ಸಿದ್ದರಾಮಯ್ಯನವರು ಬ್ರಾಹ್ಮಣರ ಅಭಿವೃದ್ದಿ ಮಂಡಳಿಗೆ ಹೆಚ್ಚಿನ ಸಹಕಾರ ನೀಡಿದ್ದಾರೆ: ಅಸಗೋಡು ಜಯಸಿಂಹ

6 months ago

ತತ್ವಜ್ಞಾನಿಗಳ ದಿನಾಚರಣೆ

ಬ್ರಾಹ್ಮಣ ಅಭಿವೃದ್ದಿ ಮಂಡಳಿ ವತಿಯಿಂದ ಆಚಾರ್ಯತ್ರಯರ ಜಯಂತಿ

ಬ್ರಾಹ್ಮಣರು ದೈವವರ್ಗ, ಅವರಿಗೆ ಕಷ್ಟಗಳು ಬರುವುದಿಲ್ಲ ಎಂದು ತಿಳಿಯಬೇಡಿ: ದಿನೇಶ್ ಗುಂಡೂರಾವ್

ಬ್ರಾಹ್ಮಣರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು: ಬಬ್ಬೂರು ಸೇವಾ ಸಮಿತಿ ಸಭಾಂಗಣದಲ್ಲಿಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ವತಿಯಿಂದ ತತ್ವಜ್ಞಾನಿಗಳ ದಿನಾಚರಣೆ, ಆಚಾರ್ಯತ್ರಯರ ಜಯಂತ್ಯುತ್ಸವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮತ್ತು ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಮತ್ತು ಚಾಣಕ್ಯ ಆಡಳಿತ ತರಭೇತಿ ಯೋಜನೆ ಚಾಲನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಮಹಾಸಭಾದ ಮಾಜಿ ಅಧ್ಯಕ್ಷ ಅಶೋಕ್  ಹಾರನಹಳ್ಳಿ, ವ್ಯವಸ್ಥಾಪಕ ನಿರ್ದೇಶಕರಾದ ಕೆ.ದೀಪಶ್ರೀ  ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಾತಾಡಿದ ದಿನೇಶ್ ಗುಂಡೂರಾವ್, ಬ್ರಾಹ್ಮಣ ಸಮುದಾಯದ ಅಭಿವೃದ್ದಿಗೆ ನಮ್ಮ ಸರ್ಕಾರ ಕೈಗೊಂಡ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗಿದೆ. ಪ್ರತಿಯೊಂದು ಸಮಾಜದ ಬೆಳವಣಿಗೆಯಾಗಬೇಕು. ಬ್ರಾಹ್ಮಣ ಸಮಾಜದವರು ದೈವವರ್ಗ ಎಂದು ಅವರಿಗೆ ಕಷ್ಟಗಳು ಇಲ್ಲ ಎಂದು ತಿಳಿಯಬೇಡಿ ಎಂದರು.

ಬ್ರಾಹ್ಮಣ ಅಭಿವೃದ್ದಿಗೆ ಸರ್ಕಾರ ಸಹಕಾರ ನೀಡುತ್ತಿದೆ. ದಶಕಗಳ ಹೋರಾಟದ ಫಲದಿಂದ ಬ್ರಾಹ್ಮಣರ ಅಭಿವೃದ್ದಿ ಮಂಡಳಿ ಆರಂಭವಾಯಿತು. ನಮ್ಮ ಸರ್ಕಾರ ಬಂದ ಮೇಲೆ ಪ್ರತಿವರ್ಷ ಅನುದಾನ ನೀಡಿ, ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಬ್ರಾಹ್ಮಣರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ಯಾವ ಸರ್ಕಾರವೂ ಕೊಟ್ಟಿಲ್ಲ. ಪ್ರಬಲ ಜನಸಂಖ್ಯೆ ಇರುವವರಿಗೆ ಎಲ್ಲವು ಸಿಗುತ್ತದೆ ಎಂದರು.

ಬ್ರಾಹ್ಮಣರು ಸಂಕೋಚ ಪಡಬಾರದು. ಜಾತಿ ಸಮೀಕ್ಷೆ ಎಲ್ಲ ಸಮಾಜದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಿಂದ ಯೋಜನೆಗಳು ರೂಪಿಸಲು ವೈಜ್ಞಾನಿಕವಾಗಿ ಮಾನದಂಡವಾಗುತ್ತದೆ. ಹಿಂದುಳಿದ ವರ್ಗಗಳಿಗೆ ಸೇರಲು ಎಲ್ಲರು ಪೈಪೋಟಿ ಮಾಡುತ್ತಿದ್ದಾರೆ. ಬ್ರಾಹ್ಮಣ ಸಮುದಾಯದ ಸಮಸ್ಯೆಗಳಿಗೆ ಒಗ್ಗಟ್ಟಾಗಿ ಸಂಘಟಿತರಾಗಿ ಹೋರಾಟ ಮಾಡೋಣ ಎಂದು ಕರೆನೀಡಿದರು.

ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ, ಬ್ರಾಹ್ಮಣರಾಗಿ ಹುಟ್ಟಿರುವುದು ಭಾಗ್ಯ. ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಹಲವಾರು ಸಮಸ್ಯೆಗಳನ್ನು ಬ್ರಾಹ್ಮಣರು ಎದುರಿಸುತ್ತಿದ್ದಾರೆ. ಮೆರಿಟ್ ಮತ್ತು ಗುಣಮಟ್ಚವನ್ನು ಪರಿಗಣನೆ ಮಾಡಬೇಕು. ಇಲ್ಲದೇ ಹೋದರೆ ಪ್ರಗತಿ ಶೂನ್ಯವಾಗುತ್ತದೆ. ಗುಣಮಟ್ಟಕ್ಕೆ ಮತ್ಸರ ಇರಬಾರದು.

