ಬೆಂಗಳೂರು: ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಸಾಕ್ಷ್ಯ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೆನ್‍ಡ್ರೈವ್‍ನ್ನು ಪ್ರದರ್ಶಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಾಡಿರುವ ವರ್ಗಾವಣೆ ದಂಧೆಯ ಆರೋಪದ ಪೆನ್‍ಡ್ರೈವ್ ಇದು. ಕಾಂಗ್ರೆಸ್‍ನವರು ಏಕೆ ಮೈ ಪರಚಿಕೊಳ್ಳುತ್ತಿದ್ದಾರೆ? ನಾನೇನು ಬೀದಿಯಲ್ಲಿದ್ದವನಾ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಕಚೇರಿಯಲ್ಲೇ ವರ್ಗಾವಣೆಗೆ ಸಂಬಂಧಿಸಿದಂತೆ ದಂಧೆ ನಡೆಯುತ್ತಿದೆ. ವೈಎಸ್‍ಟಿ ತೆರಿಗೆ ಪಾವತಿಸಬೇಕೆಂದೆಲ್ಲ ಕುಮಾರಸ್ವಾಮಿ ಆರೋಪ ಮಾಡಿದ್ದರು. ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆ, ಸಾಕ್ಷ್ಯಗಳನ್ನು ಒದಗಿಸುವಂತೆ ಕಾಂಗ್ರೆಸ್‍ನವರು ಆಗ್ರಹಿಸಿದರು.
ನಾನು ರೌಡಿಗಳಿಗೆ ಬಾಟಲ್ ತಂದುಕೊಟ್ಟವನಲ್ಲ. ನಾನು ಬ್ಲೂ ಫಿಲಂ ತೋರಿಸಿದವನಲ್ಲ. ನನ್ನ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಲಿ. ತಾಜ್‍ವೆಸ್ಟೆಂಡ್‍ನಲ್ಲಿ ಈಗಲೂ ರೂಮ್ ಇದೆ. ಇವರನ್ನು ಕೇಳಿ ರೂಮ್ ಮಾಡಬೇಕೇ? ಪ್ರತಿಯೊಂದಕ್ಕೂ ಕಾಂಗ್ರೆಸ್‍ನವರನ್ನು ಕೇಳಬೇಕೆ ಎಂದು ಹರಿಹಾಯ್ದರು.
ಸಮಯ ಬರಲಿ ಎಲ್ಲವನ್ನು ಹೇಳುತ್ತೇನೆ. ಕಾಂಗ್ರೆಸ್‍ನವರು ಮೈ ಪರಚಿಕೊಳ್ಳುತ್ತಿದ್ದಾರೆ. ನಮಗೇ ಮೈ ಪರಚಿಕೊಳ್ಳಬೇಡಿ ಎಂದು ಹೇಳಿದ್ದಾರೆ. ನಮಗೆ ಅಂಥ ಆತಂಕವೇನೂ ಇಲ್ಲ. ನಾವು ಸಮಚಿತ್ತರಾಗಿದ್ದೇವೆ. ಸೋತಿದಾಗಲೂ ಜನರ ಸೇವೆ ಮಾಡಿದ್ದೇವೆ ಎಂದು ಹೇಳಿದರು.
ನಮ್ಮ ಆಸ್ತಿ ಎಷ್ಟಿದೆ ಎಂದು ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುನ್ನ ಎಷ್ಟಿತ್ತು? ಈಗ ಎಷ್ಟಿದೆ ಎಂಬುದನ್ನು ತನಿಖೆ ಮಾಡಲಿ. ಸರ್ಕಾರ ಅವರದೇ ಇದೆಯಲ್ಲ. ತನಿಖೆ ಮಾಡಲಿ. ನಮ್ಮ ಸರ್ಕಾರದ ಅವಧಿಯನ್ನೂ ಸೇರಿಸಿ ತನಿಖೆ ಮಾಡಿಸುತ್ತಾರಂತೆ ಮಾಡಿಸಲಿ ಎಂದರು.
