ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅಭಿವೃದ್ಧಿಯ ಕಡೆಗೆ ಗಮನವನ್ನು ಹರಿಸಲು ಮನವಿ.
ರಾಜ್ಯದ ಅತ್ಯಂತ ಪವಿತ್ರವಾದ ಧಾರ್ಮಿಕ ಸ್ಥಳ ಎಂದು ಪ್ರತಿದಿನ ಸಾವಿರಾರು ಭಕ್ತರು ತಮ್ಮ ಶ್ರದ್ಧೆಯಿಂದ ಪೂಜೆಯನ್ನ ಸಲ್ಲಿಸುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅಭಿವೃದ್ಧಿಯ ವಿಚಾರದಲ್ಲಿ ಗಮನವನ್ನು ಹರಿಸಬೇಕೆಂದು ಕೋರಿಕೊಳ್ಳುತ್ತೇನೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಇತ್ತೀಚಿನ ದಿನಗಳಲ್ಲಿ ನೆಲದ ಮೇಲೆ ಕುಳಿತು ಊಟವನ್ನು ಮಾಡುವಂತಹ ಸ್ಥಿತಿಯಲ್ಲಿ ಬಹಳಷ್ಟು ಮಂದಿ ಇಲ್ಲ. ಇಲ್ಲಿ ಬರುವ ಸಾವಿರಾರು ಭಕ್ತರು ದೇವರ ಪ್ರಸಾದಕ್ಕಾಗಿ ಪ್ರಸಾದ ನಿಲಯಕ್ಕೆ ಹೋದಂತಹ ಸಂದರ್ಭದಲ್ಲಿ ಅಲ್ಲಿ ನೆಲದ ಮೇಲೆ ಕುಳಿತು ಊಟವನ್ನು ಮಾಡಬೇಕಾಗಿದೆ. ಇದರಿಂದ ಹಿರಿಯ ನಾಗರಿಕರು ಕಾಲಿನ ಸಮಸ್ಯೆ ಇರುವವರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಆದುದರಿಂದ ಮಾನ್ಯ ಸಚಿವರು ಇಲ್ಲಿನ ಪ್ರಸಾದ ನಿಲಯವನ್ನ ಆಧುನಿಕರಣ ಗೊಳಿಸಿ ಲಿಫ್ಟ್ ಅಳವಡಿಸಿ, ಸಾಧ್ಯವಾಗುವುದಾದರೆ ಬೇರೆ ಸ್ಥಳದಲ್ಲಿಯೇ ಪ್ರಸಾದ ನಿಲಯವನ್ನು ನಿರ್ಮಿಸಿ ಅಲ್ಲಿ ಜನ ಡೈನಿಂಗ್ ಟೇಬಲ್ ವ್ಯವಸ್ಥೆಯಲ್ಲಿ ಪ್ರಸಾದವನ್ನು ಸ್ವೀಕರಿಸುವಂತೆ ಮಾಡಿದರೆ ಅನುಕೂಲವಾಗುತ್ತದೆ.
ಇಲ್ಲಿ ಇರುವಂತಹ ಹಲವಾರು ಮುಜರಾಯಿ ಇಲಾಖೆಯ ವಸತಿ ನಿಲಯಗಳು ತುಂಬಾ ಹಳೆಯದಾಗಿದೆ, ಗೋಡೆಗಳ ಬಣ್ಣವೂ ಮಾಸಿದೆ, ಕಿಟಕಿ, ಬಾಗಿಲುಗಳು, ಹಾಳಾಗಿದೆ ಇದರಿಂದಾಗಿ ಇಂತಹ ಕೊಠಡಿಗಳನ್ನು ಭಕ್ತಾದಿಗಳು ಬಯಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಹ ಸರ್ಕಾರ ಚಿಂತಿಸಿ ಹಳೆಯ ಕಟ್ಟಡಗಳನ್ನ ರಿಪೇರಿ ಮಾಡಿಸುವುದು ಹಾಗೂ ತುಂಬಾ ಹಾಳಾಗಿರುವ ಕಟ್ಟಡಗಳನ್ನ ಕೆಡವಿ ಹೊಸದಾಗಿ ಹೊಸತಿ ನಿಲಯಗಳನ್ನು ನಿರ್ಮಿಸುವಂತಹ ಕಾರ್ಯವನ್ನು ಮಾಡಬೇಕೆಂದು ಕೋರುತ್ತೇನೆ.
ಬರುವ ಭಕ್ತರ ಜನಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಇರುವುದಿಲ್ಲ, ಸಾರ್ವಜನಿಕ ಶೌಚಾಲಯಗಳನ್ನು ಮತ್ತಷ್ಟು ಸುವ್ಯವಸ್ಥಿತವಾಗಿ ನಿರ್ಮಿಸಿ ಕೊಡಬೇಕಾಗಿ ಕೋರುತ್ತೇನೆ.
ಈಗಾಗಲೇ ಚಾಮುಂಡಿ ಬೆಟ್ಟ, ಮಲೆ ಮಾದೇಶ್ವರ ಮತ್ತು ಕೆಲವು ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಿರುವ ರೀತಿಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಹಾಗೂ ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಾಲಯಕ್ಕೂ ಸಹ ಪ್ರಾಧಿಕಾರವನ್ನು ರಚಿಸಿದರೆ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು



