ರಮೇಶ್ ಬಾಬು ಸೇರಿ ನಾಲ್ವರು ವಿಧಾನ ಪರಿಷತ್ ಗೆ

1 year ago

ಬೆಂಗಳೂರು: ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸೇರಿದಂತೆ ನಾಲ್ವರನ್ನು ಪರಿಷತ್ ಸದಸ್ಯರಾಗಿ ನಾಮ ನಿರ್ದೇಶನ ಮಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು, ಡಾ.ಆರತಿ ಕೃಷ್ಣ, ಎಫ್ ಹೆಚ್ ಜಕ್ಕಪ್ಪನವರ್, ಶಿವಕುಮಾರ್ ಕೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ.

ಜಕ್ಕಪ್ಪ ಮತ್ತು ಆರತಿ ಕೃಷ್ಣ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೋಟಾದ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದರೆ, ಇನ್ನೂ ಸಿಎಂ ಆಪ್ತ ಬಣದಿಂದ ರಮೇಶ್ ಬಾಬು ಮತ್ತು ಪತ್ರಕರ್ತ ಶಿವಕುಮಾರ್ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಜಕ್ಕಪ್ಪ ಮತ್ತು ಪತ್ರಕರ್ತ ಶಿವಕುಮಾರ್ ದಲಿತ ಬಲಗೈ ಸಮುದಾಯಕ್ಕೆ ಸೇರಿದವರು. ಶಿವಕುಮಾರ್ ಸದ್ಯ ಮೈಸೂರಿನಲ್ಲಿ ಇಂಗ್ಲೀಷ್ ದಿನಪತ್ರಿಕೆಯ ಹಿರಿಯ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply