ಬಳ್ಳಾರಿ: ನಗರದ ಡಾ.ರಾಜ್‌ಕುಮಾರ್ ರಸ್ತೆಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಜರ್ಮನಿ ದೇಶದಲ್ಲಿ ಸಿಕ್ಕ ಸಿಂಹ ಮಾನವನ ಹಾಗೂ ಮಹಿಳೆಯ ಆಕೃತಿಗಳ ಪ್ರತಿರೂಪಗಳನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿರಿಸಲಾಗಿದೆ ಎಂದು ವಸ್ತು ಸಂಗ್ರಹಾಲಯ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಈಗಾಗಲೇ ವಸ್ತು ಸಂಗ್ರಹಾಲಯದಲ್ಲಿರುವ ಪ್ರಾಗೈತಿಹಾಸದ ಪಳೆಯುಳಿಕೆಗಳ ಅಪಾರ ಸಂಗ್ರಹದ ಜೊತೆಗೆ ಐರೋಪ್ಯ ದೇಶಗಳಲ್ಲಿ ಒಂದಾದ ಜರ್ಮನಿ ದೇಶದಲ್ಲಿ ಸಿಕ್ಕ ಸಿಂಹ ಮಾನವನ ಹಾಗೂ ಮಹಿಳೆಯ ಆಕೃತಿಗಳ ಪ್ರತಿರೂಪಗಳು ಈ ವಸ್ತು ಸಂಗ್ರಹಾಲಯ ಹೊಂದಿದ್ದು ಪ್ರದರ್ಶನಕ್ಕೆ ಇಡಲಾಗಿದೆ. ಸಿಂಹ ಮುಖದ ಮನುಷ್ಯ ಸ್ಟಾಡೆಲ್ಜಿಲ್ ಊರಿನ ಒಂದು ಗುಹೆಯಲ್ಲಿ ಸಿಕ್ಕಿದೆ. ಇದು ಸುಮಾರು 40,000 ವರ್ಷದ ಹಿಂದಿನದೆAದು ಅಂದಾಜಿಸಲಾಗಿದೆ. ವೀನಸ್ (ಮಾತೃದೇವತೆ) ಡಾಲ್ನಿ ವೇಸ್ಟೊನೈಸ್ ಎಂಬ ಪ್ರದೇಶದಲ್ಲಿ ಸುಮಾರು 31,000 ವರ್ಷಗಳ ಹಿಂದೆ ದೊರೆತಿದೆ ಎಂದು ತಿಳಿಸಿದ್ದಾರೆ.
ಇದರಿಂದ ಇಡೀ ಭಾರತದಲ್ಲಿಯೇ ಪ್ರಾಕ್ತನ ಇತಿಹಾಸಕ್ಕೆ ಮೀಸಲಿಟ್ಟಿರುವ ಏಕೈಕ ವಸ್ತು ಸಂಗ್ರಹಾಲಯವೆAದು ಖ್ಯಾತಿ ಹೊಂದಿದ ಬಳ್ಳಾರಿಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯವು ತನ್ನ ಮುಡಿಗೆ ಮತ್ತೊಂದು ಗರಿ ಏರಿಸಿಕೊಂಡಂತಾಗಿದೆ.
ಕೆಲ ತಿಂಗಳ ಹಿಂದೆ ಆಫ್ರಿಕಾ ದೇಶದಲ್ಲಿ ಸಿಕ್ಕ ಹಳೆ ಶಿಲಾಯುಗದ ಕಲ್ಲಿನ ಉಪಕರಣಗಳ ಮಾದರಿಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಟ್ಟ ಬೆನ್ನಲ್ಲೇ ಮತ್ತಷ್ಟು ಆಫ್ರಿಕಾದ ಓಲ್ಡಾನ್ ಹಾಗೂ ಜರ್ಮನಿ ಹಾಗೂ ಫ್ರಾನ್ಸ್ ದೇಶಗಳಲ್ಲಿ ಸಿಕ್ಕ ವಿವಿಧ ರೀತಿಯ ಕಲ್ಲಿನ ಉಪಕರಣದ 3 ಡಿ ನಮೂನೆಗಳು ಕೂಡ ಸಂಗ್ರಹಿಸಲಾಗಿದೆ. ಈ ಆಕೃತಿಗಳು ಹಾಗೂ ಉಪಕರಣಗಳನ್ನು ನ್ಯೂಯಾರ್ಕಿನ ನಮಿತಾ ಸುಗಂಧಿ ಹಾಗೂ ರವಿ ಕೋರಿಶೆಟ್ಟರ್ ಅವರು ಸಂಗ್ರಹಿಸಿದ್ದಾರೆ ಹೇಳಿದ್ದಾರೆ.
