ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ದಕ್ಷಿಣ ಭಾರತದಲ್ಲಿ ಮೊದಲು ಕಾಲಿಟ್ಟಿದ್ದೇ ಕರ್ನಾಟಕಕ್ಕೆ. ತಮ್ಮ ಅಣ್ಣನ ಮಗ ಮುಕುಂದರಾವ್ ಅಂಬೇಡ್ಕರ್ ಆರಂಭಿಸಿದ್ದ ತಂಬಾಕು ವಹಿವಾಟನ್ನು ಕಣ್ಣಾರೆ ಕಂಡುಹೋಗಲು ಅವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಬಂದುಹೋಗಿದ್ದು 1921ರಲ್ಲಿ.

ಅದರ ನಂತರ ಬಾಬಾಸಾಹೇಬರು ಹಲವಾರು ಬಾರಿ ಕನ್ನಡನಾಡಿನ ವಿವಿಧ ಪ್ರಾಂತ್ಯಗಳಿಗೆ ಭೇಟಿ ಕೊಟ್ಟರು. ಕೆಲವು ಬಾರಿ ಕೋರ್ಟ್ ಮೊಕದ್ದಮೆಗಳಿಗಾಗಿ, ಇನ್ನು ಮಿಕ್ಕಂತೆ ಸಮುದಾಯದ ಶೈಕ್ಷಣಿಕ, ಆಧ್ಯಾತ್ಮಿಕ ಏಳಿಗೆ; ಅಥವಾ ಮತ್ತಾವುದೋ ಸವಲತ್ತು, ಸೌಕರ್ಯಗಳನ್ನು ಒದಗಿಸಿಕೊಡಲು ಅಂಬೇಡ್ಕರ್ ಪ್ರತಿ ಬಾರಿಯೂ ಶ್ರಮಿಸಿದರು.
ಹೀಗೆ ಕರ್ನಾಟಕಕ್ಕೆ ಅವರ ಪ್ರತಿ ಭೇಟಿಯೂ, ಜನಾಂಗದ ಮತ್ತು ನಾಡಿನ ಪಾಲಿಗೆ ಚರಿತ್ರಾರ್ಹವಾಗಿತ್ತು.
ಹಿರಿಯ ಪತ್ರಕರ್ತ, ಅನುವಾದಕ, ಲೇಖಕ, ಚಿಂತಕ, ನಿರ್ದೇಶಕ ಎನ್.ಎಸ್.ಶಂಕರ್ ಅವರ ಈ ಸಾಕ್ಷ್ಯಚಿತ್ರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಕರ್ನಾಟಕದ ನಂಟನ್ನು ಮೊದಲ ಬಾರಿ ಸವಿಸ್ತಾರವಾಗಿ ದಾಖಲಿಸಿದೆ.
ಬನ್ನಿ ಈ ಶನಿವಾರ ಜಂಗಮದಲ್ಲಿ ಈ ಸಾಕ್ಷ್ಯಚಿತ್ರ ನೋಡೋಣ. ಕರ್ನಾಟಕದೊಂದಿಗೆ ಬಾಬಾಸಾಹೇಬರಿಗೆ ಇದ್ದ ನಂಟು ಎಂತದು ಎನ್ನುವುದನ್ನು ಅರ್ಥಮಾಡಿಕೊಳ್ಳೋಣ.




