ಕಾಂ.ನಾಗೇಶ್ ಕುಮಾರ್ ಸಂಸ್ಮರಣಾ ದಿನಾಚರಣೆ

4 years ago

ಮಂಗಳೂರು: ವಿದ್ಯಾರ್ಥಿ ಯುವಜನ ಚಳುವಳಿಯ ಮೂಲಕ ದ.ಕ. ಜಿಲ್ಲೆಯಲ್ಲಿ ಎಡಪಂಥೀಯ ಚಳುವಳಿಗೆ ಅವಿಶ್ರಾಂತವಾಗಿ ಶ್ರಮಿಸಿದ ಕಾಮ್ರೇಡ್ ನಾಗೇಶ್ ಕುಮಾರ್ ಅವರ 12ನೇ ವರ್ಷದ ಸಂಸ್ಮರಣಾ ದಿನಾಚರಣೆಯನ್ನು ಮಂಗಳೂರಿನ ಜನಪರ ಚಳುವಳಿಯ ಕೇಂದ್ರ ವಿಕಾಸ ಕಚೇರಿಯಲ್ಲಿ ಆಚರಿಸಲಾಯಿತು.

ಈ ಸಂಧರ್ಭದಲ್ಲಿ CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೃಷ್ಣಪ್ಪ ಕೊಂಚಾಡಿ ಮಾತನಾಡಿ, ಎಳೆಯ ಪ್ರಾಯದಲ್ಲೇ ವಿದ್ಯಾರ್ಥಿ ಚಳುವಳಿ ಮೂಲಕ ಬೆಳೆದು ಬಂದ ಕಾಂ.ನಾಗೇಶ್ ಕುಮಾರ್ ಅವರು ವಿಮಾ ನೌಕರರಾಗಿ ವಿಮಾ ರಂಗದ ಉಳಿವಿಗಾಗಿ ನಡೆದ ವಿವಿಧ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು, ವಿಮಾ ನೌಕರರ ಸಂಘಟನೆಯಲ್ಲಿಯೂ ಪ್ರಮುಖ  ನಾಯಕರಾಗಿದ್ದರು ಎಂದರು.

ಎಡಪಂಥೀಯ ಚಳುವಳಿಯ ಮುನ್ನಡೆಗೆ ಅವಿಶ್ರಾಂತವಾಗಿ ಶ್ರಮಿಸಿದ್ದ ನಾಗೇಶ್ ರವರು, 1998ರ ಮೇ 1ರಂದು ಜನ್ಮ ತಾಳಿದ ಪ್ರಗತಿಪರ ಜನಸಮುದಾಯ ಪತ್ರಿಕೆಯ ಚಾಲಕ ಶಕ್ತಿಯಾಗಿ ಹೊರಹೊಮ್ಮಿದ್ದರು. ಎಂತಹ ಸಂಕಷ್ಟದ ಕಾಲದಲ್ಲೂ ಚಳುವಳಿಯ ಹಿರಿಯ ಕಿರಿಯ ಸಂಗತಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಿ ತೆರೆಯ ಮರೆಯಲ್ಲಿದ್ದುಕೊಂಡು ಚಳುವಳಿಯ ಮುನ್ನಡೆಗೆ ಸಹಕರಿಸಿದ್ದರು ಎಂದರು.

ಈ ಸಂಧರ್ಭದಲ್ಲಿ CPIM ಜಿಲ್ಲಾ ನಾಯಕ ಕೆ.ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಸುಕುಮಾರ್, ಸುನಿಲ್ ಕುಮಾರ್ ಬಜಾಲ್, DYFI ನಾಯಕರಾದ ಸಂತೋಷ್ ಬಜಾಲ್, ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, SFI ಮಾಜಿ ನಾಯಕರಾದ ಚರಣ್ ಶೆಟ್ಟಿ, ಅಖಿಲ ಭಾರತ ವಕೀಲರ ಸಂಘಟನೆಯ ಮುಖಂಡರಾದ ಯಶವಂತ ಮರೋಳಿ, ರಾಮಚಂದ್ರ ಬಬ್ಬುಕಟ್ಟೆ, ಕೆ.ಪಿ.ಸತೀಶನ್, ಶಾಲಿನಿ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ಬಿ.ಎಂ.ಮಾಧವ, ಯುವ ವಕೀಲರಾದ ಸುನಂದ ಕೊಂಚಾಡಿ, ರಿಜ್ವಾನ್ ಮುಂತಾದವರು ಉಪಸ್ಥಿತರಿದ್ದರು.

Leave a Reply