ಒತ್ತಡದ ಜೀವನ, ಆಹಾರ ಪದ್ದತಿ ಕ್ರಮ ಸರಿಪಡಿಸಿಕೊಳ್ಳಿ, ಪೈಲ್ಸ್ ನಿಂದ ಮುಕ್ತರಾಗಿ: ಡಾ.ನಾಗರಾಜ್
ಬೆಂಗಳೂರು: ರಾಜಾಜಿನಗರದ ಬಸವೇಶ್ವರನಗರದಲ್ಲಿರುವ ಪುಣ್ಯ ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗೆ ಪೈಲ್ಸ್ ನಿಂದ ಮುಕ್ತರಾಗಲು ಉಚಿತ ಶಿಬಿರ ಆಯೋಜಿಸಲಾಗಿತ್ತು.
- ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಪದಚ್ಯುತಗೊಳಿಸಿ: ಸಿದ್ದರಾಮಯ್ಯ
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
ಉಚಿತ ಪೈಲ್ಸ್, ಫಿಶರ್, ಫಿಸ್ತುಲಾ ಚಿಕಿತ್ಸೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಪುಣ್ಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ||ನಾಗರಾಜ್ ಬಿ.ಪುಟ್ಟಸ್ವಾಮಿರವರು, ಡಾ||ಪುಣ್ಯವತಿ ಸಿ.ನಾಗರಾಜ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಉಚಿತ ಶಿಬಿರಕ್ಕೆ ಚಾಲನೆ ನೀಡಿದರು.
ಪೈಲ್ಸ್ ರೋಗದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ನಂತರ ಪೈಲ್ಸ್, ಫಿಶರ್, ಫಿಸ್ತುಲಾದಿಂದ ನರಳುತ್ತಿರುವ ನೂರಾರು ಜನರಿಗೆ ತಪಾಸಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ|| ನಾಗರಾಜ್ ಪುಟ್ಟಸ್ವಾಮಿ, ಮನುಷ್ಯ ಒತ್ತಡ ಜೀವನ, ಆಹಾರ ಪದ್ದತಿ, ಸೋಮಾರಿತನದಿಂದ ಪೈಲ್ಸ್ ರೋಗ ಬರುತ್ತದೆ. ಕಾಲಕಾಲಕ್ಕೆ ರೋಗಿಗಳು ಸಂಕೋಚವಿಲ್ಲದ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ರೋಗಕೂ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಬೇಕು. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ, ಇಲ್ಲದೇ ಹೋದರೆ ರೋಗ ಉಲ್ವಣವಾದರೆ ಪ್ರಾಣಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಸಾರ್ವಜನಿಕರು ಆರೋಗ್ಯವಂತರಾಗಿ ಬಾಳಲು ಪ್ರತಿದಿನ ವ್ಯಾಯಾಮ ಮತ್ತು ಉತ್ತಮ ಆಹಾರ ಪದ್ಧತಿ ಅನುಕರಿಸಬೇಕು. ಪೈಲ್ಸ್ ಆಪರೇಶನ್ ಸಂಪೂರ್ಣ ಉಚಿತವಾಗಿ ಮಾಡಲಾಗುವುದು. ನಮ್ಮ ಪುಣ್ಯ ಆಸ್ಪತ್ರೆ ವತಿಯಿಂದ ಸತತವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದೆ. ಪೈಲ್ಸ್ ಎಂದು ಭಯ, ಸಂಕೋಚ ಬಿಡಿ, ವೈದ್ಯರಿಂದ ಸಲಹೆ, ತಪಾಸಣೆ ಮಾಡಿಸಿಕೊಂಡು ಪೈಲ್ಸ್ ಮುಕ್ತರಾಗಿ ಬಾಳಿ ಎಂದರು.




