ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಸಂದರ್ಭಗಳಲ್ಲಿ ಪ್ರಕೃತಿ ದತ್ತವಾದ ಅವಘಡಗಳು ಮತ್ತು ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ಪರಿಹಾರ ನೀಡುವುದು ಉತ್ತಮವಾದಂತಹ ಕಾರ್ಯವಾಗಿರುತ್ತದೆ.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಇಂತಹ ಸಂದರ್ಭದಲ್ಲಿ ಪರಿಹಾರ ನೀಡುವ ವಿಚಾರದಲ್ಲಿ ವೈಜ್ಞಾನಿಕವಾದಂತಹ ರೀತಿಯಲ್ಲಿ ಚಿಂತಿಸಿ ಮೊತ್ತದ ಪ್ರಮಾಣ ನಿರ್ಧರಿಸಬೇಕು. ಮೃತರಾದಂತಹ ವ್ಯಕ್ತಿಗಳು ಅವರ ವಯಸ್ಸು ಮತ್ತು ಅವರ ಕುಟುಂಬದ ಅವಲಂಬನೆಯನ್ನು ಸಹ ಪರಿಗಣಿಸಬೇಕು.
60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ನೀಡುವಂತಹ ಮೊತ್ತ ಮತ್ತು 18ರಿಂದ 40 ವರ್ಷದ ಒಳಗಿನ ಜನರು ಸತ್ತಾಗ ನೀಡುವ ಪರಿಹಾರದ ಮೊತ್ತ ಒಂದೇ ಆಗಿರುತ್ತದೆ. 60 ವರ್ಷದ ವಯಸ್ಸು ದಾಟಿದ ಹಿರಿಯ ನಾಗರಿಕ ರಿಗೆ ಕುಟುಂಬದ ನಿರ್ವಹಣೆಯ ಹೊಣೆಗಾರಿಕೆ ಹೆಚ್ಚು ಇರುವುದಿಲ್ಲ. ಇಂತಹ ಕುಟುಂಬವು ಸಹ ಇವರ ಆದಾಯವನ್ನೇ ಅವಲಂಬಿಸಿರುವುದಿಲ್ಲ. ಆದರೆ ಸಣ್ಣ ವಯಸ್ಸಿನ ದುಡಿಯುವ ಜನರು ನಿಧನರಾದರೆ ಆ ಕುಟುಂಬದ ನಿರ್ವಹಣೆಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಪರಿಹಾರ ನೀಡುವ ಸಂದರ್ಭದಲ್ಲಿ ಮೃತರ ವಯಸ್ಸನ್ನು ಸಹ ಮಾನದಂಡವನ್ನಾಗಿ ಪರಿಗಣಿಸುವಂತಹ ಆಲೋಚನೆಯನ್ನು ಸರ್ಕಾರ ಮಾಡಲಿ.
ಹಲವಾರು ದಶಕಗಳ ಕಾಲ ಬದುಕಿ ದುಡಿದು ಸಂಸಾರಗಳನ್ನ ಸಾಗಿಸಬೇಕಾಗಿದ್ದ ಅಥವಾ ಕುಟುಂಬಕ್ಕೆ ಆಧಾರ ಸ್ತಂಭಗಳಾಗಿದ್ದ ಯುವಜನರು ಮತ್ತು ಮಧ್ಯಮ ವಯಸ್ಸಿನವರು ನಿಧನರಾದರೆ ಅವರಿಗೆ ಈಗ ಕೊಡುತ್ತಿರುವ ಪರಿಹಾರದ ಭಕ್ತ ಸರಿಹೊಂದುವುದಿಲ್ಲ.
ಸಾವಿನ ಸಂದರ್ಭದಲ್ಲಿ ಯಾರು ಸಹ ಯಾವುದೇ ರೀತಿಯ ರಾಜಕಾರಣದ ಮಾತುಗಳನ್ನ ಆಡಬಾರದು. ಕೊಡುವ ಮನಸ್ಸಿದ್ದರೆ ಕೊಟ್ಟು ದೊಡ್ಡವರಾಗಿ. ಕೇವಲ ಬಾಯಿ ಚಪಲಕ್ಕೆ ಮಾತುಗಳನ್ನಾಡಿ ಪ್ರಚಾರ ಪಡೆಯಲು ಬಯಸಬೇಡಿ. ಕುಟುಂಬದ ಸದಸ್ಯರನ್ನು ಕಳೆದುಕೊಂಡವರಿಗಷ್ಟೇ ಅದರ ದುಃಖ ಗೊತ್ತಿರುತ್ತದೆ. ಕೇವಲ ಪ್ರಚಾರಕ್ಕಾಗಿ ಮಾತನಾಡುವವರಿಗೆ ಅದರ ಅನುಭವ ಆಗುವುದಿಲ್ಲ.
ಯಾವುದೇ ಅಪಘಾತವು ಸಹ ಪೂರ್ವ ನಿಯೋಜಿತವಾಗಿರುವುದಿಲ್ಲ. ಆಕಸ್ಮಿಕವಾಗಿ ಕೆಲವು ತಪ್ಪುಗಳಿಂದ ಸಂಭವಿಸುತ್ತದೆ. ಇದಕ್ಕೆ ಪೊಲೀಸರನ್ನು ಹೊಣೆ ಮಾಡುವುದರಲ್ಲಿ ಅರ್ಥವಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




