ಧಾರವಾಡ: ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ನವೆಂಬರ್ 16 ರಿಂದ 18 ರವರೆಗೆ 15ನೇ ಅಖಿಲ ಭಾರತ ವಿಶ್ವವಿದ್ಯಾಲಯ ಕುಲಪತಿಗಳ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.
ಹವಾಮಾನ ಸುರಕ್ಷಿತ, ಸುಸ್ಥಿರ ಕೃಷಿ ಮತ್ತು ಮಾನವನ ಆರೋಗ್ಯಕ್ಕಾಗಿ ಸಿರಿಧಾನ್ಯಗಳು ಎಂಬ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವು ವಿವಿಧ ದೇಶಗಳು, ಅಂತರರಾಷ್ಟ್ರೀಯ ಸಂಸ್ಥೆಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ಖಾಸಗಿ ವಲಯಗಳ ಸಹಯೋಗದೊಂದಿಗೆ ಸಿರಿಧಾನ್ಯಗಳನ್ನು ಉತ್ತೇಜಿಸಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.
ಸಿರಿಧಾನ್ಯಗಳನ್ನು ಬೆಳೆಯಲು ರೈತರನ್ನು ಬೆಂಬಲಿಸುವುದು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವುದು ಮತ್ತು ಧಾನ್ಯಗಳ ಪೌಷ್ಟಿಕಾಂಶದ ಮೌಲ್ಯದ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವುದು ಇದರಲ್ಲಿ ಒಳಗೊಂಡಿದೆ.
ಈ ವಿಚಾರ ಸಂಕಿರಣದಲ್ಲಿ ನವದೆಹಲಿ ಸಿಇಓ ಆಶೋಕ್ ದಳವಾಯಿ, ICAR-IIMR ಹೈದರಾಬಾದ್ ಮಾಜಿ ನಿರ್ದೇಶಕ ಡಾ. ವಿಲಾಸ್ ಟೋಣಪಿ, CFTRI ಮೈಸೂರಿನ ಧಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮಾಜಿ ಮುಖ್ಯಸ್ಥ ಡಾ. ಎನ್.ಜಿ. ಮಲ್ಲೇಶಿ, ಗ್ಲೋಬಲ್ ಸಿಇಓ ಅಡ್ವಾಂಟ ಸೀಡ್ಸ್, ದುಬೈ ಯುಎಇ ಡಾ. ಭೂಪೇನ್, ದುಬೈ ಭಾರತ ಸರಕಾರದ ಕೃಷಿ ಆಯುಕ್ತ ಡಾ. ಪಿ.ಕೆ. ಸಿಂಗ್, ನೀತಿ ಆಯೋಗದ ಸದಸ್ಯ ಡಾ. ರಮೇಶ್ ಚಾಂದ್ ಮತ್ತು BASU, ಪಾಟ್ನಾದ ಕುಲಪತಿ ಡಾ. ರಾಮೇಶ್ವರ ಸಿಂಗ್ ಉಪನ್ಯಾಸಗಳನ್ನು ನೀಡಲಿದ್ದಾರೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ತಿಳಿಸಿದ್ದಾರೆ.




