ಡಿ.ಆರ್.ನಾಗರಾಜ್ – 67: ವಿಚಾರ ಸಂಕಿರಣ, ಕೃತಿ ಬಿಡುಗಡೆ 

5 years ago

ಬೆಂಗಳೂರು: ಕನ್ನಡದ ಮಹತ್ವದ ಸಾಂಸ್ಕೃತಿಕ ಚಿಂತಕ, ವಿಮರ್ಶಕ, ಅನುವಾದಕ ಡಿ.ಆರ್.ನಾಗರಾಜ್ ಅವರ 67ನೇ ಜನ್ಮದಿನದ ಪ್ರಯುಕ್ತ ಸಂಸ ಥಿಯೇಟರ್, ಕನ್ನಡ ಸಂಘ, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು ಸಹಯೋಗದಲ್ಲಿ ಡಿ.ಆರ್.ನಾಗರಾಜ್ – 67 ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣ ಹಾಗೂ ಕಿರಂ ಪ್ರಕಾಶನ ಪ್ರಕಟಣೆಯ ಪುಸ್ತಕ ಬಿಡುಗಡೆಯನ್ನೂ ಮಾಡಲಾಗುತ್ತದೆ.

ದಿನಾಂಕ 28-03-2021ರಂದು ಭಾನುವಾರ

ಸ್ಥಳ: ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ, ಕಾವೇರಿ ಭವನ ಹತ್ತಿರ, ಬೆಂಗಳೂರು – 560 001

ಬೆಳಿಗ್ಗೆ 11-00ಕ್ಕೆ

ಉದ್ಘಾಟನೆ: ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಕವಿಗಳು

ಅಧ್ಯಕ್ಷತೆ: ಪ್ರೊ. ಕೋಡದ ರಾಜಶೇಖರಪ್ಪ ಪ್ರಾಂಶುಪಾಲರು, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು

ಮುಖ್ಯ ಅತಿಥಿಗಳು: ಶೂದ್ರ ಶ್ರೀನಿವಾಸ್ ಹಿರಿಯ ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರು

ಡಾ. ಹೆಚ್. ಹನುಮಂತರಾಯಪ್ಪ ಮುಖ್ಯಸ್ಥರು, ಕನ್ನಡ ವಿಭಾಗ, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು

ಪ್ರಸ್ತಾವನೆ: ಡಾ. ಪ್ರದೀಪ್ ಮಾಲ್ಗುಡಿ ಪತ್ರಕರ್ತರು

ನಿರೂಪಣೆ : ಡಾ. ರುದ್ರೇಶ್ ಅದರಂಗಿ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು

ಮಧ್ಯಾಹ್ನ 12-30ಕ್ಕೆ

ವಿಚಾರ ಸಂಕಿರಣ : ಗೋಷ್ಠಿ-1

ವಿಷಯ : ಅವೈದಿಕ ಚಿಂತನೆಗಳು : ಡಿ.ಆರ್. ನಾಗರಾಜ್ ಮುನ್ನೋಟ

ಮಂಡನೆ : ಡಾ. ರೇಣುಕಾರಾಧ್ಯ ಹೆಚ್.ಎಸ್., ಉಪನ್ಯಾಸಕರು

ಪ್ರತಿಕ್ರಿಯೆ : ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ, ಅಧ್ಯಾಪಕರು

ಅಧ್ಯಕ್ಷತೆ : ಡಾ. ಸುರೇಶ ನಾಗಲಮಡಿಕೆ, ವಿಮರ್ಶಕರು

ಮಧ್ಯಾಹ್ನ 3-00 ವಿಚಾರ ಸಂಕಿರಣ : ಗೋಷ್ಠಿ-2

ವಿಷಯ : ದಲಿತ ಚಳುವಳಿಗೆ ಡಿ.ಆರ್. ಒಳನೋಟಗಳು

ಮಂಡನೆ : ಶ್ರೀ ನರಸಿಂಹಮೂರ್ತಿ ವಿ.ಎಲ್., ಸಂಶೋಧಕರು

ಪ್ರತಿಕ್ರಿಯೆ : ಡಾ. ನರಸಿಂಹಮೂರ್ತಿ ಹಳೇಹಟ್ಟಿ, ಸಂಶೋಧಕರು

ಅಧ್ಯಕ್ಷತೆ : ಡಾ. ರವಿಕುಮಾರ್ ನೀಹ, ಉಪನ್ಯಾಸಕರು

ಸಂಜೆ 5-00ಕ್ಕೆ

ಸವಿಗಾನ ಮಂಜು ಮತ್ತು ತಂಡದವರಿಂದ ಜಾನಪದ ಗಾಯನ

6-00ಕ್ಕೆ

ಕಿರಂ ಪ್ರಕಾಶನ ಹೊರತರುತ್ತಿರುವ ಡಾ. ಶಿವರಾಜ್ ಬ್ಯಾಡರಹಳ್ಳಿ ಅವರು ಸಂಪಾದಿಸಿರುವ ಡಾ. ಡಿ.ಆರ್. ನಾಗರಾಜ್ ಅವರ ಸಾಹಿತ್ಯ-ಸಂಸ್ಕೃತಿ, ವಿಮರ್ಶೆ, ಸಂಶೋಧನೆ, ಅನುವಾದ ಗ್ರಂಥಗಳ ಕುರಿತ ವಿಮರ್ಶಾ ಬರಹಗಳ ಸಂಕಲನ ‘ಅನನ್ಯ ಪ್ರತಿಭೆಯ ಪರಿ’ ಲೋಕಾರ್ಪಣೆ.

