ಭಾರತದ ಇಂದಿನ ಆರ್ಥಿಕ ಸಂಕಶ್ಟದ ಅಪಾಯಕಾರಿ ಸ್ಥಿತಿ ಮತ್ತು ಪರಿಹಾರದ ದಾರಿ

5 years ago

ತೆರಿಗೆ ರೆವಿನ್ಯೂ : 2013- 2014

ಕಾರ್ಪೋರೇಟ್ ಪಾಲು – 47%

ಜನಸಾಮಾನ್ಯರ ಪಾಲು – 53%

ತೆರಿಗೆ ರೆವಿನ್ಯೂ : 2020- 2021

ಕಾರ್ಪೋರೇಟ್ ಪಾಲು – 33%

ಜನಸಾಮಾನ್ಯರ ಪಾಲು – 67%

ಕೇಂದ್ರ ಸರಕಾರದ ಪ್ರತಿ ದಿನದ ಸಾಲದ ಮೊತ್ತ : 6000 ಕೋಟಿ.

National debt to GDP is 86%.

ಬ್ಯಾಂಕುಗಳಲ್ಲಿನ NPA

ಶೇ. 15%ರಶ್ಟಿದೆ.

ಪ್ರತಿ ವರ್ಶ ಕಾರ್ಪೋರೇಟ್ ಗಳ 1. 5- 2 ಲಕ್ಷ ಕೋಟಿ loan writesoff.

ಎಲ್ಲಾ ಹಂತಗಳ ಸರಕಾರಿ ನೌಕರರ ವೇತನದ ವೆಚ್ಚ ಜಿಡಿಪಿಯ ಶೇ. 11% ರಶ್ಟಿದೆ. ಅವರ ವಾರ್ಶಿಕ ವೇತನ ಹೆಚ್ಚಳವು ಜಿಡಿಪಿಯ ಶೇ. 1% ರಶ್ಟಿದೆ.

ಬಜೆಟ್ ನ ಕೊರತೆಯಿಂದಾಗಿ ಸುಮಾರು 30 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ.

ನಿರುದ್ಯೋಗದ ಪ್ರಮಾಣ ಶೇ. 12%ರಶ್ಟಿದೆ…. ಮತ್ತು jobless growth ಎನ್ನುವ ಪೆಂಡಬೂತ ಬೆನ್ನ ಹಿಂದಿದೆ… ಮತ್ತು ಬೆಚ್ಚಿಬೀಳಿಸುವ ಈ ದುರಂತಗಳ ಪಟ್ಟಿ ಬರೆದಶ್ಟು ಮುಗಿಯುವುದಿಲ್ಲ.

ಮೋದಿ ಸರಕಾರದ  ಮುಂದಿನ ಮೂರು ವರ್ಶಗಳ ಆಡಳಿತದಲ್ಲಿ ಭಾರತವು ಆರ್ಥಿಕವಾಗಿ ದಿವಾಳಿಯಾಗುವ ಎಲ್ಲಾ ಸೂಚನೆಗಳಿವೆ ಎಂದರೆ ಉತ್ಪ್ರೇಕ್ಷೆಯಲ್ಲ.

ಇಂದು ಯಾವುದೇ ರಾಜಕೀಯ ಪಕ್ಷಗಳಲ್ಲಿ ದೂರದೃಶ್ಟಿಯಿಲ್ಲ, ಬದ್ದತೆಯಿಲ್ಲ, ಕಾಳಜಿಯಿಲ್ಲ. ಇಂತಹ ಬಿಕ್ಕಟ್ಟಿನಲ್ಲಿ ಇಲ್ಲಿನ ಪ್ರಗತಿಪರ ಸಂಘಟನೆಗಳು, ಚಿಂತಕರು ಕೂಡಲೆ ಕಾರ್ಯಪ್ರವೃತ್ತರಾಗಿ  ಕೈಗೆತ್ತಿಕೊಳ್ಳಬೇಕಾದ ರಚನಾತ್ಮಕ ಕಾರ್ಯಯೋಜನೆಗಳು:

