ಬಿಜೆಪಿಗರು ತಮ್ಮ ಬುದ್ಧಿವಂತಿಕೆಯನ್ನು ಅಡವಿಟ್ಟಿರುವುದು ಸಾಬೀತಾಗಿದೆ: ರಾಮಲಿಂಗಾರೆಡ್ಡಿ

2 years ago

ಬೆಂಗಳೂರು: ಕೇಂದ್ರ ಸರ್ಕಾರದಲ್ಲಿಯೇ ಇದ್ದು, ಪ್ರಧಾನ‌ ಮಂತ್ರಿ ಶ್ರೀ Narendra Modi ಯವರ ನೀತಿ‌ ನಿಯಮಗಳ ಬಗ್ಗೆಯೇ ಅರಿವಿಲ್ಲದೆ ಮಾತನಾಡುತ್ತಿರುವ Pralhad Joshi ಅವರೇ, ರಾಜ್ಯದ ವಿರೋಧ ಪಕ್ಷದ ನಾಯಕರಾದ R Ashoka, ಬಿ.ಜೆ.ಪಿ ಯ ರಾಜ್ಯಧ್ಯಕ್ಷರಾದ Vijayendra Yediyurappa ಅವರುಗಳೇ ನಿಜಕ್ಕೂ ನೀವುಗಳು ತಮ್ಮ ಬುದ್ಧಿವಂತಿಕೆಯನ್ನು ಅಡವಿಟ್ಟಿರುವ ಹಾಗೆ ಕಾಣಿಸುತ್ತಿರುವುದು ಸಾಬೀತಾಗಿದೆ‌ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಮತ್ತು ಅದರ ನಾಯಕರು ಮಾಧ್ಯಮದ ಕೆಲವು ವರದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ರಾಮಲಿಂಗಾರೆಡ್ಡಿ, ಯಾವುದೇ ಒಂದು ವಿಷಯದ ಬಗ್ಗೆ ಸಮಗ್ರ ಮಾಹಿತಿಯನ್ನೇ ಪಡೆಯದೆ, ಟ್ವೀಟ್ ಮಾಡುತ್ತೀರೋ ನೀವುಗಳು ಜನರ ಮುಂದೆ ತಮಗೆ ಅರಿವಿಲ್ಲ ಎಂಬುದನ್ನು ಪದೇ ಪದೇ ತೋರಿಸಿಕೊಳ್ಳುವ ಖಯಾಲಿಗೆ ಬಿದ್ದಂತಿದೆ ಎಂದಿದ್ದಾರೆ.

ನಾವು ಸಾರ್ವಜನಿಕರಿಗೆ ಸರಿಯಾದ ಮತ್ತು ಸತ್ಯವನ್ನು ತಿಳಿಸುವ ಬದ್ಧತೆ ಮತ್ತು‌ ಜವಾಬ್ದಾರಿಯನ್ನು ಹೊಂದಿದ್ದೇವೆ . ಆದ್ದರಿಂದ ತಮ್ಮ ಸಾವಿರ ಸುಳ್ಳಿನ ಟ್ಟೀಟ್ ಗಳಿಗೂ ಕೂಡ ಉತ್ತರಿಸುವ ಎದೆಗಾರಿಕೆ ನಮ್ಮಲ್ಲಿದೆ . ಸಾರಿಗೆ ಸಂಸ್ಥೆಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆಯು ಕೇಂದ್ರ ಸರ್ಕಾರದ ನೀತಿ ಯೋಜನೆಯಂತೆ ಜಾರಿಯಾಗಿದೆ ಎಂದಿದ್ದಾರೆ.

ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರಿಗೆ ಸಂಸ್ಥೆಗಳು ನೇರವಾಗಿ ಖರೀದಿಸುವಂತಿಲ್ಲ, ಖಾಸಗಿ ಕಂಪನಿಯವರು ಮಾಲೀಕತ್ವ ಹೊಂದಿರುತ್ತಾರೆ, ಅವರಿಗೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ನೇರವಾಗಿ ನೀಡುತ್ತದೆ, ಚಾಲಕರನ್ನು ನಿಯೋಜಿಸುವ ಕಾರ್ಯವು ಖಾಸಗಿ ಅವರಿಗೆ ನೀಡಲಾಗಿದೆ‌ ಎಂದಿದ್ದಾರೆ.

ಚಾಲಕರ ವೇತನ, ಆಯ್ಕೆ ಯಾವುದರಲ್ಲಿಯೂ ಸಾರಿಗೆ ಸಂಸ್ಥೆಗಳಿಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿಲ್ಲ. ಬಸ್ಸುಗಳ ಕಾರ್ಯಾಚರಣೆ ಹೊಣೆ ಮಾತ್ರ ಸಾರಿಗೆ ಸಂಸ್ಥೆಗಳದ್ದು, ಈ ವಿಷಯವನ್ನು ಹತ್ತು ಹಲವಾರು ನಾನು ಸ್ಪಷ್ಟಪಡಿಸಿದ್ದೇನೆ ಎಂದಿದ್ದಾರೆ.

ರಾಜ್ಯದ ಯುವಕರಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಲು ಕಾರಣವಾದ ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ, ಪ್ರಹ್ಲಾದ್ ಜೋಷಿ ಅವರಿಂಗಿಂತ ಸಮರ್ಥವಾಗಿ ಉತ್ತರಿಸಲು ಯಾರಿಂದ ಸಾಧ್ಯ‌? ಎಂದು ಪ್ರಶ್ನಿಸಿದ್ದಾರೆ.

