ಶಿವಮೊಗ್ಗ: ಅರ್ಜಿದಾರರಾದ ಡಿ.ಮುರಳಿ ಎಂಬುವವರು ಐ.ಸಿ.ಐ.ಸಿ ಲೋಂಬೋರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿ., ಜಯಪುರ, ಮುಂಬೈ ಮತ್ತು ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅರ್ಜಿದಾರರಿಗೆ ವಾಹನ ವಿಮಾ ಪಾಲಿಸಿಯ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಅರ್ಜಿದಾರರ ಕೆ.ಎ-03-ಪಿ:6518 ಕಾರನ್ನು 2017 ರಲ್ಲಿ ಖರೀದಿಸಿದ್ದು ದಿ:15.08.2021 ರಂದು ಕಾರಿನ ಬಾನೆಟ್ನಲ್ಲಿ ಅನಿರಿಕ್ಷತವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಸುಟ್ಟುಹೋಗಿರುತ್ತದೆ. ಈ ಸಂಬಂಧ ಐ.ಸಿ.ಐ.ಸಿ ಲೋಂಬೋರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ಸಂಪರ್ಕಿಸಿ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿದ್ದರು.
ಆದರೆ ಕಂಪನಿಯವರು ವಾಹನಕ್ಕೆ ಉಂಟಾದ ಹಾನಿಗಳು ವಾಹನವನ್ನು ಸರಿಯಾದ ಸಮಯದಲ್ಲಿ ಸರ್ವೀಸಿಂಗ್ ಮಾಡಿಸಿರುವುದಿಲ್ಲ ಮತ್ತು ಸ್ಥಳೀಯ ಗ್ಯಾರೆಜ್ಗಳಲ್ಲಿ ಆಯಿಲ್ ಬದಲಾಯಿಸಿರುತ್ತಾರೆ. ಈ ಕಾರಣದಿಂದ ಪರಿಹಾರ ನೀಡಲು ಸಾಧ್ಯವಿಲ್ಲವೆಂದು ಪರಿಹಾರ ಮೊತ್ತ ನೀಡಲು ನಿರಾಕರಿಸಿದ್ದರು. ಆಯೋಗ ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ, ಅರ್ಜಿದಾರರ ಸಾಕ್ಷ್ಯ ವಿಚಾರಣೆಯ ವಿವರ ಮತ್ತು ಹಾಜರುಪಡಿಸಲಾದ ದಾಖಲೆಗಳ ಆಧಾರದ ಮೇಲೆ ಪ್ರಕರಣವನ್ನು ಭಾಗಶಃ ಪುರಸ್ಕರಿಸಿದೆ.
ಎದುರುದಾರು ಅರ್ಜಿದಾರರಿಗೆ ರೂ. 13,50,000 ಗಳನ್ನು ವಿಮಾ ಪರಿಹಾರ ಮೊತ್ತವನ್ನು ಲೀಗಲ್ ನೋಟೀಸ್ ನೀಡಿದ ದಿನಾಂಕದಿಂದ ಶೇ.9% ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವುದು. ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ಹಾಗೂ ರೂ.1,00,000/- ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತು ರೂ. 10,000/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಮಹಿಳಾ ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿದೆ.




