ಉಚಿತ ಆರೋಗ್ಯ ಶಿಬಿರ ಮತ್ತು ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಸಮಾರಂಭ

3 years ago

ನಾಲ್ಕು ಅಂಧ ಯುವಕರಿಂದ ರಕ್ತದಾನ

ಬೆಂಗಳೂರು: ವಿಜಯನಗರ ಬಂಟರ ಸಂಘ ಸಭಾಂಗಣದಲ್ಲಿ ಉತಿಷ್ಟ ಭಾರತ ಮತ್ತು ಉಮೇಶ್ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ರೋಟರಿ ಚಂದ್ರಲೇಔಟ್ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ವಿಕಲಚೇತನರಿಗೆ ವೀಲ್ ಚೇರ್ ವಿತರಣೆ, ರಕ್ತದಾನ ಶಿಬಿರ ಮತ್ತು ನರೇಂದ್ರ ಸಂವಾದ IAS, KAS, UPSC ಅಗ್ನಿ ವೀರರುಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ವಸತಿ ಸಚಿವ ವಿ.ಸೋಮಣ್ಣ, ರಾಜ್ಯ ಬಿಜೆಪಿ ಯುವ ಮುಖಂಡ ಡಾ. ಅರುಣ್ ಸೋಮಣ್ಣ, ಬೆಂಗಳೂರು ದಕ್ಷಿಣ ಜಿಲ್ಲಾ ಉಪಾಧ್ಯಕ್ಷ ಕೆ.ಉಮೇಶ್ ಶೆಟ್ಟಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿದರು.

ವಿ.ಸೋಮಣ್ಣ ಮಾತನಾಡಿ, ಮನುಷ್ಯ ಎಷ್ಟು ಶ್ರೀಮಂತ ಎನ್ನುವ ಕಾಲ ಬದಲಾಗಿದೆ. ಎಷ್ಟು ಆರೋಗ್ಯವಂತನಾಗಿ ಜೀವನ ಸಾಗಿಸುತ್ತಿದ್ದಾನೆ ಎನ್ನುವುದು ಮುಖ್ಯ. ಪ್ರತಿಯೊಬ್ಬರಿಗೂ ಉಚಿತ ಆರೋಗ್ಯ ಸೇವೆ ಲಭಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಯೋಜನೆಗಳಿಗೆ ಮಹತ್ವ ನೀಡಲಾಗಿದೆ ಎಂದರು.

ದಾಸರಹಳ್ಳಿಯಲ್ಲಿ 300 ಹಾಸಿಗೆ ಸಾಮರ್ಥ್ಯವುಳ್ಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಾರ್ವಜನಿಕರ ಸೇವೆಗೆ ಆರಂಭವಾಗಿದೆ. ಪಂತರಪಾಳ್ಯದಲ್ಲಿ 200 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸವಿಸ್ಮರಣೆಯಲ್ಲಿ ಹೆಸರು ಇಡಲಾಗಿದೆ ಎಂದು ಹೇಳಿದರು.

ಡಾ.ಅರುಣ್ ಸೋಮಣ್ಣ ಮಾತನಾಡಿ ಜೀವನದಲ್ಲಿ ಶೇಷ್ಠ ದಾನವೆಂದರೆ ರಕ್ತದಾನ. ಮನುಷ್ಯರಿಗೆ ಎಲ್ಲ ಅಂಗಾಂಗಳು ಮುಖ್ಯ. ವಯೋಸಹಜ ಮತ್ತು ಮಾನಸಿಕ ಒತ್ತಡ ಆನಾರೋಗ್ಯ ಪೀಡಿತರಾಗುವುದು ಸಹಜ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಧಾನಿ ನರೇಂದ್ರಮೋದಿಯವರ ದಿಟ್ಟ ನಿರ್ಧಾರದಿಂದ ಕೊರೋನ ಸಾಂಕ್ರಮಿಕ ರೋಗ ರಕ್ಷಣೆಗೆ ದೇಶ ಜನರಿಗೆ ಉಚಿತವಾಗಿ ಕೊವಿಡ್ ಲಸಿಕೆ ನೀಡಿ ದೇಶದ ಜನರ ಜೀವ ಕಾಪಾಡಿದರು ಎಂದರು.

2020ರಲ್ಲಿ ಆರಂಭವಾದ ರೆಫರಲ್ ಆಸ್ಪತ್ರೆಯಲ್ಲಿ 9000 ನವಜಾತ ಶಿಶುಗಳ ಜನನವಾಗಿದೆ. ಗರ್ಭಿರ್ಣಿ ಸ್ತ್ರೀಯರಿಗೆ ಮತ್ತು ಶಿಶುಗಳ ಆರೈಕೆ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿದೆ ಎಂದು ಹೇಳಿದರು.

