ಎಂ.ಇ.ಐ.ಸಂಸ್ಥೆ ವತಿಯಿಂದ ಕೊಡಗು, ಕೇರಳ ರಾಜ್ಯಕ್ಕೆ ಅಗತ್ಯ ವಸ್ತುಗಳ ರವಾನೆ

2 years ago

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಮುಡಾ ಪ್ರಕರಣದಲ್ಲಿ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರೆ, ಬಿಜೆಪಿ ಸುಳ್ಳಿನ ಇತಿಹಾಸ ಜನರಿಗೆ ತಿಳಿಸಲು ಜನಾಂದೋಲನ: ರಾಮಲಿಂಗಾರೆಡ್ಡಿ

ಬೆಂಗಳೂರು: ಯಶವಂತಪುರದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟೃೀಸ್ ಲಿಮಿಟೆಡ್ ವತಿಯಿಂದ ಕೊಡಗು ಮತ್ತು ಕೇರಳ ಮಳೆ ಸಂತ್ರಸ್ತರಿಗೆ ಅಗತ್ಯ ಪರಿಹಾರ ಸಾಮಗ್ರಿಗಳ ರವಾನಿಸುತ್ತಿರುವ ಕಾರ್ಯಕ್ರಮಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಸಂಸ್ಥೆಯ ಅಧ್ಯಕ್ಷ ಎಸ್.ಮನೋಹರ್, ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶ್ರೀಧರ್ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಜೆಪಿ ಸುಳ್ಳಿನ ಇತಿಹಾಸ ಸಾರ್ವಜನಿಕರಿಗೆ ತಿಳಿಸಲು ಜನಾಂದೋಲನ ಮಾಡಲಾಗುತ್ತಿದೆ. ಮುಡಾದಲ್ಲಿ ಮುಖ್ಯಮಂತ್ರಿ ಪತ್ನಿ ಹೆಸರಿನಲ್ಲಿ ಸೈಟ್ ನೀಡಿರುವುದು ತಪ್ಪು ಎಂದಾದರೆ ಅಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರೆ ಎಂದರ್ಥ. ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೋಟಿಸ್ ನೀಡಿರುವುದು ದೆಹಲಿ ನಾಯಕರ ಒತ್ತಡದಿಂದ ಎಂದರು.

ಮೈಸೂರು ಎಲೆಕ್ಟ್ರಿಕಲ್ ಸಂಸ್ಥೆಯವರು ಕೊಡಗು, ಕೇರಳ ಸಂತ್ರತ್ತರಿಗೆ ಅಗತ್ಯ ವಸ್ತುಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಸರ್ಕಾರದ ಜೊತೆಯಲ್ಲಿ ಸಾರ್ವಜನಿಕರ ಸಹಕಾರ, ಸಹಾಯವಿದ್ದರೆ ಸಂಕಷ್ಟಗಳು ಪರಿಹಾರ ವೇಗವಾಗಿ ಆಗುತ್ತದೆ ಎಂದರು.

ಎಸ್.ಮನೋಹರ್ ಮಾತನಾಡಿ, ಮನುಜಮತ ವಿಶ್ವಪಥ ಎಂಬ ರಾಷ್ಟ್ರಕವಿ ಕುವೆಂಪುರವರ ಸಂದೇಶದಂತೆ, ಮನುಷ್ಯ, ಮನುಷ್ಯರಿಗೆ ಸಹಾಯ, ಸಹಕಾರ ನೀಡಿದಾಗ ಮಾತ್ರ ಮನುಷ್ಯ ಜನ್ಮ ಸಾರ್ಥಕ. ಮಳೆ ಪ್ರವಾಹದಿಂದ ಕೊಡಗು ಮತ್ತು ಕೇರಳ ರಾಜ್ಯಕ್ಕೆ ಅಗತ್ಯ ವಸ್ತುಗಳನ್ನು ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟೃೀಸ್ ಲಿಮಿಟೆಡ್ ಸಂಸ್ಥೆ ವತಿಯಿಂದ ಅಂದಾಜು 15 ಲಕ್ಷ ರೂಪಾಯಿ ಅಗತ್ಯ ವಸ್ತುಗಳನ್ನು ರವಾನೆ ಮಾಡಲಾಗುತ್ತಿದೆ ಎಂದರು.

ನಮ್ಮ ಸಂಸ್ಥೆ ವತಿಯಿಂದ ಈಗಾಗಲೇ ರಾಜ್ಯ ಆರೋಗ್ಯ ಇಲಾಖೆಗೆ ಎರಡು ಅಂಬುಲೆನ್ಸ್ ಮತ್ತು ಬಿಟಿಎಂ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಯ ಮಕ್ಕಳ ವಿದ್ಯಾಭ್ಯಾಸಕ್ಕೆ  ಅನುಕೂಲಕ್ಕೆ ಎಲ್.ಇ.ಡಿ. ಬೃಹತ್ ಟಿ.ವಿ. ಉಚಿತವಾಗಿ ನೀಡಲಾಗಿದೆ ಎಂದರು.

Leave a Reply