ಆಧುನಿಕ ಸರ್ಕಾರಗಳು ಅನುಸರಿಸುವ ಸಾರ್ವಜನಿಕ ಅರ್ಥಶಾಸ್ತ್ರ ಪರಿಕಲ್ಪನೆಯು ಜನ ಕಲ್ಯಾಣವನ್ನು ಸದಾ ಚಿಂತಿಸುತ್ತದೆ. ಅದರ ಮೂರು ಸೂತ್ರಗಳಲ್ಲಿ ವಲಯವಾರು ಸಂಪನ್ಮೂಲ ಹಂಚಿಕೆ (Allocation), ವಿತರಣೆ (distribution) ಮತ್ತು ಸದೃಢತೆ (stabilization) ನಿಯಮಗಳು ಸೇರಿವೆ. ಹಂಚಿಕೆ ಸೂತ್ರದ ಮೂಲದಲ್ಲಿ ಅದು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಯೋಜನೆ ಜಾರಿಗಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಹಂಚುತ್ತದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸಾರ್ವಜನಿಕ ಹಂಚಿಕೆಯಲ್ಲಿ ವೈರತ್ವ (Rivalry)ಇರುವುದಿಲ್ಲ. ಆದರೆ ಖಾಸಗಿ ವಲಯ ವೈರತ್ವವನ್ನು ಮೈಗೂಡಿಸಿಕೊಂಡು ಲಾಭಾಂಶವನ್ನು ನೋಡುತ್ತದೆ. ವಿತರಣೆ ನಿಯಮ ಅದು ಎಲ್ಲಾ ಕ್ಷೇತ್ರಗಳಲ್ಲೂ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಯೋಜನೆ ಜಾರಿಗಾಗಿ ತವಕಿಸುತ್ತದೆ. ಅದರಲ್ಲಿ ಮತ್ತೊಂದು ಪರಿಕಲ್ಪನೆ ಇದೆ. ಅದು ಜ್ಯೇಷ್ಠತೆ ಪರಿಕರಗಳನ್ನು ಪೂರೈಸುವ ಸಲುವಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದು ನಿರ್ದಿಷ್ಟವಾದ ಗುಂಪುಗಳ ಜನ ಕಲ್ಯಾಣಕ್ಕಾಗಿ ಉದ್ಯೋಗ, ಮನೆ, ನೀರು, ರಸ್ತೆ, ಆರೋಗ್ಯ, ಶಿಕ್ಷಣ, ಸಮುದಾಯದ ಅಭಿವೃದ್ಧಿ, ಮಾನವ ಸಂಪನ್ಮೂಲ ವೃದ್ಧಿ, ಅಪೌಷ್ಟಿಕತೆ ನಿವಾರಣೆ, ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲು ಸೂಚಿಸುತ್ತದೆ. ಸದೃಢತೆ ನಿಯಮಗಳು ವಿತ್ತೀಯ (fiscal ) ಮತ್ತು monetary ನೀತಿಗಳ ಸಮನ್ವಯವನ್ನು ಇವೆರಡೂ ಒಂದೇ ಸೂತ್ರದಂತೆ ಸಾಗಲು ಸಹಕಾರ ನೀಡುತ್ತದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಂಪತ್ತು ಮರು ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸಂಪತ್ತಿನ ಮರು ಹಂಚಿಕೆ ಅಂದರೆ ಸಂಪತ್ತು ಹೊಂದಿರುವವರಿಂದ ಬಲವಂತವಾಗಿ ಕಿತ್ತು ಬಡವರಿಗೆ ಹಂಚುವುದಲ್ಲ.
ಭಾರತದ ಮೊದಲ ಪಂಚವಾರ್ಷಿಕ ಯೋಜನೆಯಿಂದ 12 ಪಂಚವಾರ್ಷಿಕ ಯೋಜನೆಗಳ ತನಕ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕ ಹಣಕಾಸಿನ ನೀತಿಯಂತೆ ಜ್ಯೇಷ್ಠತೆ ಪರಿಕರಗಳನ್ನು ಪೂರೈಸಲು ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣವನ್ನು ನೀಡಲಾಗಿದೆ. ಇದನ್ನು ನಿರ್ವಹಿಸಲು ಕಾನೂನುಬಾಹಿರವಾಗಿ ಯಾರೊಬ್ಬರ ಕಿಸೆಗೆ ಕೈಹಾಕಿಲ್ಲ. ಅದು ಸರ್ಕಾರಗಳು ಸ್ವೀಕರಿಸಿದ ತೆರಿಗೆ ಹಣದಿಂದ ಎಲ್ಲಾ ಕಾರ್ಯಗಳನ್ನು ನೇರವೇರಿಸಿದೆ. ಹಣಕಾಸಿನ ಕೊರತೆ ಬಂದಾಗ ಹಣದ ಮಾರುಕಟ್ಟೆಯಲ್ಲಿ ಸಾಲ ಎತ್ತುತ್ತಾ ಬಂದಿವೆ. ಈ ಸಾರ್ವಜನಿಕ ಸಾಲದ ಪ್ರಮಾಣ 200 ಲಕ್ಷ ಕೋಟಿಗಳ ಗಡಿದಾಟುತ್ತಿದೆ. ಇದು ಮುಂದಿನ ಪೀಳಿಗೆಯ ತಲೆ ಮೇಲೆ ಹೊರೆಯಾಗುತ್ತದೆ.
