ಇನ್ಮೇಲೆ ಚಿತ್ರಾನ್ನಕ್ಕೆ #ಅರಿಶಿನ ಹಾಕ್ಬಾರ್ದು!
ನಮ್ಮ ರಾಜ್ಯದ ಪೊಲೀಸರ ಬಗ್ಗೆ ಇವತ್ತು ಕೇಳಿದ ಜೋಕ್ ಇದು. ಪೊಲೀಸರು ತಮ್ಮ ಮನೆಯಲ್ಲಿ ಚಿತ್ರಾನ್ನಕ್ಕೆ ಅರಿಶಿನ ಪುಡಿ ಹಾಕಬಾರದು ಅಂತ ಫರ್ಮಾನು ಹೊರಡಿಸಿದ್ದಾರಂತೆ. ಯಾಕೆಂದರೆ ಅವರಿಗೆ ಹಳದಿ/ಅರಿಶಿನ ಬಣ್ಣ ಕಂಡರೆ KRS ಪಕ್ಷ ನೆನಪಾಗುತ್ತಂತೆ!
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಇವತ್ತಿನ ಕಾರ್ಯಕ್ರಮದಲ್ಲಿ ಹಿರಿಯರೊಬ್ಬರು ಈ ಜೋಕ್ ಹೇಳಿ ನಮ್ಮನ್ನು ನಗಿಸಿದರು. ನಾನು ನಗುತ್ತಲೇ ತಕ್ಷಣವೇ, “ಅಯ್ಯೋ, ಎಲ್ಲಾ ಪೊಲೀಸರ ಮನೇಲಿ ಅಲ್ಲ ಸರ್, ಕೇವಲ ಭ್ರಷ್ಟ ಪೊಲೀಸರ ಮನೇಲಿ ಮಾತ್ರ” ಎಂದೆ.
ಕೊನೆಗೆ ಮಾತು ಎಲ್ಲೆಲ್ಲಿಗೋ ಹೋಗಿ ನಾನು ಹೀಗೆಂದೆ:
* ಯಾವ ಪೊಲೀಸರ ಮನೆಯಲ್ಲಿ ಚಿತ್ರಾನ್ನಕ್ಕೆ ಅರಿಶಿನ ಹಾಕುವುದಿಲ್ಲವೋ ಅವರು ಭ್ರಷ್ಟ ಪೊಲೀಸರು.
* ಯಾವ ಪೋಲೀಸರ ಮನೆಯಲ್ಲಿ ಚಿತ್ರಾನ್ನಕ್ಕೆ ಅರಿಶಿನ ಬಳಸುತ್ತಾರೋ ಅವರು ಪ್ರಾಮಾಣಿಕ ಪೊಲೀಸರು ಮತ್ತು KRS ಪಕ್ಷದ ಬೆಂಬಲಿಗರು.
ಹಳದಿ ಶರ್ಟ್ ಕಂಡರೆ ಸಾಕು ನಮಗೂ ಅವರು KRS ಪಕ್ಷದವರೇ ಇರಬೇಕು ಅನ್ನಿಸುತ್ತೆ. ಇನ್ನು ಪೊಲೀಸರಿಗೆ ಹೇಗಾಗಿರಬಾರದು? ಇವತ್ತು ಸರ್ಕಾರಿ ಕಚೇರಿಗೆ KRS ಪಕ್ಷದ ಟೀಶರ್ಟ್ ಅಲ್ಲ, ಹಳದಿ ಬಣ್ಣದ ಯಾವುದೋ ಸಿಮೆಂಟ್ ಕಂಪನಿಯ ಟೀಶರ್ಟ್ ಹಾಕಿಕೊಂಡು ಹೋದರೂ ನಿಮ್ಮ ನ್ಯಾಯಬದ್ಧ ಕೆಲಸ ಆಗುತ್ತೆ.
ಅಂದಹಾಗೆ ಇತ್ತೀಚೆಗೆ ಯಾರೋ ಒಬ್ಬರು ಈ ಪ್ರಶ್ನೆ ಕೇಳಿದ್ದರು: “ಯಾಕೆ ಈ ಬಿಜೆಪಿ/ಕಾಂಗ್ರೆಸ್/ಜೆಡಿಎಸ್ ಕಾರ್ಯಕರ್ತರು ತಮ್ಮಪಕ್ಷದ ಶಾಲು/ಸಮವಸ್ತ್ರ ಹಾಕಿಕೊಂಡು ಸರ್ಕಾರಿ ಕಚೇರಿಗಳಿಗೆ ಹೋಗಿ KRS ಪಕ್ಷದವರ ರೀತಿ ಲಂಚ ಇಲ್ಲದೆ ಜನಸಾಮಾನ್ಯರ ಕೆಲಸ ಮಾಡಿಕೊಡಲು ಪ್ರಯತ್ನಿಸಬಾರದು?” ಅಂತ.
ಪಾಪ, ಅವರಿಗೆ ಗೊತ್ತಿಲ್ಲ. ಬಿಳಿಬಟ್ಟೆ, ಕೊರಳಲ್ಲಿ ದಪ್ಪ ಸರಪಳಿ ಚೈನು, ಕೈಬೆರಳಿಗೆಲ್ಲಾ ಉಂಗುರ ಹಾಕ್ಕೊಂಡು ಸರ್ಕಾರಿ ಕಚೇರಿ ಸುತ್ತಮುತ ಠಳಾಯಿಸುವವರು ಇನ್ಯಾರು ಅಂತ?
ಲಂಚ/ಕಮೀಷನ್ ಇಲ್ಲದೆ ಕೆಲಸ ಆಗೋ ಹಾಗಾದರೆ, ದಲ್ಲಾಳಿಗಳು ಎಲ್ಲೋಗಬೇಕು?
ಇಂತಹ ವಾಸ್ತವದ ಜೋಕುಗಳು ನಿಮಗೂ ಗೊತ್ತಿದ್ದರೆ, ದಯವಿಟ್ಟು ಕಾಮೆಂಟ್ ವಿಭಾಗದಲ್ಲಿ ಬರೆಯಿರಿ. ಚೆನ್ನಾಗಿದ್ರೆ ನಗೋಣ. ಅಥವ ಅಳೋಣ. ಯಾಕೆಂದರೆ ಕೆಲವು ಕ್ರೂರ ವಾಸ್ತವದ ಜೋಕುಗಳು ಮೊದಲಲ್ಲಿ ನಗಿಸಿದರೂ ಕೊನೆಗೆ ಅವು ನಮ್ಮನ್ನು ಅಳಿಸುತ್ತವೆ.
ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.
– ರವಿಕೃಷ್ಣಾ ರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ




