ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

2 years ago

#HighCourt #stays #investigation #ChakrabortySulibele #YuvaBrigade

ಬೆಂಗಳೂರು: ಭಾಷಣಕಾರ ಚಕ್ರವರ್ತಿ ವಿರುದ್ಧದ ಕೋಮು ದ್ವೇಷ ಹರಡಿದ ಆರೋಪದ ಕುರಿತು ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಯಾವಾಗ ಅಧಿಕಾರಕ್ಕೆ ಬರುತ್ತಾರೋ ಆಗೆಲ್ಲಾ ಹಿಂದೂಗಳು ಬದುಕುವುದು ಕಷ್ಟ ಎಂಬ ಹೇಳಿಕೆ ನೀಡುವ ಮೂಲಕ ಕೋಮು ದ್ವೇಷ ಹರಡಿದ ಆರೋಪದಡಿ ‘ಯುವ ಬ್ರಿಗೇಡ್’ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕುರಿತು ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿತ್ತು.

ತಮ್ಮ ವಿರುದ್ಧ ಸಲ್ಲಿಕೆಯಾಗಿರುವ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಚಕ್ರವರ್ತಿ ಸೂಲಿಬೆಲೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ ತನಿಖೆಗೆ ತಡೆಯಾಜ್ಞೆ ನೀಡಿದ್ದಾರೆ.

ಘಟನೆಯ ಹಿನ್ನೆಲೆ: 2023ರ ಅಕ್ಟೋಬರ್ 3ರಂದು ಕಾರವಾರ ತಾಲ್ಲೂಕಿನ ಕಡವಾಡ ಭೋವಿವಾಡದಲ್ಲಿರುವ ಆದಿಮಾಯಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಚಕ್ರವರ್ತಿ ಸೂಲಿಬೆಲೆ ಸುದ್ದಿಗಾರರೊಂದಿಗೆ ಮಾತನಾಡು ವೇಳೆ, ರಾಜ್ಯದಲ್ಲಿ ಸಿದ್ದರಾಮಯ್ಯ ಯಾವಾಗ ಅಧಿಕಾರಕ್ಕೆ ಬರುತ್ತಾರೋ ಆಗೆಲ್ಲಾ ಹಿಂದೂಗಳು ಬದುಕುವುದು ಕಷ್ಟ ಎಂದು ವಿವಾದಾಸ್ಪದ ಹೇಳಿಕೆ ನೀಡಿದ್ದರು.

ಈ ಹೇಳಿಕೆಯನ್ನು ‘ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ಮಧ್ಯೆ ಕೋಮು ದ್ವೇಷ ಹರಡಲು ಪ್ರಯತ್ನ’ ಎಂದು ಆರೋಪಿಸಿ ಕಾರವಾರ ಗ್ರಾಮಾಂತರ ಠಾಣಾ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದರು. ಇದೀಗ ಈ ಪ್ರಕರಣದ ವಿಚಾರಣೆಗೆ ತಡೆಬಿದ್ದಂತಾಗಿದೆ.

Leave a Reply