ಜೈಪುರ: ವಿವಾಹಿತ ಮಹಿಳೆಯನ್ನು ಪ್ರೀತಿಸುತ್ತಿದ್ದ ಯುವಕ ಗಣೇಶ್ ಮೀನಾ ಪ್ರೀತಿ ಪಡೆಯಲು ಯತ್ನಿಸಿ ಸೋತು ಕಡೆಗೆ ಆಕೆಯನ್ನು ಅಮಾನವೀಯವಾಗಿ ಕೊಂದು ಹಾಕಿದ ಘಟನೆ ರಾಜಸ್ಥಾನದ ಅಹೋರ್ ಪ್ರದೇಶದಲ್ಲಿ ವರದಿಯಾಗಿದೆ. ಹುಚ್ಚು ಏಕಮುಖ ಪ್ರೇಮಿಯಾಗಿದ್ದ ಈತ ಆಕೆ ತನ್ನೆಡೆ ತಿರುಗಿ ಕೂಡ ನೋಡುತ್ತಿಲ್ಲ ಎಂಬ ಕಾರಣಕ್ಕೆ ಕೋಪಿಸಿಕೊಂಡು, ತನಗೆ ಸಿಗದವಳು ಯಾರಿಗೂ ಸಿಗಬಾರದು ಎಂಬ ಕಾರಣಕ್ಕೆ ಕತ್ತರಿಸಿ ಕೊಂದು ಹಾಕಿದ್ದಾನೆ. ಅನಂತರ ಶವ ತಬ್ಬಿ ಮಲಗಿಕೊಂಡಿದ್ದಾನೆ.
ನೆಲದ ಮೇಲೆ ಶವ ತಬ್ಬಿ ಮಲಗಿರುವ ದೃಶ್ಯ ಕಂಡ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪತಿ ಶಾಂತಿಲಾಲ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು. ಬಲಿಯಾದ ಶಾಂತಿ ದೇವಿಗೆ ಮಹಿಳೆಗೆ ಇಬ್ಬರು ಗಂಡು ಮಕ್ಕಳಿದ್ದರು. ಭಾನುವಾರ ಪತಿ ಕೆಲಸಕ್ಕೆ ಹೋಗಿದ್ದ ವೇಳೆ ಗಣೇಶ್ ಮೀನಾ ಪ್ರೇಮನಿವೇದಿಸಿಕೊಂಡಿದ್ದಾನೆ. ಅನಂತರ ಈ ಘಟನೆ ನಡೆದಿದೆ.




