ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆ ತಲುಪಬೇಕು: ಭೈರತಿ ಸುರೇಶ್

5 years ago

ಬೆಂಗಳೂರು: ರೇಷನ್, ಮಾಸ್ಕ್ ಕೊಡುವುದು ವಿಶೇಷವಲ್ಲ. ವಿಕಲಚೇತನರು ಸಹ ನಮ್ಮಂತೆ ಸಮಾಜವನ್ನು ನೋಡಬೇಕು ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೆಬ್ಬಾಳ ಶಾಸಕ ಭೈರತಿ ಸುರೇಶ್ ಹೇಳಿದರು.

ಮಾಜಿ ಮುಖ್ಯಮಂತ್ರಿಗ ಸಿದ್ದರಾಮಯ್ಯರವರ ಆಶಯದಂತೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸಿಗಬೇಕು. ವಿಕಲಚೇತನರು ಸಹ ಎಲ್ಲರಂತೆ ಜೀವನ ಸಾಗಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದ ಯೋಜನೆಗಳು ತಲುಪಬೇಕು. ಬಡವರು ಎಲ್ಲ ಜಾತಿಯಲ್ಲಿ ಇದ್ದಾರೆ. ಬಡವರ ಅಭಿವೃದ್ಧಿಯೆ ನಮ್ಮ ಗುರಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನಾವೆಲ್ಲರು ಒಂದೇ ಎಂದು ಸಾರುವ ಸಮಯ ಬಂದಿದೆ. ಕೋಮುವಾದಿಗಳು, ಜಾತಿವಾದಿಗಳಿಂದ ನಮ್ಮ ದೇಶ ರಕ್ಷಣೆ ಮಾಡಬೇಕಾದ ಸಂದರ್ಭ ಬಂದಿದೆ ಎಂದರು.

ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜಿದ್ ಮಾತನಾಡಿ, ಹುಟ್ಟು ಅಕಸ್ಮಿಕ, ಸಾವು ಖಚಿತ. ನಾವು ಮಾಡುವ ಕೆಲಸ ಶಾಶ್ವತ. ವಿಕಲಚೇತನರು ಸಾಮಾನ್ಯ ಜನರಂತೆ ಜೀವನ ಸಾಗಿಸಬೇಕು. ಅವರು ಎಲ್ಲರಂತೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಸರ್ಕಾರದ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ನಮ್ಮದು. ಶಾಸಕ ಭೈರತಿ ಸುರೇಶರವರ ನೇತೃತ್ವದಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರ, ಚಾಮುಂಡಿನಗರ ಟ್ರಲ್ಲಿಯಂ ಪಬ್ಲಿಕ್ ಸ್ಕೂಲ್ ಅವರಣದಲ್ಲಿ ಬಿ.ಬಿ.ಎಂ.ಪಿ. ಕಲ್ಯಾಣ ಇಲಾಖೆ ವತಿಯಿಂದ ವಿಕಲಚೇತರಿಗೆ 24 ತ್ರಿಚಕ್ರ ವಾಹನಗಳನ್ನು ಭೈರತಿ ಸುರೇಶ್, ಅಬ್ದುಲ್ ವಾಜಿದ್, ಮಾಜಿ ಪಾಲಿಕೆ ಸದಸ್ಯ ಆನಂದ್ ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹೆಬ್ಬಾಳ ಕಾಂಗ್ರೆಸ್ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

Leave a Reply