ಗರ್ಭಕಂಠ ಕ್ಯಾನ್ಸರ್ ತಡೆಗೆ ಮಹಿಳೆಯರಿಗೆ ಉಚಿತ HVP ಲಸಿಕೆ

9 months ago

ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ ಜಾಗತಿಕವಾಗಿ 6 ಲಕ್ಷ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಸೋಂಕು ಇರುವ ಹೊಸಪ್ರಕರಣಗಳು ವರದಿಯಾಗಿವೆ. ಮತ್ತು ಅವುಗಳಲ್ಲಿ ಅರ್ಧದಷ್ಟು ಮಹಿಳೆಯರು ಮೃತ್ಯುವಿಗೆ ಹತ್ತಿರವಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ಸಮಸ್ಯೆಯನ್ನು ಪರಿಹರಿಸಲು, ಬಹುಮುಖಿ ವಿಧಾನದ ಅಗತ್ಯವಿದ್ದು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ HPV ಲಸಿಕೆಗಳನ್ನೂ ನೀಡುವುದು ಕಡ್ಡಾಯ. ಆದರೆ ಮಾರುಕಟ್ಟೆಯಲ್ಲಿ ಈ ಒಂದು ಲಸಿಕೆ 10,000 ರೂಪಾಯಿಗೂ ಅಧಿಕ. ಹೀಗಾಗಿ ಅನೇಕ ಮಹಿಳೆಯರು ದುಬಾರಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಈ ದುಸ್ಸಾಹಸ ಮಹಿಳೆಯರು ಗರ್ಭಕಂಠ ಕ್ಯಾನ್ಸರ್ ನಿಂದಾಗಿ ಸಾವಿಗೆ ಕಾರಣವಾಗಬಹುದು.

ಹೀಗಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಹಾಗೂ ಅವರಿಗೆ ಉಚಿತ ಲಸಿಕೆ ನೀಡುವ ಉದ್ದೇಶದಿಂದ ಸಿ. ಬೈರೇಗೌಡ ಅವರ ಪುತ್ರಿ ಹಾಗೂ ವೃತ್ತಿಯಲ್ಲಿ ವೈದ್ಯರಾದ ಡಾ.ಮಂಗಳಾ ಪಾಟೀಲ್ ಅವರು ತಮ್ಮ ತಂದೆಯ ಸ್ಮರಣಾರ್ಥ ವೇಮಗಲ್ ನಲ್ಲಿ ಶಿಬಿರವನ್ನು ಏರ್ಪಡಿಸುವ ಮೂಲಕ ಅಗತ್ಯವಿದ್ದ ಮಹಿಳೆಯರಿಗೆ ಉಚಿತ HPV ಲಸಿಕೆ ನೀಡಿದರು.

Leave a Reply