ಬೆಂಕಿ ಅವಘಡಕ್ಕೆ ಒಂದೇ ಕುಟುಂಬದ ನಾಲ್ವರ ಬಲಿ
ದೆಹಲಿ: ಬಹುಅಂತಸ್ತಿನ ಕಟ್ಟಡವೊಂದರಲ್ಲಿ ಕಾಣಿಸಿಕೊಂಡ ಬೆಂಕಿಗೆ ಒಂದೇ ಕುಟುಂಬದ ನಾಲ್ವರು ಬಲಿಯಾದ ಘಟನೆ ದೆಹಲಿಯ ಹಳೇ ಸೀಮಾಪುರಿಯಲ್ಲಿರುವ ನಡೆದಿದೆ. 3 ಅಂತಸ್ತಿನ ಕೊನೆಯ ಅಂತಸ್ತಿನಲ್ಲಿ ಬೆಂಕಿ ಜ್ವಾಲೆ ವ್ಯಾಪಿಸಿಕೊಂಡ ಹಿನ್ನೆಲೆಯಲ್ಲಿ ಹೊಗೆಯಿಂದ ಉಸಿರುಗಟ್ಟಿ 4 ಜನ ಬಲಿಯಾಗಿದ್ದಾರೆ. ಬಲಿಯಾದವರನ್ನು ಹೌರಿ ಲಾಲ್ (59), ರೀನಾ, ಅಶು ಮತ್ತು ರಾಧಿಕಾರ ಎಂದು ಗುರುತಿಸಲಾಗಿದೆ.
ಹೌರಿ ಲಾಲ್ ಶಾಸ್ತ್ರಿ ಭವನ್ನಲ್ಲಿ ಜವಾನರಾಗಿ ಕರ್ತರ್ವ್ಯ ನಿರ್ವಹಿಸುತ್ತಿದ್ದರು. ಪತ್ನಿ ರೀನಾ ಕಸಗುಡಿಸುವ ಕೆಲಸ ಮಾಡುತ್ತಿದ್ದರು. ಮುಂಜಾನೆ 4ರ ವೇಳೆಗೆ ಅವಘಡ ನಡೆದಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಕಟ್ಟಡದ ಉಳಿದ ಪ್ರದೇಶಗಳಿಗೆ ಹರಡುವುದನ್ನು ತಡೆದಿದ್ದಾರೆ.




