ಪಾಕಿಸ್ತಾನ 1970ರ ಅವಧಿಯಲ್ಲಿ ಮನುಷ್ಯತ್ವ ಮರೆತು ರಾಕ್ಷಸರಂತೆ ವರ್ತಿಸುತ್ತಿದ್ದ ಕಾಲದಲ್ಲಿ ಅಂದು ಪ್ರಧಾನಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರು ಅಮೆರಿಕಾದ ಅಧ್ಯಕ್ಷರ ಒತ್ತಡವನ್ನು ಲೆಕ್ಕಿಸದೆ 1971ರಲ್ಲಿ ಪಾಕಿಸ್ತಾನದ ವಿರುದ್ಧ ಸಮರವನ್ನ ಸಾರಿ ಅವರ ಹುಟ್ಟು ಅಡಗಿಸಿದರು. ತದನಂತರ ಪಾಕಿಸ್ತಾನವನ್ನು ವಿಭಜನೆ ಮಾಡಿ ಬಾಂಗ್ಲಾದೇಶದ ರಚನೆಗೆ ಕಾರಣಕರ್ತರಾದರು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಈ ಸಂದರ್ಭದಲ್ಲಿ ಅಂದಿನ ಕೇಂದ್ರ ಸರ್ಕಾರ ಮತ್ತು ನಮ್ಮ ದೇಶದ ರಕ್ಷಣಾ ಇಲಾಖೆ ಪರಿಣಾಮಕಾರಿಯಾಗಿ ಮಾರ್ಗಗಳನ್ನು ಅನುಸರಿಸಿದ ಕಾರಣದಿಂದ ಪಾಕಿಸ್ತಾನ ಬಾಲ ಮುದುರಿಕೊಂಡು ಬಿದ್ದು ಭಾರತಕ್ಕೆ ಶರಣಾಯಿತು.
ಪಾಕಿಸ್ತಾನ ಭಯೋತ್ಪಾದಕರ ರಕ್ಷಿಸುತ್ತ ಭಾರತದ ವಿರುದ್ಧ ಪದೇಪದೇ ಸಂಚುರೂಪಿಸುತ್ತಿದೆ. ಈಗ ಕಾಶ್ಮೀರದಲ್ಲಿ ಪ್ರವಾಸಿಗರನ್ನ ಅತ್ಯಂತ ಅಮಾನುಷವಾಗಿ ಅವರ ಕುಟುಂಬದ ಸದಸ್ಯರ ಮುಂದೆ ಹತ್ಯೆಯನ್ನು ಮಾಡಿರುವುದು ಅತ್ಯಂತ ನೋವಿನ ಘಟನೆಯಾಗಿರುತ್ತದೆ.
ಕೇಂದ್ರ ಸರ್ಕಾರ ಕೂಡಲೇ ತಮ್ಮ ಗುಪ್ತಚರ ಇಲಾಖೆಯನ್ನ ಮತ್ತಷ್ಟು ಚುರುಕು ಗೊಳಿಸಬೇಕು. ಆಧುನಿಕ ತಂತ್ರಜ್ಞಾನವನ್ನು ಬಳಸಿ ನಾಗರಿಕರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಆಂತರಿಕ ಭದ್ರತೆ ಮತ್ತು ಗುಪ್ತಚರ ಇಲಾಖೆಯ ಪದೇಪದೇ ವೈಫಲ್ಯದ ವಿಚಾರದಲ್ಲಿ ಗಂಭೀರವಾದ ಚಿಂತನೆಗಳು ನಡೆಯಬೇಕು.
ಭಾರತ ದೇಶದ ಜನರ ಸ್ವಾಭಿಮಾನ ಮತ್ತು ಸಮಗ್ರತೆಯನ್ನ ಪ್ರಶ್ನಿಸುವಂತಹ ಘಟನೆಯಾಗಿದೆ. ಈ ಸಂದರ್ಭದಲ್ಲಿ ಇಡೀ ಭಾರತ ದೇಶ ಕೇಂದ್ರ ಸರ್ಕಾರದ ಜೊತೆಗೆ ನಿಲ್ಲುತ್ತದೆ. ಕೇಂದ್ರ ಸರ್ಕಾರ ಕೂಡಲೇ ಪಾಕಿಸ್ತಾನದ ವಿರುದ್ಧ ಮತ್ತು ಭಯೋತ್ಪಾದಕರ ವಿರುದ್ಧ ಎಂತಹದೇ ಕಠಿಣ ಕ್ರಮಗಳನ್ನು ಕೈಗೊಂಡರು ಪ್ರತಿಯೊಬ್ಬ ಭಾರತೀಯರು ಅದಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ.