ಉದ್ಘಾಟನೆ: ಪ್ರೊ. ಜಾಫೆಟ್ ಸಂಸ್ಥಾಪಕ ಮಾಜಿ ಕುಲಪತಿಗಳು, ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಂಗಳೂರು

ಅಧ್ಯಕ್ಷತೆ: ಡಾ. ಸಿದ್ಧಲಿಂಗಯ್ಯ, ಹಿರಿಯ ಕವಿಗಳು ಮತ್ತು ಸಂಸ್ಕೃತಿ ಚಿಂತಕರು

ಪುಸ್ತಕ ಬಿಡುಗಡೆ: ಶ್ರೀ ಕೆ.ಆರ್. ರಮೇಶ್‌ಕುಮಾರ್‌, ಮಾಜಿ ಸಭಾಧ್ಯಕ್ಷರು, ವಿಧಾನಸಭೆ, ಹಾಲಿ ಶಾಸಕರು, ಶ್ರೀನಿವಾಸಪುರ ಕ್ಷೇತ್ರ

ಪುಸ್ತಕ ಕುರಿತು: ಅಗ್ರಹಾರ ಕೃಷ್ಣಮೂರ್ತಿ ಮಾಜಿ ಕಾರ್ಯದರ್ಶಿ ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಹಾಗೂ ಸಂಸ್ಕೃತಿ ಚಿಂತಕರು

ಮುಖ್ಯ ಅತಿಥಿಗಳು: ಡಾ. ಕಾಳೇಗೌಡ ನಾಗವಾರ, ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಪ್ರಸಿದ್ಧ ಲೇಖಕರು

ಡಾ.ಎಂ.ಎಸ್.ಆಶಾದೇವಿ, ಹಿರಿಯ ವಿಮರ್ಶಕರು

ಉಪಸ್ಥಿತಿ

ಶ್ರೀಮತಿ ಗಿರಿಜಾ ನಾಗರಾಜ್

ಡಾ. ಕರೀಗೌಡ ಬೀಚನಹಳ್ಳಿ ಹಿರಿಯ ಕಥೆಗಾರರು

ಡಾ. ಶಿವರಾಜ್ ಬ್ಯಾಡರಹಳ್ಳಿ ಪುಸ್ತಕದ ಸಂಪಾದಕರು

ನಿರೂಪಣೆ: ಶ್ರೀ ಶ್ರೀನಿವಾಸ ಜಿ. ಕಪ್ಪಣ್ಣ ರಂಗ ಸಂಘಟಕರು

ಕನ್ನಡದ ತಾತ್ವಿಕ ಶಕ್ತಿಯ ಶಿಖರ ಡಿ.ಆರ್.ನಾಗರಾಜ್

ಡಿ.ಆರ್. ನಾಗರಾಜ್ ಅವರ ಅಮೃತ ಮತ್ತು ಗರುಡ, ಶಕ್ತಿ ಶಾರದೆಯ ಮೇಳ, ಸಾಹಿತ್ಯ ಕಥನ, ಸಂಸ್ಕೃತಿ ಕಥನ, ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ, ಉರಿಚಮ್ಮಾಳಿಗೆ ಕೃತಿಗಳು ಕನ್ನಡಕ್ಕೆ ಹೊಸತನವನ್ನು ತಂದಿತ್ತ ಕೃತಿಗಳು.

