ಗೋಲ್ಡನ್ ಹೋಮ್ಸ್ ಬಿಲ್ಡರ್ಸ್ ಗೆ ನಿರ್ದೇಶನ
ಧಾರವಾಡ: ದಾವಣಗೆರೆಯ ನರಸಿಂಹ ಬಂಡಿವಾಡ ಅನ್ನುವವರು 2010ನೇ ಇಸವಿಯಲ್ಲಿ ಹುಬ್ಬಳ್ಳಿಯ ಗೋಲ್ಡನ್ ಹೋಮ್ಸ್ ಬಿಲ್ಡರ್ಸ್ ಕಡೆಯಿಂದ ರೂ.16 ಲಕ್ಷ ರೂಪಾಯಿಗಳಿಗೆ ಪ್ಲ್ಯಾಟ ನಂ.ಜಿ-104 ಖರೀದಿಸಿದ್ದರು. ಈ ಬಗ್ಗೆ ಉಭಯತರ ಮಧ್ಯೆ ಖರೀದಿ ಒಪ್ಪಂದ ಪತ್ರ ಆಗಿತ್ತು. ಪ್ಲ್ಯಾಟ ಕಟ್ಟಿಸಿ ಸ್ವಾಧೀನತೆ ಕೊಟ್ಟಿದ್ದರೂ ಸದರಿ ಬಿಲ್ಡ್ರ್ಸ್ ದೂರುದಾರರಿಗೆ ನೋಂದಾಯಿತ ಕ್ರಯ ಪತ್ರ ಮಾಡಿಕೊಟ್ಟಿರಲಿಲ್ಲ. ಕ್ರಯಪತ್ರ ಬರೆದುಕೊಡುವಂತೆ ದೂರುದಾರ ಎದುರುದಾರ ಗೋಲ್ಡನ್ ಹೋಮ್ಸ್ರವರಿಗೆ ಹಲವು ಬಾರಿ ವಿನಂತಿಸಿದರೂ ಅವರು ಕ್ರಯ ಪತ್ರ ಬರೆದುಕೊಟ್ಟಿರಲಿಲ್ಲ. ಅಂತಹಎದುರುದಾರ/ಗೋಲ್ಡನ್ ಹೋಮ್ಸ್ ಬಿಲ್ಡ್ರ್ಸ್ರವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:26/02/2024 ರಂದು ದಂಪತಿಗಳಿಬ್ಬರೂ ದೂರು ಸಲ್ಲಿಸಿದ್ದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಸದಸ್ಯರು, ದೂರುದಾರ ಪೂರ್ತಿ ಹಣಕೊಟ್ಟ ಮೇಲೆ ಗೋಲ್ಡನ್ ಹೋಮ್ಸ್ ಬಿಲ್ಡ್ರ್ಸ್ರವರು ಪ್ಲ್ಯಾಟ ನಿರ್ಮಿಸಿ ಸ್ವಾಧೀನತೆಕೊಟ್ಟಿದ್ದಾರೆ. ಆ ಬಗ್ಗೆ ನೋಂದಾಯಿತ ಕ್ರಯ ಪತ್ರ ಮಾಡಿಕೊಡುವುದು ಎದುರದಾರ ಬಿಲ್ಡ್ರ್ರವರ ಕರ್ತವ್ಯವಾಗಿದೆ. ಆದರೆ ಎದುರುದಾರ/ಬಿಲ್ಡರ್ರವರು ದೂರುದಾರರಿಗೆ ಕ್ರಯ ಪತ್ರ ಮಾಡಿಕೊಡದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಅಭಿಪ್ರಾಯ ಪಟ್ಟು ಆಯೋಗ ತೀರ್ಪು ನೀಡಿದೆ.
ತೀರ್ಪು ನೀಡಿದ 30 ದಿವಸಗಳ ಒಳಗಾಗಿ ದೂರುದಾರರಿಗೆ ನೋಂದಾಯಿತ ಕ್ರಯ ಪತ್ರ ಮಾಡಿಕೊಡುವಂತೆ ಆಯೋಗ ಎದುರುದಾರರಿಗೆ ನಿರ್ದೇಶಿಸಿದೆ. ಅದಕ್ಕೆ ತಪ್ಪಿದ್ದಲ್ಲಿ ಕೋರ್ಟಕ ಮೀಷನರ್ ಮೂಲಕ ದೂರುದಾರರು ತಮ್ಮ ಸ್ವಂತ ಖರ್ಚಿನಲ್ಲಿ ನೋಂದಾಯಿತ ಕ್ರಯ ಪತ್ರ ಪಡೆಯಲು ಅರ್ಹರಿದ್ದಾರೆಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ.




