ಮುಜರಾಯಿ ಇಲಾಖೆಯ ದೇಗುಲಗಳಿಗೆ ಗೃಹಜ್ಯೋತಿ ಯೋಜನೆ ವಿಸ್ತರಣೆ

2 years ago

#Extension #Grihajyothi #scheme #temples #Mujaraidepartment #Ramalingareddy

ಬಿಜೆಪಿಗೆ ಬೇಕಿರುವುದು ಧರ್ಮಶ್ರದ್ದೆಯಲ್ಲ, ಧರ್ಮದ ಹೆಸರಿನ ದ್ವೇಷದ ರಾಜಕಾರಣ: ಕೆಪಿಸಿಸಿ

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ದೇಗುಲಗಳಿಗೂ “ಗೃಹಜ್ಯೋತಿ” ಯೋಜನೆಯನ್ನು ವಿಸ್ತರಿಸಲು ಸಚಿವ Ramalinga Reddy ಅವರು ಕ್ರಮ ಕೈಗೊಂಡಿದ್ದಾರೆ ಎಂದು ಕೆಪಿಸಿಸಿ ಹೇಳಿದೆ.

ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್, ಕಾಂಗ್ರೆಸ್ ಸರ್ಕಾರ ಬಂದನಂತರ ರಾಜ್ಯದ ದೇವಾಲಯಗಳಿಗೆ ಹೊಸ ಕಾಯಕಲ್ಪ ದೊರೆಯುತ್ತಿದೆ ಎಂದು ಹೇಳಿದೆ.

ಧರ್ಮದ ಹೆಸರಲ್ಲಿ ರಾಜಕಾರಣ ಮಾಡುವ ಬಿಜೆಪಿ ತನ್ನ ಆಡಳಿತಾವಧಿಯಲ್ಲಿ ಐತಿಹಾಸಿಕ ದೇವಾಲಯಗಳನ್ನು ಒಡೆದು ಹಾಕಿದ ಕರಾಳ ಇತಿಹಾಸ ಹೊಂದಿದೆ. ನಮ್ಮ ಸರ್ಕಾರ ದೇವಾಲಯಗಳಿಗೆ ಸೌಲಭ್ಯಗಳನ್ನು ನೀಡುತ್ತಿದೆ, ಇದೇ ನಮ್ಮ ನೈಜ ಧಾರ್ಮಿಕತೆಗೂ ಬಿಜೆಪಿಯ ಡೋಂಗಿ ಹಿಂದುತ್ವಕ್ಕೂ ಇರುವ ವ್ಯತ್ಯಾಸ ಎಂದಿದೆ.

ಹಿಂದೆ ನಮ್ಮ ಸರ್ಕಾರ ಎ ಗ್ರೇಡ್ ದೇವಾಲಯಗಳ 20% ಆದಾಯವನ್ನು ಸಿ ಗ್ರೇಡ್ ದೇವಾಲಯಗಳ ಅಭಿವೃದ್ಧಿಗೆ ಬಳಸಲು ಯೋಜನೆ ರೂಪಿಸಿತ್ತು, ಆದರೆ ನಂತರ ಬಂದ ಬಿಜೆಪಿ ಸರ್ಕಾರ ಆ ತೀರ್ಮಾನವನ್ನು ಕಸದ ಬುಟ್ಟಿಗೆಸೆಯಿತು, ದೇವಸ್ಥಾನಗಳ ಅಭಿವೃದ್ಧಿಯನ್ನೂ ನಿಲ್ಲಿಸಿತು. ಬಿಜೆಪಿಗೆ ಬೇಕಿರುವುದು ಧರ್ಮಶ್ರದ್ದೆಯಲ್ಲ, ಧರ್ಮದ ಹೆಸರಿನ ದ್ವೇಷದ ರಾಜಕಾರಣ ಮಾತ್ರ ಎಂದು ಕಿಡಿಕಾರಿದೆ.

Leave a Reply