ದೆಹಲಿ: ಮೋದಿ ಸರಕಾರ 3 ಕೃಷಿ ಮಸೂದೆಗಳನ್ನು ವಾಪಸ್ ಪಡೆದಿರುವ ನಿರ್ಧಾರ ತೆಗೆದುಕೊಂಡಿರುವುದಕ್ಕೆ ಸಿಪಿಐ(ಎಂ) ಸಂಯುಕ್ತ ಕಿಸಾನ್ ಮೋರ್ಚಾವನ್ನು ಮತ್ತು ಲಕ್ಷಾಂತರ ರೈತರನ್ನು ಹಾರ್ದಿಕವಾಗಿ ಅಭಿನಂದಿಸಿದೆ.
ಇದು ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದ ಐಕ್ಯ ರೈತ ಹೋರಾಟಕ್ಕೆ ಒಂದು ಭಾರೀ ವಿಜಯ ಎಂದು ಸಿಪಿಐ(ಎಂ) ವರ್ಣಿಸಿದೆ. ಮೋದಿ ಸರಕಾರದ ಎಲ್ಲ ಹೊಲಸು ತಂತ್ರಗಳು ಸೋಲು ಅನುಭವಿಸಿದವು, ಸರ್ವಾಧಿಕಾರಶಾಹಿ ಆಳ್ವಿಕೆ ಕೊನೆಗೂ ಕರಾಳ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲೇ ಬೇಕಾಗಿ ಬಂದಿದೆ ಎಂದಿದೆ.
ಸರ್ವಾಧಿಕಾರ ನಡೆಯುವುದಿಲ್ಲ ಎಂಬ ಪಾಠವನ್ನು ರೈತರು ಮೋದಿ ಸರಕಾರಕ್ಕೆ ಕಲಿಸಿದ್ದಾರೆ ಎಂದು ಹೇಳಿರುವ ಸಿಪಿಐ(ಎಂ), ಕಿಸಾನ್ ಹುತಾತ್ಮರನ್ನು ನೆನಪಿಸಿಕೊಂಡು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದೆ.