ಬ್ರಾಹ್ಮಣ ಸಮಾಜ ಯಾವಾಗಲೂ ಭಾರತಾಮಾತೆಯ ಸೇವೆ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣ ಸಮಾಜ ಮಂಚೂಣಿಯಲ್ಲಿ ಹೋರಾಟ ಮಾಡಿತ್ತು. ಬ್ರಾಹ್ಮಣರು ಬುದ್ದಿಶಕ್ತಿ, ಪ್ರಾಮಾಣಿಕ ಪ್ರಯತ್ನದಿಂದ ರಾಷ್ಟ್ರದ ಪ್ರಗತಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದರು.

9 ಬಾರಿ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿದ್ದೇನೆ. ನನ್ನ ಕ್ಷೇತ್ರದಲ್ಲಿ 2000 ಬ್ರಾಹ್ಮಣ ಸಮಾಜದ ಮತದಾರರು ಇದ್ದಾರೆ. ಬ್ರಾಹ್ಮಣರಲ್ಲಿ ಹಿಂದಿನಿಂದಲೂ ನಾಯಕತ್ವ ಮತ್ತು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಗುಣವಿದೆ. ನಮ್ಮ ಸಮಾಜದ ಬಹಳಷ್ಟು ಯುವಕರಲ್ಲಿ ನಿರುದ್ಯೋಗವಿದೆ. ಸ್ವಯಂ ಉದ್ಯೋಗಕ್ಕಾಗಿ ಬ್ರಾಹ್ಮಣ ಅಭಿವೃದ್ದಿ ಮಂಡಳಿ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಅಸಗೋಡು ಜಯಸಿಂಹ ಮಾತನಾಡಿ, ಆಚಾರ್ಯತ್ರಯರ ಸ್ಮರಣೆಯಲ್ಲಿ ವಿಪ್ರರ ಅಭಿವೃದ್ದಿಗೆ ಸ್ವಯಂ ಉದ್ಯೋಗಕ್ಕೆ ಹಲವಾರು ಯೋಜನೆಗಳು ಅನುಷ್ಠಾನ ಮಾಡಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಗುರುತಿಸುವ ಕಾರ್ಯ ಮಾಡಿ, ಪುರಸ್ಕಾರ ನೀಡಲಾಗುತ್ತಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಬ್ರಾಹ್ಮಣರ ಅಭಿವೃದ್ದಿ ಮಂಡಳಿಗೆ ಹೆಚ್ಚಿನ ಸಹಕಾರ ನೀಡಿದ್ದಾರೆ ಎಂದರು.

ಎಸ್.ರಘುನಾಥ್ ರವರು ಮಾತನಾಡಿ ಶಂಕರಚಾರ್ಯ, ಮಧ್ವಾಚಾರ್ಯ, ರಾಮಾನುಜರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಜೀವನ ಸಾಗಿಸಬೇಕು. ಬ್ರಾಹ್ಮಣ ಮಹಾಸಭಾ ವತಿಯಿಂದ 100 ಕೋಟಿ ರೂಪಾಯಿ ದತ್ತಿನಿಧಿ ಸ್ಥಾಪಿಸಲಾಗಿದೆ. ವಿಪ್ರರ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಯೋಜನೆಗೆ ದತ್ತಿನಿಧಿಯಿಂದ ಬಂದ ಬಡ್ಡಿಯಲ್ಲಿ ಬಳಕೆ ಮಾಡಲಾಗುವುದು ಎಂದರು.

ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ, ಡಾ.ಬೆಳವಾಡಿ ಮಂಜುನಾಥ್, ಡಾ.ಶೆಲ್ವಪಿಳ್ಳೈ  ಅಯ್ಯಂಗಾರ್ ಅವರಿಂದ ಉಪನ್ಯಾಸ ಏರ್ಪಡಿಸಲಾಗಿತ್ತು. ಬ್ರಾಹ್ಮಣ ಸಮುದಾಯದ ಸಾಧಕರಾದ ಬಿ.ವಿ.ಆಚಾರ್ಯ, ಡಾ.ಎನ್.ಅನಂತ್ ರಾಮನ್, ಡಾ.ಶ್ರೀನಾಥ್, ಆರ್.ವಿ.ಜಾಗೀರ್ ದಾರ್, ಕ್ಯಾಪ್ಟನ್ ಗೋಪಿನಾಥ್, ಬಿ.ಕೆ.ಅನಂತರಾವ್, ರಘೋತ್ತಮ್ ಕೊಪ್ಪರ್, ಗಂಗಮ್ಮ ಕೇಶವಮೂರ್ತಿ, ತಿವೇಣಿಬಾಯಿ ಎನ್.ಆಶ್ರೀತ್, ಜೆ.ಎನ್.ನರಸಿಂಹಮೂರ್ತಿ ನಾರಾಯಣ್, ರಾಘವ ವಿಷ್ಣು ಬಾಳೇರಿ, ಬಿ.ಎಸ್.ಜಯಪ್ರಕಾಶ್ ನಾರಾಯಣ ಅವರಿಗೆ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

Leave a Reply