  1. ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು, ಹೋಬಳಿ ಕೇಂದ್ರಗಳಲ್ಲಿ ಪರ್ಯಾಯ ಉದ್ಯೋಗಗಳ ಆರಂಬಕ್ಕೆ ಮತ್ತು ಚಾಲನೆಗೆ ನಿರಂತರವಾದ ಚಳುವಳಿ (alternative job movement)
  2. ಮನ್ರೇಗವನ್ನು 300 ದಿನಗಳಿಗೆ ವಿಸ್ತರಿಸುವ, ಕಾಮಗಾರಿ ಹೊರತಾಗಿ ಕೃಶಿ, ಮೀನುಗಾರಿಕೆ, ಕುರಿ ಸಾಕಣೆ ಇತರೆ ವಲಯಗಳಿಗೆ ವಿಸ್ತರಿಸುವ ಮತ್ತು ಕುಟುಂಬದ ಪ್ರತಿ ಸದಸ್ಯರಿಗೂ ಜಾಬ್ ಕಾರ್ಡ್ ವಿತರಿಸುವ ಹಕ್ಕೊತ್ತಾಯದ ಚಳುವಳಿ.
  3. ಮನ್ರೇಗವನ್ನು ನಗರ, ಪಟ್ಟಣಗಳಲ್ಲಿ ಜಾರಿಗೊಳಿಸುವ ಮಸೂದೆಗಾಗಿ ಚಳುವಳಿ.
  4. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (bottom stra) ವಾರ್ಶಿಕವಾಗಿ 72,000 ಕೋಟಿ (ತಿಂಗಳಿಗೆ 6000) ಹಣ ವರ್ಗಾವಣೆಯ “ನ್ಯಾಯ್” ( ಕನಿಶ್ಟ ಆದಾಯ ಯೋಜನೆ) ಪರವಾಗಿ ನಿರಂತರವಾಗಿ ಸಂಘಟನೆ, ಹಕ್ಕೊತ್ತಾಯದ ಚಳುವಳಿ.

ಇದರಿಂದ ಸುಮಾರು 25 ಕೋಟಿ ಜನಸಂಖ್ಯೆ ಅನುಕೂಲ ಪಡೆಯಲಿದೆ.

ಇದನ್ನು ಕಳೆದ ಲೋಕಸಭಾ ಚುನಾವಣೆ ಸಂದರ್ಬದಲ್ಲಿ ರಾಹುಲ್ ಗಾಂಧಿ ತುಂಬಾ ಉತ್ಸಾಹದಿಂದ ಪ್ರಚಾರ ಮಾಡಿದ್ದರು. ಆದರೆ ದಯನೀಯ ಸೋಲಿನಿಂದ ಕಂಗೆಟ್ಟು ಇದನ್ನು ಮರೆತುಬಿಟ್ಟರು.

(ಮತ್ತು ಇಲ್ಲಿ  ಪ್ರತಿ ಬಾರಿ ತಿಂಗಳಿಗೆ 6000 ಪಾವತಿಸಬೇಕಿಲ್ಲ. ಖಾತೆಯಲ್ಲಿ ಕನಿಶ್ಟ 6000 ಬ್ಯಾಲೆನ್ಸ್ ಇರಬೇಕು. ಮಸಲ ಒಬ್ಬರ ಖಾತೆಯಲ್ಲಿ 4000ವಿದ್ದರೆ ಅವರಿಗೆ 2000 ಮಾತ್ರ ಪಾವತಿಸಬೇಕು. ಹೀಗೆ…. )

ಈ ಕನಿಶ್ಟ ರಚನಾತ್ಮಕ ಕಾರ್ಯಯೋಜನೆಗಳ ಪರವಾಗಿ ನಾವು ಸಂಘಟನೆ ಮಾಡದೆ ನಿಶ್ಕ್ರಿಯರಾದರೆ ನಮಗೆ ಯಾರನ್ನೂ ಟೀಕಿಸುವ ಹಕ್ಕಿರುವುದಿಲ್ಲ.

– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply