ಕಲಾ ಪ್ರತಿಭೆ ಅನಾವರಣಗೊಳಿಸಿದ ಚಿಗುರು ಸಾಂಸ್ಕೃಸ್ಕೃತಿಕ ಕಾರ್ಯಕ್ರಮ

2 years ago

ಬಳ್ಳಾರಿ: ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದು ಛತ್ರಪತಿ ಶಿವಾಜಿ ವಿದ್ಯಾಮಂದಿರ ಪ್ರೌಢಶಾಲೆಯ ಮುಖ್ಯೋಪಧ್ಯಾಯ ಕೆ.ಕೊಟ್ರಪ್ಪ ಹೇಳಿದರು.

ಕರ್ನಾಟಕ ಸಂಭ್ರಮ-50 ರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂಡೂರು ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರ ಫ್ರೌಢಶಾಲೆಯ ಡಾ.ಎಂ.ವೈ.ಘೋರ್ಪಡೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ಹಾಗೂ ಕ್ರೀಡೆಯ ಜೊತೆಗೆ ಮಕ್ಕಳಿಗೆ ನಮ್ಮ ಕಲೆ ಸಂಸ್ಕೃತಿ ಸಾಹಿತ್ಯವನ್ನು ಪರಿಚಯಿಸುವುದರೊಂದಿಗೆ ಅವರಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಬೆಳಕಿಗೆ ತರಲು ಶಿಕ್ಷಕರು ಹಾಗೂ ಪೋಷಕರು ಪ್ರಯತ್ನಿಸಬೇಕು ಎಂದು ಕರೆನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರ ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಕಲೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಕಲೆಗಳು ನಾಲ್ಕುಗೋಡೆಯ ಮಧ್ಯೆ ಇರದೆ ವೇದಿಕೆಯ ಮೇಲೆ ಪ್ರದರ್ಶಿತವಾಗಬೇಕು ಎಂದರು.

ಈ ಸಂದರ್ಭದಲ್ಲಿ ಸಂಡೂರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಜಗದೀಶ ಬಸಾಪುರ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ನಾಗರಿಕರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಬಳ್ಳಾರಿಯ ನಚಿಕೇತ್ ಭಟ್ ಜೋಶಿ ಅವರಿಂದ ವಾಯಲಿನ್ ವಾದನ, ದೋಣಿಮಲೈ ಟೌನ್ಶಿಪ್ನ ಟಿ.ಸಿಂಚನರಿಂದ ಸುಗಮ ಸಂಗೀತ, ಬಳ್ಳಾರಿ ನಿಧಿ ಆಟ್ರ್ಸ್ ಟ್ರಸ್ಟ್ ವತಿಯಿಂದ ಸಮೂಹ ನೃತ್ಯ, ದೋಣಿಮಲೈ ಡಿಟಿ ಶಿಪ್ನ ಎಸ್.ಕೀರ್ತನಾ ಅವರಿಂದ ಜಾನಪದ ಗೀತೆಗಳು, ಸಿರಿವಾರ ಮಲ್ಲಿಕಾರ್ಜುನ ಅವರಿಂದ ಏಕಪಾತ್ರಾಭಿನಯ (ಬಾಲಕೃಷ್ಣ ಬಯಲಾಟ), ಇಬ್ರಾಹಿಂಪುರದ ಹೆಚ್.ರಾಹುಲ್ ಸಂಗಡಿಗರಿಂದ ನಾಟಕ(ಗೌತಮಬುದ್ಧ) ಕಾರ್ಯಕ್ರಮ ಪ್ರದರ್ಶನವಾದವು.

Leave a Reply