ಪರಿಹಾರಕ್ಕೆ ಆದೇಶ
ಧಾರವಾಡ: ಧಾರವಾಡದ ಕುಮಾರ ವ್ಯಾಸ ದೇಸಾಯಿ ಇಂಜನೀಯರ್ ವಿದ್ಯಾರ್ಥಿಯಾಗಿದ್ದು ತನ್ನ ವ್ಯಾಸಂಗಕ್ಕೆ ಅನುಕೂಲವಾಗಲೆಂದು ಎದುರುದಾರರ ಮಳಿಗೆಯಲ್ಲಿ ಡೆಲ್ ಕಂಪನಿಯ ಲ್ಯಾಪಟಾಪನ್ನು ದಿ:23/12/2021ರಂದು ರೂ.67,990/- ಮತ್ತು ಹೆಚ್ಚಿನ ಒಂದು ವರ್ಷ ವಾರಂಟಿಗೆ ರೂ.1,999/- ಒಟ್ಟು ರೂ.69,989/- ಪಾವತಿಸಿ ಖರೀದಿಸಿದ್ದರು. ಖರೀದಿಯ 3 ತಿಂಗಳ ಒಳಗಾಗಿ ಲ್ಯಾಪ್ ಟಾಪ್ನಲ್ಲಿ ದೋಷóóಗಳು ಕಂಡುಬಂದಿದ್ದು ಅದನ್ನು ಎದುರುದಾರರು ಸರಿಪಡಿಸಿ ಕೊಟ್ಟಿರುತ್ತಾರೆ. ಮತ್ತೆ ಪದೇ ಪದೇ ಅದರಲ್ಲಿ ನ್ಯೂನ್ಯತೆಗಳು ಕಂಡುಬಂದಿದ್ದರಿಂದ ತನಗೆ ದೋಷಪೂರಿತ ಲ್ಯಾಪ್ ಟಾಪ್ನ್ನು ಕೊಟ್ಟು ಎದುರುದಾರರು ಅದನ್ನು ಸರಿಯಾಗಿ ರಿಪೇರಿ ಮಾಡಿಕೊಡದೇ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ/ವಿದ್ಯಾರ್ಥಿ ದಿ:06/09/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಬೋಳಶೆಟ್ಟಿ ಮತ್ತು ಪ್ರಭು. ಹಿರೇಮಠ ಸದಸ್ಯರು, ದೂರುದಾರರು ತಮ್ಮ ಪ್ರಕರಣ ಸಾಬೀತು ಪಡಿಸಲು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿದ ಆಯೋಗ ದೂರುದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ಲ್ಯಾಪ್ ಟಾಪ್ನಲ್ಲಿ ಖರೀದಿಸಿದ 3 ತಿಂಗಳ ಒಳಗೆ ವಾಯ್ಫೈ ಸಿಸ್ಟಮ್ ತೊಂದರೆ, ಮತ್ತು ಬ್ಯಾಟರಿ ನ್ಯೂನ್ಯತೆ ಇತರೇ ಸಮಸ್ಯೆಗಳು ಇರುವುದು ಕಂಡುಬಂದಿರುತ್ತದೆ. ಅಲ್ಲದೇ ಆಯೋಗ ನೇಮಿಸಿದ ಕಮೀಷನರ್ ರಿಪೋರ್ಟನಲ್ಲಿಯೂ ಸಹ ಲ್ಯಾಪ್ ಟಾಪ್ನ ನ್ಯೂನ್ಯತೆಗಳ ಬಗ್ಗೆ ಪ್ರಸ್ತಾಪ ಇರುತ್ತದೆ. ಈ ಎಲ್ಲ ಮೇಲಿನ ಅಂಶಗಳನ್ನು ಅವಲೋಕಿಸಿದಾಗ ಎದುರುದಾರರು ಕೊಟ್ಟಂತಹ ಲ್ಯಾಪ್ ಟಾಪ್ ದೋಷಯುಕ್ತವಾಗಿರುವುದು ಕಂಡುಬರುತ್ತದೆ. ಎದುರುದಾರರು ದೂರುದಾರನಿಗೆ/ಗ್ರಾಹಕನಿಗೆ ದೋಷಯುಕ್ತ ಲ್ಯಾಪ್ ಟಾಪ್ನ್ನು ಮಾರಾಟ ಮಾಡಿ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಅಂತಾ ಅಭಿಪ್ರಾಯಪಟ್ಟು ತೀರ್ಪು ನೀಡಿ ದೂರುದಾರರಿಗೆ ಹಳೆಯ ಲ್ಯಾಪ್ಟಾಪ್ ಪಡೆದುಕೊಂಡು ಅದೇ ಮಾಡಲ್ನ ನೂತನ ಲ್ಯಾಪ್ ಟಾಪ್ನ್ನು ಒಂದು ತಿಂಗಳ ಒಳಗೆ ಕೊಡಲು ಆದೇಶಿಸಿದೆ. ತಪ್ಪಿದ್ದಲ್ಲಿ ಲ್ಯಾಪ್ ಟಾಪ್ನ ಮೊತ್ತ ರೂ. 69,989/- ದಿ:19/05/2022 ರಿಂದ ಶೇ8% ರಮತೆ ಬಡ್ಡಿ ಸಮೇತ ಪೂರ್ತಿ ಹಣ ಸಂದಾಯವಾಗುವವರೆಗೆ ದೂರುದಾರ/ವಿದ್ಯಾರ್ಥಿ ವ್ಯಾಸ್ ಇವನಿಗೆ ಕೊಡಲು ಆಯೋಗ ನಿರ್ದೇಶಿಸಿದೆ ಜೊತೆಗೆ ರೂ.25,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ರೂ.10,000/- ಗಳನ್ನು ದೂರುದಾರರಿಗೆ ಕೊಡುವಂತೆ ಬೆಂಗಳೂರಿನ ಡೆಲ್ ಕಂಪನಿಗೆ ಆಯೋಗ ಆದೇಶಿಸಿದೆ.