ಕೆ.ಉಮೇಶ್ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿ ಪಕ್ಷ, ವಸತಿ ಸಚಿವ ವಿ.ಸೋಮಣ್ಣರವರ ಮಾರ್ಗದರ್ಶನ ಮತ್ತು ಸಹಕಾರದಿಂದ ರಾಜಕೀಯ ಹಾಗೂ ಸಮಾಜ ಸೇವೆ ಮಾಡಲು ನನಗೆ ಸ್ಪೂರ್ತಿ, ಪೇರಣೆಯಾಗಿದೆ. ನನ್ನನು ಗುರುತಿಸಿ ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದರು ಎಂದರು.

ದೇಶ ಮೊದಲು ಎಂಬ ದೇಶಭಕ್ತಿ ಮತ್ತು ಬಡವರ, ನೊಂದವರಿಗೆ ಆಸರೆಯಾಗಿ ನಿಲ್ಲಬೇಕು. ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆ ಬೀಡಬೇಕು, ನಾವೆಲ್ಲರು ಒಂದೇ ಎಂದು ಬಾಳಬೇಕು ಆಗ ಸಮ ಸಮಾಜ ನಿರ್ಮಾಣ ಸಾಧ್ಯ. ಆರೋಗ್ಯವೆ ಭಾಗ್ಯ ಎಂಬಂತೆ ಜನಸಾಮಾನ್ಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಮಾಡಲಾಗುತ್ತಿದೆ. ದೇಶ ನನಗೇನು ಕೊಟ್ಟಿದೆ, ಎನ್ನುವುದಕ್ಕಿಂತ ದೇಶಕ್ಕೆ ನನ್ನ ಕೊಡುಗೆ ಏನು ಎಂಬುದು ಪ್ರತಿಯೊಬ್ಬರು ಚಿಂತನೆ ಮಾಡಬೇಕು ಎಂದು ಹೇಳಿದರು.

ಬೃಹತ್ ಆರೋಗ್ಯ ತಪಾಸಣೆ ಶಿಬಿರದಲ್ಲಿ 10ಕ್ಕೂ ಹೆಚ್ಚು ನಗರದ ಪ್ರತಿಷ್ಟಿತ ಆಸ್ಪತ್ರೆಗಳಾದ ಜಯದೇವ ರಾಷ್ಟೋತ್ಥಾನ ಆಸ್ಪತ್ರೆ, ಶ್ರೀ ಶಂಕರ್ ಆಸ್ಪತ್ರೆ: ಕ್ಯಾನ್ಸರ್ ತಪಾಸಣೆ ಶ್ರೀ ಶಾರದಾ ಕಣ್ಣಿನ ಆಸ್ಪತ್ರೆ: ಕಣ್ಣಿನ ತಪಾಸಣೆ. ಸಕ್ರಾ ಆಸ್ಪತ್ರೆ, ಎಸ್.ಎಸ್. ಸ್ಪರ್ಷ್ ಆಸ್ಪತ್ರೆ: ಆದ್ಯ ಹೆಯರಿಂಗ್ ಸೊಲ್ಯೂಷನ್ಸ್, ಅಶಾ ಇ.ಎನ್.ಟಿ. ಸೆಂಟರ್, ಕಾಸ್ಕೋ ಸ್ಲಿನ್ ಆಸ್ಪತ್ರೆ, ಡಾ.ಮೋಹನ್ ಡಯಾಬಿಟಿಸ್ ಸ್ಪೆಷಾಲಿಟೀಸ್ ಸೆಂಟರ್, ಭಗವಾನ್ ಮಹಾವೀರ್ ವಿಕಲಾಂಗ ಸಹಾಯಕ ಸಮಿತಿ: ಕೃತಕ ಕೈ ಹಾಗೂ ಕಾಲು ಜೋಡಣೆಗೆ ನೋಂದಣಿ, ಸೆಂಟ್ ತೆರೇಸಾ ಆಸ್ಪತ್ರೆ: ಡಯಾಲಿಸಿಸ್ ರೋಗಿಗಳ ನೋಂದಣಿ, ಅಪ್ಟಿಕಲ್ ನೋಂದಣಿ ಮಳಿಗೆ ಭಾಗವಹಿಸಿದ್ದರು.

ಮಾಜಿ ಮಹಾನಗರ ಪಾಲಿಕೆ ಸದಸ್ಯರು ಮತ್ತು ವಿಜಯನಗರ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply