ಮೈಸೂರು: ಕೇಂದ್ರ ಸರ್ಕಾರದ ಕೆಲವು ನೀತಿಗಳಿಂದಾಗಿ ಪ್ರಾದೇಶಿಕತೆಗೆ ಧಕ್ಕೆ ಬರುತ್ತಿದೆ. ರಾಜ್ಯ ಪಟ್ಟಿಯಲ್ಲಿರುವ ಇಲಾಖೆಗಳು ಕೇಂದ್ರದ ಕೈಸೇರುತ್ತಿವೆ. ವಿಕೇಂದ್ರೀಕರಣ ಆಗುವ ಬದಲು ಕೇಂದ್ರೀಕರಣ ಆಗುತ್ತಿದೆ ಎಂದು ಮಾಧುಸ್ವಾಮಿ ಕೇಂದ್ರ ಸರ್ಕರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಐಕ್ಯತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ ವಿಷಯದ ಕುರಿತು ಮೈಸೂರಿನಲ್ಲಿ ನಡೆದ ವಿಚಾರದ ಸಂಕಿರಣದಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಸರ್ವಾಧಿಕಾರಿ ಧೋರಣೆ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರದ ಕೆಲವು ನೀತಿಗಳಿಂದಾಗಿ ಪ್ರಾದೇಶಿಕತೆಗೆ ಧಕ್ಕೆ ಬರುತ್ತಿದೆ. ರಾಜ್ಯ ಪಟ್ಟಿಯಲ್ಲಿರುವ ಇಲಾಖೆಗಳು ಕೇಂದ್ರದ ಕೈಸೇರುತ್ತಿವೆ. ವಿಕೇಂದ್ರೀಕರಣ ಆಗುವ ಬದಲು ಕೇಂದ್ರೀಕರಣ ಆಗುತ್ತಿದೆ ಎಂದರು.
ಜೊತೆಗೆ ವಿಚಾರ ಸಂಕಿರಣದಲ್ಲಿ ಹಾಜರಿದ್ದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಉದ್ದೇಶಿಸಿ, ಇಂತಹ ವಿಷಯಗಳನ್ನು ಆಧರಿಸಿ ಸಂಸತ್ತಿನಲ್ಲಿ ದನಿ ಎತ್ತಿ ಎಂದು ಆಗ್ರಹಿಸಿದರು.
ಒಟ್ಟಿನಲ್ಲಿ ಅವರು ಹೀಗೆ ಹೇಳುವ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ, ವಿವಾದಾಸ್ಪದ ಮೂರು ಕೃಷಿ ಕಾಯ್ದೆಗಳು, ನೀಟ್ ಮೊದಲಾದ ವಿಷಯಗಳ ಕುರಿತು ಸ್ವಪಕ್ಷೀಯರಲ್ಲೇ ಇರುವ ಭಿನ್ನಾಭಿಪ್ರಾಯಗಳು ಬಹಿರಂಗವಾದಂತಾಗಿದೆ.