ಸಾಮಾನ್ಯವಾಗಿ ಸಂಪತ್ತು ಮರುಹಂಚಿಕೆ ಅಂದಾಗ ಭಾರತದ ಸಾಮಾಜಿಕ ಸ್ತರ ವಿನ್ಯಾಸದೊಳಗೆ ಇರುವ ಬಡವರು, ಮಹಿಳೆ, ಮಕ್ಕಳು, ವಯೋವೃದ್ಧರು, ವಿಶೇಷಚೇತನರು ಹಾಗೂ ಸಾಮಾಜಿಕವಾಗಿ ಶೋಷಿತ ವರ್ಗಗಳ ಸಮಾಜಗಳೆಲ್ಲವೂ ಸೇರುತ್ತವೆ. ಇವರೆಲ್ಲರೂ ಸಮತಟದಲ್ಲಿ ನಿಲ್ಲುವಂತೆ ಮಾಡಬೇಕಾದರೆ ವಿತರಣೆ ಕಾರ್ಯಕ್ರಮ ಜೊತೆಗೆ ಜ್ಯೇಷ್ಠತೆ ಪರಿಕರಗಳನ್ನು ನೀಡುವ ಉದ್ದೇಶಿತ ಕಾರ್ಯಕ್ರಮ ಎಂದಾಗುತ್ತದೆ.
ಪ್ರಣಾಳಿಕೆ ಘೋಷಣೆ ಅಂದರೆ ಒಂದು ಚುನಾಯಿತ ಪಕ್ಷವಾಗಿ ಅದು ಸರ್ಕಾರ ರಚಿಸಿದ ಮೇಲೆ ಹಾಕಿಕೊಳ್ಳುವ ಉದ್ದೇಶಿತ ಕಾರ್ಯಸೂಚಿ.
ಬಡವರ ಮತ್ತು ಅಲಕ್ಷಿತರ ಸಬಲೀಕರಣಕ್ಕೆ ಸಾರ್ವಜನಿಕ ಹಣಕಾಸು ನೀತಿಯಲ್ಲಿ ಅಳವಡಿಸುವುದು ಸಂಪತ್ತಿನ ಕ್ರೋಢೀಕರಣಕ್ಕೆ ಮತ್ತೊಂದು ಮಗ್ಗುಲಲ್ಲಿ ಅಂದರೆ ಮಾರುಕಟ್ಟೆ ವಿವಿಧ ಅನುಭೋಗ ಮತ್ತು ಇತರೆ ಖರೀದಿ ಮೂಲಕ ರಾಷ್ಟ್ರೀಯ ಆದಾಯ ವೃದ್ಧಿಗೆ ಸಹಕಾರ ನೀಡುತ್ತದೆ.
ಸಂಪನ್ಮೂಲ ಮರು ಹಂಚಿಕೆಯನ್ನು ಸಿರಿವಂತರಿಂದ ಸೂರೆಗೊಳ್ಳುವ ಅಥವಾ ಸಂಪತ್ತು ಕೊಳ್ಳೆ ಹೊಡೆಯುವುದು ಎಂದು ಅಪಾರ್ಥ ಮಾಡಿಕೊಂಡು ವ್ಯಾಖ್ಯಾನ ಮಾಡಿದರೆ ಜನ ಕಲ್ಯಾಣ ಪರಿಕರಗಳನ್ನು ಅವಮಾನಿಸಿದಂತಾಗುತ್ತದೆ.
ಪಕ್ಷದ ಪ್ರಣಾಳಿಕೆ ಎಂದರೆ ಅದು ಜನಮತ ಗಳಿಸುವ ಸಾಧನ ಆಗುತ್ತದೆ. ಒಂದುವೇಳೆ ಯಾವುದಾದರೂ ಪಕ್ಷ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಪೂರೈಸಲು ಆಗದಿದ್ದರೆ ಅದು ಪೊಳ್ಳು ಭರವಸೆ ನೀಡಿ ಜನರನ್ನು ಅಪಮಾನ ಮಾಡಿದೆ ಎಂದು ನಿರ್ಧಾರ ಮಾಡುವವರು ಮತದಾರರು.
ಆದುದರಿಂದ ಸಂಪತ್ತಿನ ಮರು ಹಂಚಿಕೆ ಅಂದರೆ ಜನ ಕಲ್ಯಾಣ ಕಾರ್ಯಕ್ರಮ ಎಂದರೆ ತಪ್ಪಾಗಲಾರದು.
– ದಾಸನೂರು ಕೂಸಣ್ಣ, ಸಮುದಾಯ ಚಿಂತಕರು




