ಧಾರವಾಡ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ನೂತನ ನಗರ ಸಾರಿಗೆ ಬಸ್ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮವನ್ನು ನವೆಂಬರ್ 7, 2025 ರಂದು ಉದ್ಘಾಟನೆಯಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗ ಯೋಜನೆಯಡಿ ಧಾರವಾಡ ನೂತನ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಯೋಜನೆಯು ರೂ.1311 ಲಕ್ಷಗಳು (ಡಲ್ಟ್ ಸಹಯೋಹದೊಂದಿಗೆ 2024-25 ನೇ ಸಾಲಿನ ಅನುದಾನ) ವೆಚ್ಚದಲ್ಲಿ ಆಗಿದೆ. ನಿವೇಶವು ಒಟ್ಟು 00ಏ-24 ಗುಂಟಾ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಈ ನಿಲ್ದಾಣದಲ್ಲಿ ಪ್ರಸ್ತುತ ನೂತನ ಬಸ್ ನಿಲ್ದಾಣದಲ್ಲಿ ಒಟ್ಟು 4 ಪ್ಲಾಟ್ ಫಾರಂಗಳನ್ನು ಅಳವಡಿಸಿದೆ. ಪ್ರಯಾಣಿಕರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ, ನೂತನ ಶೌಚಾಲಯ ಹಾಗೂ ಒಳ ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳಾ ಪ್ರಯಾಣಿಕರಿಗೆ ವಿಶ್ರಾಂತಿ ಹಾಗೂ ಶಿಶುಪಾಲನೆ ಕೊಠಡಿ ನಿರ್ಮಿಸಲಾಗಿದೆ. ಸಂಚಾರ ನಿಯಂತ್ರಣ ಕೊಠಡಿ. ವಾಣಿಜ್ಯ ಮಳಿಗೆಗಳು ಮತ್ತು ಉಪಹಾರ ಗೃಹ, ಪ್ರಯಾಣಿಕರ ಅನುಕೂಲಕ್ಕೆ 2-ಲಿಪ್ಟ್ ಅಳವಡಿಸಲಾಗಿದೆ ಹಾಗೂ ವಿಶೇಷ ಚೇತನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಮುಖ್ಯ ಕಟ್ಟಡದ ಮೆಜನ್ಯಾನ್ ಮೊದಲನೆ ಅಂತಸ್ಥಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಸ್ಥಳಾವಕಾಶ ನೀಡಲಾಗಿದೆ. ಪ್ರಯಾಣಿಕರು ಕುಳಿತುಕೊಳ್ಳುವ ಅಸನಗಳ ವ್ಯವಸ್ಥೆ ಹಾಗೂ ಸಂಚಾರ ನಿಯಂತ್ರಕರ ವಿಚಾರಣಾ ಬಿಂದು ಇರುತ್ತದೆ. ಬಸ್ ನಿಲ್ದಾಣದ ಮುಂಭಾಗವನ್ನು ಅಭಿವೃದ್ಧಿಗೊಳಿಸಲಾಗಿದೆ.




