಿಲ್ಲಾ ಅವರ ಸಹಯೋಗದೊಂದಿಗೆ ಗಂಗಮ್ಮ ಕಣ್ಣುಗಳು ಅಂಧರ ಬಾಳಿಗೆ ಬೆಳಕು ನೀಡುವಂತಹ ಮಹತ್ತರ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯೂರು ಶಾಖೆಯ ಅಧ್ಯಕ್ಷ ಆರ್.ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿ, ದಿವಂಗತರ ಕುಟುಂಬದವರಿಗೆ ಸಾಂತ್ವನ ನೀಡುವ ಮೂಲಕ ಧೈರ್ಯ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯೂರು ತಹಶೀಲ್ದಾರ್ ರಾಜೇಶ್ ಕುಮಾರ್ ಕುಟುಂಬಸ್ಥರಿಗೆ ಪ್ರಶಂಸಾ ಪತ್ರ ವಿತರಿಸಿದರು. ಹಿರಿಯೂರು ಶಾಖೆಯ ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಐ ಬ್ಯಾಂಕ್ ನಿರ್ದೇಶಕ ವೀರೇಶ್, ವೆಂಕಟಸ್ವಾಮಿ ಹಾಗೂ ಗಂಗಮ್ಮ ಅವರ ಪುತ್ರ ಶ್ರೀನಿವಾಸ ರೆಡ್ಡಿ ಹಾಜರಿದ್ದರು.