ಸಾಹಿತ್ಯ ಕಥನ, ಸಂಸ್ಕೃತಿ ಕಥನ ಮತ್ತು ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ ಕೃತಿಗಳಲ್ಲಿ ನಿರ್ವಸಾಹತೀಕರಣದ ಚಿಂತನೆಗಳು ಅಡಗಿವೆ. ನಿರ್ವಸಾಹತೀಕರಣವೆಂದರೆ ಬ್ರಿಟಿಷ್ ಆಡಳಿತದ ಪರಿಣಾಮದಿಂದಾಗಿ ದೇಶೀ ಚಿಂತನೆಗಳಲ್ಲಿ ಅಡಗಿರುವ ವಸಾಹತುಶಾಹಿ ಚಿಂತನೆಯ ಮಾದರಿಯಿಂದ ಬಿಡುಗಡೆ. ಇಂತಹ ಅತ್ಯಂತ ಸಂಕೀರ್ಣ ಮತ್ತು ಅತ್ಯಂತ ಅಗತ್ಯವಾದ ವಿಷಯಗಳ ಕುರಿತು ಚಿಂತನೆ ನಡೆಸಿರುವುದರಿಂದಾಗಿಯೇ ಡಿ.ಆರ್ ನಾಗರಾಜ್ ಪ್ರಮುಖ ಚಿಂತಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಕನ್ನಡಕ್ಕೆ ಮಾತ್ರ ಸೀಮಿತರಲ್ಲ. ವಸಾಹತೋತ್ತರ ಜಾಗತಿಕ ಚಿಂತಕರ ಪಟ್ಟಿಯಲ್ಲಿ ಡಿ.ಆರ್ ನಾಗರಾಜ್ ಅವರಿಗೂ ಸ್ಥಾನವಿದೆ. ಜಾಗತಿಕ ಮಟ್ಟದಲ್ಲಿ ಅವರು ಮಂಡಿಸಿದ ಪ್ರಬಂಧಗಳು ಮತ್ತು ಚಿಂತನೆಗಳು ಕನ್ನಡ ಚಿಂತಕ ವಲಯ ಮತ್ತು ಬೌದ್ಧಿಕ ವಲಯದ ಕುರಿತು ದೇಶವಿದೇಶಗಳ ಚಿಂತಕರು ಗಮನ ಹರಿಸುವಂತೆ ಮಾಡಿದವು. ಷೆಲ್ಡನ್ ಪೊಲಾಕ್ ರಂತಹ ವಿದ್ವಾಸರನ್ನು ಕನ್ನಡದ ಮೊಟ್ಟಮೊದಲ ಉಪಲಬ್ದ ಗ್ರಂಥ ಶ್ರೀವಿಜಯನ ಕವಿರಾಜಮಾರ್ಗ ಕೃತಿಯ ಕುರಿತು ಆಸಕ್ತಿ ಮೂಡಿಸಿ, ಅದನ್ನು ಓದುವಂತೆ ಮಾಡಿದ ಶ್ರೇಯಸ್ಸು ಡಿ.ಆರ್.ನಾಗರಾಜ್ ಅವರಿಗೆ ಸಲ್ಲುತ್ತದೆ.

ಸ್ಥಳೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ರಾಜಕಾರಣ, ಸಾಹಿತ್ಯ, ಸಂಸ್ಕೃತಿ, ಸಂಶೋಧನೆ, ಆರ್ಥಿಕತೆ, ಸಾಮಾಜಿಕ ವಿಚಾರಗಳನ್ನು ಸಮರ್ಥವಾಗಿ ವಿಶ್ಲೇಷಿಸುವುದು ಡಿ.ಆರ್. ಅವರ ವೈಶಿಷ್ಟ್ಯಗಳಲ್ಲಿ ಒಂದು. ಆಧುನಿಕೋತ್ತರವಾದ (ಪೋಸ್ಟ್ ಮಾಡರ್ನಿಸ್ಮ್) ತರುವ ಸವಾಲುಗಳನ್ನು ಕನ್ನಡದಲ್ಲಿ ಮೊಟ್ಟಮೊದಲು ಚರ್ಚೆಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಜನಪ್ರಿಯ ಕಲೆಯಾದ ಸಿನಿಮಾವನ್ನು ಬಹುತೇಕರು ಅವಜ್ಞೆಗೆ ಒಳಪಡಿಸಿದ್ದ ಸಮಯದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕಾದ ತುರ್ತು ಇದೆ ಎಂಬ ಸಂಗತಿಯನ್ನು ಅವರ ಸಾಹಿತ್ಯ ಕಥನ ಕೃತಿಯಲ್ಲಿ ಕಾಣಬಹುದು.

ಡಿ.ಆರ್.ನಾಗರಾಜ್ ಅವರ ವಿನೂತನ ಒಳನೋಟಗಳನ್ನು ಒಳಗೊಂಡಿರುವ ಚಿಂತನೆಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಸಂಸ ಥಿಯೇಟರ್ ಕಾರ್ಯಕ್ರಮವನ್ನು ರೂಪಿಸುತ್ತಿದೆ. ಬೆಂಗಳೂರು ಸೇರಿದಂತೆ ನಾಡಿನ ಉದ್ದಗಲಕ್ಕೂ ಅವರ ಚಿಂತನೆಗಳನ್ನು ಜನರಿಗೆ ತಲುಪಿಸುವುದು, ಆ ಮೂಲಕ ಕನ್ನಡ ಚಿಂತನೆಯ ವಲಯವನ್ನು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಹಿರಿಯರು, ಡಿ.ಆರ್. ಒಡನಾಡಿಗಳು ಮಾತ್ರವಲ್ಲದೆ, ಡಿ.ಆರ್. ಅವರನ್ನು ನೋಡದೆ, ಅವರೊಂದಿಗೆ ಒಡನಾಡದೆ ಕೇವಲ ಅವರ ಕೃತಿಗಳ ಮೂಲಕ ಮಾತ್ರ ಪರಿಚಯ ಇರುವ ಯುವ ವಿದ್ವಾಂಸರು, ಸಂಶೋಧಕರನ್ನೂ ಒಳಗೊಳ್ಳಲು ಉದ್ದೇಶಿಸಲಾಗಿದೆ.

ಡಾ. ಪ್ರದೀಪ್ ಮಾಲ್ಗುಡಿ, ಪತ್ರಕರ್ತ

Leave a Reply