ಇ-ಆಫೀಸ್: ಕೊಡಗು ಉತ್ತಮ ಸಾಧನೆ: ಕೃಷ್ಣ ಬೈರೇಗೌಡ

2 years ago

ಕೊಡಗು: ಕೊಡಗಿನ ಎಲ್ಲಾ ತಾಲೂಕುಗಳಲ್ಲೂ ಇ-ಆಫೀಸ್ ಯಶಸ್ವಿಯಾಗಿ ಅನುಷ್ಠಾನಗೊಂಡಿರುವುದಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲೇ ಸಂಸತ ವ್ಯಕ್ತಪಡಿಸಿದರು.

ಕೊಡಗಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ನಾವು ಶೋಕಿಗಾಗಿ ಇ-ಆಫೀಸ್ ಜಾರಿಗೆ ತಂದಿಲ್ಲ. ಬದಲಾಗಿ ಸರ್ಕಾರಿ ಕಚೇರಿಯಲ್ಲಿ ಕಾಯುವ ಶೋಷಣೆಯಿಂದ ಜನಸಾಮಾನ್ಯರಿಗೆ ಮುಕ್ತಿ ನೀಡುವ ಹಾಗೂ ಆಡಳಿತ ಯಂತ್ರಕ್ಕೆ ವೇಗ ನೀಡುವ ಉದ್ದೇಶದಿಂದ ಇ-ಆಫೀಸ್ ಅನುಷ್ಠಾನಗೊಳಿಸಲಾಗಿತ್ತು. ಕೊಡಗಿನ ಇ-ಆಫೀಸ್ ತೃಪ್ತಿಕರವಾಗಿದೆ. ಅಲ್ಲದೆ, ಭಾಗಶಃ ಕಂದಾಯ ಕಚೇರಿಗಳ ಪೈಕಿ ಸಿಸಿಎಂಎಸ್ ಅನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿರುವ ಮೊದಲ ಜಿಲ್ಲೆ ಕೊಡಗು ಎಂದು ಅವರು ಶ್ಲಾಘಿಸಿದರು.

ಗ್ರಾಮ ಲೆಕ್ಕಿಗರಿಗೆ ಲ್ಯಾಪ್ ಟಾಪ್ ನೀಡಬೇಕು ಎಂದು ನಾವು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದೇವೆ. ಭಾಗಶಃ ಮುಂದಿನ ಬಜೆಟ್ ನಲ್ಲಿ ಇದನ್ನು ಘೋಷಿಸುವ ಸಾಧ್ಯತೆ ಇದೆ. ಹೀಗಾಗಿ ಶೀಘ್ರದಲ್ಲೇ ಗ್ರಾಮ ಲೆಕ್ಕಿಗರಿಗೆ ಲ್ಯಾಪ್ ಟಾಪ್ ಸಿಗಲಿದೆ ಎಂದು ತಿಳಿಸಿದರು.

Leave a Reply