ಬೆಂಗಳೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಕಛೇರಿಗೆ ದಿಢೀರ್/ಅನಿರೀಕ್ಷಿತವಾಗಿ ದಿನಾಂಕ:17-01-2024 ರಂದು ಭೇಟಿ ನೀಡಿದ ಸಂಧರ್ಭದಲ್ಲಿ ಇ-ಆಫೀಸ್ ಗೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಿದ್ದರು.
ಈ ವೇಳೆ ಪೂರ್ಣ ಪ್ರಮಾಣದಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸದೇ ಇರುವುದನ್ನು ಗಮನಿಸಿದ್ದರು. ಆದ್ದರಿಂದ ಯಾವುದೇ ಇ-ಆಫೀಸ್ ತಂತ್ರಾಂಶದಲ್ಲಿ ಪ್ರಗತಿ ಸಾಧಿಸದೇ ಶೇಕಡಾ 100ರಷ್ಟು ಅನುಷ್ಠಾನಗೊಳಿಸಲಾಗಿದೆಯೆಂದು ಮದ್ದೂರು ತಾಲ್ಲೂಕು ಕಛೇರಿಯಿಂದ ತಪ್ಪು ಮಾಹಿತಿ ನೀಡಿದ್ದರು.
ಆದ್ದರಿಂದ ಸುಮಾರು ತಿಂಗಳು ಕಾಲಾವಕಾಶ ನೀಡಿದ್ದರೂ ಸಹ ಇ-ಆಫೀಸ್ ತಂತ್ರಾಂಶವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಯಾವುದೇ ಕ್ರಮವಹಿಸದೇ ಇರುವುದರಿಂದ ಚಂದ್ರಶೇಖರ್.ಎಂ.ಆಡಳಿತ ಶಿರಸ್ತೇದಾರ್ ತಾಲ್ಲೂಕು ಕಛೇರಿ ತಾಲ್ಲೂಕು, ಇವರನ್ನು ಸರ್ಕಾರಿ ಸೇವೆಯಿಂದ ಅಮಾನತು ಮಾಡಲಾಗಿದೆ.




