ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನ

2 years ago

ಅಕ್ಟೋಬರ್ 27 : ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನ

ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನವನ್ನು ಅಕ್ಟೋಬರ್ 27 ರಂದು ಕೊಟ್ಟಾರ ಚೌಕಿಯ ವಿ.ಎಸ್.ಕೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸಿಪಿಐಎಂ ಪಕ್ಷದ 24 ನೇ ಅಖಿಲ ಭಾರತ ಮಹಾ ಅಧಿವೇಶನ 2025 ಎಪ್ರಿಲ್ ನಲ್ಲಿ ಮಧುರೈ ನಲ್ಲಿ ಆರು ದಿನಗಳ ಕಾಲ ನಡೆಯಲಿದೆ. ಅದರ ಪೂರ್ವ ಭಾವಿಯಾಗಿ ಎಲ್ಲಾ ಹಂತಗಳ ಸಮ್ಮೇಳನಗಳು ದೇಶಾದ್ಯಂತ ಆರಂಭಗೊಂಡಿವೆ. ದ.ಕ. ಜಿಲ್ಲೆಯಲ್ಲಿಯೂ ಸಮ್ಮೇಳನದ ಪ್ರಕ್ರಿಯೆಗಳು ಆರಂಭಗೊಂಡಿದೆ.

ಮಂಗಳೂರು ನಗರ ದಕ್ಷಿಣ ಸಮ್ಮೇಳನ ಉರ್ವಸ್ಟೋರಿನಲ್ಲಿ ಕಾಮ್ರೇಡ್ ಸೀತಾರಾಮ್ ಯೆಚೂರಿ ವೇದಿಕೆ, ಕಾಮ್ರೇಡ್ ಕೊರಗಪ್ಪ ಶೆಟ್ಟಿ ಸಭಾಂಗಣ ಹಾಗೂ ಕಾಂ ಜೆರಿ ಪತ್ರಾವೋ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 27 ರಂದು ಬೆಳಿಗ್ಗೆ 9:30 ಕ್ಕೆ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಜೆ ಬಾಲಕೃಷ್ಣಶೆಟ್ಟಿ, ಪದ್ಮಾವತಿ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್ ಮಾರ್ಗದರ್ಶಕರಾಗಿ ಉಪಸ್ಥಿತರಿರುತ್ತಾರೆ. ಆ ನಂತರ ಸಮ್ಮೇಳನದ ಪ್ರತಿನಿಧಿ ಕಲಾಪಗಳು ನಡೆಯಲಿವೆ .ಅದೇ ದಿನ ಸಂಜೆ 4 ಗಂಟೆಗೆ ಸಭಾಂಗಣದ ವಠಾರದಿಂದ ಉರ್ವಸ್ಟೋರ್ ಜಂಕ್ಷನ್ ವರೆಗೆ ಆಕರ್ಷಕ ಮೆರವಣೆಗೆ ಹಾಗೂ ಕಾಂ ಚಂದು ಭಂಡಾರಿ ವೇದಿಕೆ, ಕಾಂ ಸುಂದರ ಸಾಲ್ಯಾನ್ ನಗರದಲ್ಲಿ ಬಹಿರಂಗ ಸಭೆ ನಡೆಯಲಿದೆ. ಈ ಬಹಿರಂಗ ಸಭೆಗೆ ಪ್ರಮುಖ ಭಾಷಣಗಾರರಾಗಿ ಸಿಪಿಐಎಂ ಪಕ್ಷದ ಕರ್ನಾಟಕ ರಾಜ್ಯ ಮುಖಂಡರಾದ ಕೆ ಮಹಾಂತೇಶ್ ಭಾಗವಹಿಸಲಿದ್ದಾರೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply