ನಾಳೆ ಎನ್.ಡಿ.ಎ ಮೈತ್ರಿಕೂಟದ ಸಿಎಂ ಆಗಲಿದ್ದಾರೆ ನಿತೀಶ್ ಕುಮಾರ್!

2 years ago

ಪಾಟ್ನಾ: ಬಿಹಾರದ ಜೆಡಿಯ, ಆರ್.ಜೆ.ಡಿ, ಕಾಂಗ್ರೆಸ್ ಮಹಾಮೈತ್ರಿ ಅಂತ್ಯವಾಗಿ ಮತ್ತೊಮ್ಮೆ ಸಿಎಂ ನಿತೀಶ್ ಕುಮಾರ್ ಎನ್.ಡಿ.ಎ ಮೈತ್ರಿಕೂಟದ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ವೇದಿಕೆ ಸಿದ್ಧಗೊಂಡಿದೆ.

2020ರ ಚುನಾವಣೆಯ ನಂತರ ಇದೀಗ ಮತ್ತೊಂದು ಸುತ್ತಿನ ಮೈತ್ರಿ ಬದಲಾವಣೆಗೆ ಬಿಹಾರ ಮತ್ತು ದೇಶ ಸಾಕ್ಷಿಯಾಗುವ ಅವಕಾಶ ಸಿಕ್ಕಿದೆ. ಎಲ್ಲ ಬಿಜೆಪಿ ಅಂದುಕೊಂಡಂತೆ ನಡೆದರೆ ನಾಳೆ ನಡೆಯುವ ಪದಗ್ರಹಣ ಸಮಾರಂಭದಲ್ಲಿ ಬಿಜೆಪಿಯ ಸುಶಿಲ್ ಮೋದಿ ಡಿಸಿಎಂ ಆಗಿ ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಆದರೆ ಈ ಬೆಳವಣಿಗೆಗಳ ಕುರಿತು ಜೆಡಿಯು ಮತ್ತು ಆರ್.ಜೆ.ಡಿ ಭಿನ್ನ ಹೇಳಿಕೆಗಳನ್ನು ನೀಡಿವೆ. ಜೆಡಿಯು ಕೆಲ ನಾಯಕರು ನಾಳೆ ಪದಗ್ರಹಣ ಸಮಾರಂಭ ನಡೆಯಲಿದೆ ಎಂದರೆ, ಆರ್.ಜೆ.ಡಿ ನಾಯಕರು ಅಂತಹ ಯಾವುದೇ ಬೆಳವಣಿಗೆಗಳೂ ನಡೆಯುವುದಿಲ್ಲ ಎಂದಿವೆ.

ಇವೆಲ್ಲ ಊಹಾಪೋಹಗಳಿಗೆ ನಾಳೆ ಮಧ್ಯಾಹ್ನದ ಒಳಗೆ ತೆರೆಬೀಳಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜವಾದಿ ನಾಯಕನೆಂದೇ ಹೆಸರಾಗಿರುವ ನಿತೀಶ್ ಕುಮಾರ್ ಇನ್ನೂ ಎಷ್ಟು ಬಾರಿ ಮೈತ್ರಿಕೂಟವನ್ನು ಬದಲಿಸುತ್ತಾರೆ ಎಂಬ ಪ್ರಶ್ನೆಗೆ ಪ್ರಜ್ಞಾವಂತರು ಉತ್ತರ ಹುಡುಕತೊಡಗಿದ್ದಾರೆ.

Leave a Reply