ಪದೇಪದೇ ಕಾಶ್ಮೀರದಲ್ಲಿ ಇಂತಹ ಕೃತ್ಯಗಳು ನಡೆದು ನಮ್ಮ ದೇಶದ ಸೈನಿಕರು ನಾಗರೀಕ ಬಂಧುಗಳು ಮತ್ತು ಪ್ರವಾಸಿಗರು ಪ್ರಾಣವನ್ನ ಕಳೆದುಕೊಳ್ಳುತ್ತಿರುವುದು ಅತ್ಯಂತ ದುಃಖದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣವಾದಂತಹ ಮಾರ್ಗವನ್ನು ಅನುಸರಿಸಬೇಕು.
ಗಡಿಯಲ್ಲಿ ಭಯೋತ್ಪಾದಕರು ದೇಶದ ಒಳಗೆ ನುಸುಳಲು ಹೇಗೆ ಸಾಧ್ಯವಾಗುತ್ತಿದೆಯೋ ತಿಳಿಯುತ್ತಿಲ್ಲ ಅಲ್ಲಿ ಲೋಪಗಳಿದ್ದರೆ ಅದರ ಕಡೆಯೂ ತುರ್ತಾಗಿ ಗಮನಹರಿಸಬೇಕಾಗಿದೆ.
ನೇರವಾಗಿ ಭಾರತದ ಜೊತೆ ಯುದ್ಧಕ್ಕೆ ನಿಲ್ಲಲು ಶಕ್ತಿ ಇಲ್ಲದ ಮತ್ತು ಯೋಗ್ಯತೆ ಇಲ್ಲದ ಪಾಕಿಸ್ತಾನ ಇಂತಹ ಕುತಂತ್ರಗಳ ಮೂಲಕ ಭಾರತ ದೇಶದಲ್ಲಿ ಅಶಾಂತಿಯನ್ನು ಮೂಡಿಸುವಂತಹ ಹೀನ ಕೃತ್ಯವನ್ನು ಮಾಡುತ್ತಿವೆ. ಇವರಿಗೆ ಸರಿಯಾದ ಪಾಠ ಕಲಿಸಲು ಇದು ಸಕಾಲವಾಗಿದೆ. ಯಾವುದೇ ರೀತಿಯ ಅಂತರಾಷ್ಟ್ರೀಯ ಮಟ್ಟದ ಒತ್ತಡಗಳಿಗೂ ಮಣಿಯದೆ ಕಠಿಣ ಕ್ರಮಗಳು ತುರ್ತಾಗಿ ಆಗಲೇ ಬೇಕಾಗಿದೆ.
ಕರ್ನಾಟಕ ಸರ್ಕಾರ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಸಕಾಲದಲ್ಲಿ ತುರ್ತಾಗಿ ಕಾಶ್ಮೀರದಲ್ಲಿ ಪ್ರಾಣವನ್ನು ಕಳೆದುಕೊಂಡಿರುವ ಕನ್ನಡಿಗರ ವಿಚಾರದಲ್ಲಿ ಕ್ರಮವನ್ನು ಕೈಗೊಂಡು ಸಚಿವರಾದ ಸಂತೋಷ್ ಲಾಡ್ ರವರನ್ನು ಮತ್ತು ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ನಿಯೋಜಿಸಿರುವುದು ಸಹ ಸಮಾಧಾನಕರವಾದಂತಹ ಸಂಗತಿಯಾಗಿದೆ. ಕಾಶ್ಮೀರದಲ್ಲಿ ಪ್ರಾಣ ಕಳೆದುಕೊಂಡಿರುವ ಕನ್ನಡಿಗರ ಕುಟುಂಬಕ್ಕೆ ಇಂತಹ ಅಪಾರ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತಾ ಸಮಸ್ತ ಕರ್ನಾಟಕದ ಜನತೆ ಅವರ ದುಃಖದ ಸಂದರ್ಭದಲ್ಲಿ ಅವರ ನೋವನ್ನು ಹಂಚಿಕೊಳ್ಳುತ್ತಿದ್ದೇವೆ.
– ಕೆ ಎಸ್ ನಾಗರಾಜ್, ಬೆಂಗಳೂರು