BJP Karnataka ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳಿಗೆ ರೂ.5900 ಕೋಟಿ ಸಾಲ ಮಾಡಿ ಆ ಹೊರೆಯನ್ನು ನಮ್ಮ‌ ತಲೆ ಮೇಲೆ ಹೊರೆಸಿ ಹೋಗಿದ್ದಾರೆ. ಶಾಂತಿನಗರ ಟಿ.ಟಿ.ಎಂ.ಸಿಯನ್ನು ಸಾಲ ಪಡೆಯಲು ಅಡವಿಟ್ಟಿದ್ದ ವಿಷಯ ಜಗಜಾಹೀರಾಗಿತ್ತು ಎಂದಿದ್ದಾರೆ.

ಸಾರಿಗೆ ಸಂಸ್ಥೆಗಳಲ್ಲಿ 14000 ಹುದ್ದೆಗಳು ಖಾಲಿಯಿದ್ದರೂ, ಬಿ.ಜೆ.ಪಿ ಆಡಳಿತದ ಅವಧಿಯಲ್ಲಿ ಒಂದೇ ಒಂದು ನೇಮಕಾತಿ ಮಾಡದೆ, ನಮ್ಮ ಅವಧಿಯಲ್ಲಿ ಹೊರಡಿಸಲಾಗಿದ್ದ ನೇಮಕಾತಿ‌ ಪ್ರಕಟಣೆಗಳಿಗೂ ತಡೆತಂದಿರುವುದು ನಿಮ್ಮ ಗರಿಮೆ ಮತ್ತು ಹಿರಿಮೆ ಎಂದು ಅಭಿಪ್ರಾಪಟ್ಟಿದ್ದಾರೆ.

ನಮ್ಮ‌ ಸರ್ಕಾರ ಬಂದೊಡನೆಯೇ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು ಈಗಾಗಲೇ 1650 ಚಾಲಕ/ ನಿರ್ವಾಹಕರು ಹಾಗೂ 250 ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಭರದಿಂದ ಸಾಗಿದೆ ಎಂದಿದ್ದಾರೆ.

ನಾಲ್ಕು ಸಾರಿಗೆ ನಿಗಮಗಳಲ್ಲಿ‌ ಕಳೆದ ಒಂದು ವರುಷದ ಅವಧಿಯಲ್ಲಿ 500 ಕ್ಕೂ ಹೆಚ್ಚು ಅನುಕಂಪ ಆಧಾರದ‌ ಮೇಲೆ‌ ನೇಮಕಾತಿ‌ ಪತ್ರವನ್ನು ಸಿಬ್ಬಂದಿಗಳ ಅವಲಂಬಿತರಿಗೆ ನೀಡಲಾಗಿದೆ ಎಂದಿದ್ದಾರೆ.

ಯುವಕರಿಗೆ ನಿರುದ್ಯೋಗ ಭಾಗ್ಯ ಕರುಣಿಸಿ, ಸಾರಿಗೆ ಸಂಸ್ಥೆಗಳನ್ನು ಅವನತಿಯತ್ತ ಕೊಂಡ್ಯೊಯ್ದ ಬಗ್ಗೆ ತಮಗೆ ಯಾವುದೇ ಪಶ್ಚಾತ್ತಾಪವಿಲ್ಲದಿರುವುದು ವಿಷಾದನೀಯ. ಬರೀ ಭಾಷಣಕ್ಕೆ ಸೀಮಿತವಾಗದೆ, ಕೋಟಿ ಕೋಟಿ ಉದ್ಯೋಗ ಕರುಣಿಸುವ ಸುಳ್ಳು ಭರವಸೆ ನೀಡಿ, ಯುವಜನರನ್ನು ಶೋಷಿಸುವ ಕಾರ್ಯ ಮಾಡದೇ, ನುಡಿದಂತೆ ನಡೆಯುತ್ತಿದ್ದೇವೆ ಎಂದಿದ್ದಾರೆ.

ಸಾರಿಗೆ ಸಂಸ್ಥೆಗಳಲ್ಲಿ ಕಳೆದ 5 ವರುಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆ ಮಾಡದೇ , ಡಕೋಟ ಬಸ್ಸುಗಳಲ್ಲೇ ಕಾರ್ಯಾಚರಣೆ ಮಾಡಿ , ತಮ್ಮ ಅವಧಿಯ ಕೊಳೆ ತೊಳೆಯುವ ಕಾರ್ಯವೂ ಕೂಡ ಭರದಿಂದ ಸಾಗಿದೆ ಎಂದಿದ್ದಾರೆ.

ತಮ್ಮ ಈ ಎಲ್ಲಾ ಸುಳ್ಳು, ಕಪೋಲ ಕಲ್ಪಿತ, ಆಧಾರರಹಿತ ಟ್ಟೀಟ್ ಗಳ ಸರಮಾಲೆಗೆ ಶೀಘ್ರದಲ್ಲಿಯೇ ಮುಕ್ತಿ ಸಿಗುವ ಭರವಸೆ ನಮಗಿದೆ ಎಂದಿದ್ದಾರೆ.

Leave a Reply