ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಸಾಂಸ್ಕೃತಿಕವಾದ ಚಿಂತನೆಯ ಮೂಲಕ ರಾಜಕೀಯ ಕಾರ್ಯಕ್ರಮಗಳಿಗೆ ಸಾಂಸ್ಕೃತಿಕ ಲೇಪನವನ್ನು ನೀಡಿದಂತಹ ಡಾ. ಜೀವರಾಜ್ ಆಳ್ವ ರವರ ನೆನಪು ಅನೇಕ ಕಾರಣಗಳಿಗೆ ಸದಾ ಉಳಿದಿರುತ್ತದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರಾಜ್ಯದ ರಾಜಕಾರಣದಲ್ಲಿ ಸಾಮಾನ್ಯ ಕಾರ್ಯಕರ್ತರ ದುಃಖ ದುಃಮಾನಗಳಿಗೆ ಸ್ಪಂದಿಸಿದಂತಹ ಕಾರ್ಯಕರ್ತರ ಅತ್ಯಂತ ಪ್ರೀತಿಯ ನಾಯಕರಾಗಿದ್ದ ವ್ಯಕ್ತಿ ಎಂದರೆ ಅದುವೇ ಡಾ. ಜೀವರಾಜ್.
ಪ್ರತಿದಿನವೂ ತಮ್ಮ ಮನೆಯ ಮುಂದೆ ಸೇರುತ್ತಿದ್ದ ಸಹಸ್ರಾರು ನಾಗರಿಕರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುತ್ತಾ ಇಂದು ಬಾ ನಾಳೆ ಬಾ ಎಂದು ಹೇಳದೆ ಕೂಡಲೇ ತಮ್ಮ ಇತಿಮಿತಿಯಲ್ಲಿ ಕೆಲವೊಂದು ಬಾರಿ ಮಿತಿಯನ್ನ ಮೀರಿ ನೆರವನ್ನ ಒದಗಿಸಿ ಕೊಡುತ್ತಿದ್ದ ನಾಯಕರೆಂದರೆ ಜೀವರಾಜ್.
ಸಮಾಜದ ಎಲ್ಲ ವರ್ಗದ, ಎಲ್ಲ ಹಂತದ, ಎಲ್ಲ ಧರ್ಮದ, ಎಲ್ಲ ಜಾತಿಯ ಜನರನ್ನು ನೋಡಲು ಸಾಧ್ಯವಾಗಿದ್ದ ನಾಯಕರ ಮನೆ ಎಂದರೆ ಇವರದು.
1978 ರಿಂದ 5 ಬಾರಿ ಶಾಸಕರಾಗಿ ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ, ಶಿಕ್ಷಣ ಸಚಿವರಾಗಿ, ಯುವಜನ ಕ್ರೀಡಾ ಸಚಿವರಾಗಿ, ಹಲವಾರು ಖಾತೆಗಳನ್ನು ನಿರ್ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಇಂದಿಗೂ ಸಹ ಇವರ ಕಾಲದಲ್ಲಿ ಇಲಾಖೆ ಕಂಡಂತಹ ಬದಲಾವಣೆ ಮತ್ತು ಕಲಾವಿದರಿಗೆ ದೊರೆಯುತ್ತಿದ್ದ ಪ್ರೋತ್ಸಾಹ, ಉತ್ತೇಜನ ಇವುಗಳ ಕಾರಣಕ್ಕಾಗಿ ನೆನಪು ಮಾಡಿಕೊಳ್ಳುತ್ತಾರೆ ನಾಡಿನ ನೂರಾರು ಕಲಾವಿದರು ಇಂದಿಗೂ ಇವರನ್ನು.
ಸಂಘಟನೆ ಎಂದರೆ ಏನು ಎನ್ನುವುದಕ್ಕೆ ಇವರು ಒಂದು ನಿದರ್ಶನವಾಗಿದ್ದರು. ಇಡೀ ರಾಜ್ಯದಾದ್ಯಂತ ಇವರದೇ ಆದಂತಹ ಹಿಂಬಾಲಕರಿದ್ದರು. ಅಲ್ಪ ಅವಧಿಯಲ್ಲಿ ಸಾಕಷ್ಟು ಜನರನ್ನು ಸಂಘಟಿಸಬಲ್ಲಂತಹ ಸಾಮರ್ಥ್ಯವಿದ್ದದ್ದು ಇವರಿಗೆ. ಅದಕ್ಕಾಗಿ ಇವರನ್ನು ಸಂಘಟನಾ ಚತುರ ಎಂದು ರಾಜಕೀಯ ವಲಯದಲ್ಲಿ ಗುರುತಿಸುತ್ತಿದ್ದರು.
ರಾಜಕೀಯ ಪಕ್ಷದಲ್ಲಿ ಎಲ್ಲ ನಾಯಕರು ವೇದಿಕೆಗಳನ್ನ ಹತ್ತಿದ ಸಂದರ್ಭದಲ್ಲಿ ಭಾಷಣ ಮಾಡುವ ವೇಳೆಯಲ್ಲಿ ಕಾರ್ಯಕರ್ತರು ನಮ್ಮ ಪಕ್ಷದ ಆಸ್ತಿ, ಅವರೇ ಬೇರುಗಳು, ಅವರೇ ಆಧಾರಸ್ತಂಭ ಎಂದೆಲ್ಲಾ ಮಾತುಗಳನ್ನು ಹೇಳಿ ಮರೆತು ಹೋಗುವ ನಾಯಕರುಗಳೇ ಹೆಚ್ಚು ತುಂಬಿರುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ, ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಹಿತ ಚಿಂತಕರಾಗಿ, ಅವರುಗಳ ವಿಶ್ವಾಸದ ನಾಯಕರಾಗಿ ಹಲವಾರು ದಶಕಗಳ ಕಾಲ ಉಳಿದಿದ್ದ ಇವರನ್ನು ಇಂದಿಗೂ ಕಾರ್ಯಕರ್ತರು ಪ್ರೀತಿಯಿಂದ ಜೀವಕ್ಕೆ ಜೀವ ಎಂಬ ಅಭಿಮಾನದ ಮಾತುಗಳನ್ನು ಆಡುತ್ತಾರೆ.
– ಕೆ ಎಸ್ ನಾಗರಾಜ್, ಬೆಂಗಳೂರು