ಪುಣೆಯ ಡೆಕ್ಕನ್ ಕಾಲೇಜಿನವರು ಹುಣಸಿಗಿಯಲ್ಲಿ ಸಿಕ್ಕ ಹನ್ನೆರಡು ಲಕ್ಷ ವರ್ಷದ ಹಿಂದಿನ ಶಿಲಾ ಉಪಕರಣಗಳನ್ನು ಈ ವಸ್ತು ಸಂಗ್ರಹಾಲಯಕ್ಕೆ ದಾನವಾಗಿ ನೀಡಿದ್ದಾರೆ. ಈ ಉಪಕರಣಗಳನ್ನು ಡಾ.ಕೆ.ಪದ್ದಯ್ಯ, ಹಿರಿಯ ಸಂಶೋಧಕರು, ಕರ್ನಾಟಕದ ಯಾದಗಿರಿ ಜಿಲ್ಲೆಯ ಇಸಾಂಪುರ ಎಂಬ ಊರಿನಲ್ಲಿ ಉತ್ಖನನ ಮಾಡಿ ಸಂಗ್ರಹಿಸಿದ್ದರು. ರವಿ ಕೋರಿಶೆಟ್ಟರ್ ಅವರು ವಿದ್ಯಾರ್ಥಿಯಾಗಿ ಈ ಉತ್ಖನನದಲ್ಲಿ ಪಾಲ್ಗೊಂಡಿದ್ದರು.
ಈ ವಸ್ತು ಸಂಗ್ರಹಾಲಯದಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ, ವಿವಿಧ ಕಾಲಘಟ್ಟಗಳಲ್ಲಿ ದೊರೆತ ಹದಿನೈದು ಮಾನವನ ತಲೆಬುರುಡೆಗಳ ಮಾದರಿ ಪ್ರದರ್ಶನಕ್ಕೆ ಇಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಡಳಿತದ ಸಹಕಾರದೊಂದಿಗೆ ಪ್ರಾಕ್ತನ ತಜ್ಞರಾದ ಪ್ರೊ.ರವಿ ಕೋರಿಶೆಟ್ಟರ್ ನೇತೃತ್ವದಲ್ಲಿ ಸ್ಥಾಪಿಸಲಾದ ಈ ವಸ್ತು ಸಂಗ್ರಹಾಲಯದಲ್ಲಿ ಇರುವ ಅಪರೂಪದ ಸಂಗ್ರಹ ಇತಿಹಾಸ ಹಾಗೂ ಪ್ರಾಕ್ತನ ವಿಭಾಗದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಅರಿತುಕೊಳ್ಳಲು ಸಹಕಾರಿಯಾಗಿದೆ ಮತ್ತು ಶಾಲಾ ಮಕ್ಕಳಿಗೆ ಹಾಗೂ ಸಾಮಾನ್ಯ ಜನರಿಗೆ ಒಂದು ಆಕರ್ಷಣೆಯಾಗಿದೆ ಎಂದರು.
ಹೊಸದಾಗಿ ಸೇರ್ಪಡೆಯಾದ ಆಕೃತಿಗಳು ಹಾಗೂ ಶೀಲಾ ಉಪಕರಣಗಳ ಮಾದರಿಗಳಿಂದ ವಸ್ತು ಸಂಗ್ರಹಾಲಯದ ಮಹತ್ವ ಹಾಗೂ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಇರುವ ಸಂಗ್ರಹವನ್ನು ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆ ಮಾಡಲು ಇಚ್ಚಿಸುವ ಸಂಶೋಧನಾ ವಿದ್ಯಾರ್ಥಿಗಳಿಗೆ ಉಪಯೋಗಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಏಳು ಜನ ದೇಶ ಹಾಗೂ ವಿದೇಶಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.


