ಬೆಂಗಳೂರು: ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ಥಾನಗಳಲ್ಲಿ ಹಾದು ಹೋಗುವ ಸರಿಸುಮಾರು 3,800 ಕಿಮೀಗಳ ಉದ್ದದ ಹೆದ್ದಾರಿ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಸುಮಾರು 9 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಕೇಂದ್ರದ ಎನ್ ಎಚ್ ಎ ಐ ನಿಂದ 8 ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಜನವರಿ ಅಂತ್ಯದೊಳಗೆ ಆರಂಭಗೊಳ್ಳಲಿದೆ. ಇದರಲ್ಲಿ 1 ರಾಜ್ಯ ಹೆದ್ದಾರಿ ಬಿಓಟಿ ಟೋಲ್ ಯೋಜನೆ ಸೇರಿದಂತೆ ಒಟ್ಟು 12 ಯೋಜನೆಗಳು ಒಳಗೊಂಡಿದೆ.
ಪಿ ಎನ್ ಸಿ ಇನ್ಫ್ರಾಟೆಕ್ ಕಂಪನಿಯು ಬುಂದೇಲ್ ಖಂಡ್ ಮತ್ತು ಖಜುರಾಹೋ ಹೆದ್ದಾರಿ ಸೇರಿ ಇನ್ನೂ ಎರಡು ಯೋಜನೆಗಳಿಗೆ ಎನ್ ಎಚ್ ಎ ಐ ನಿಂದ ತಾತ್ವಿಕ ಅನುಮೋದನೆಯನ್ನು ಪಡೆದಿದೆ.
ಎನ್ ಎಚ್ ಎ ಐ ಇದುವರೆಗೆ ಎಂಟು ಹೆದ್ದಾರಿ ಯೋಜನೆಗಳನ್ನು ನಡೆಸಲು ಅನುಮೋದನೆಯನ್ನು ನೀಡಿದ್ದು, ಪಿ ಎನ್ ಸಿ ಇನ್ಫ್ರಾಟೆಕ್ ಸಂಸ್ಥೆಯು ಬುಂದೇಲ್ ಖಂಡ್ ಮತ್ತು ಖಜುರಾಹೋ ರಸ್ತೆ ಯೋಜನೆಗಳಲ್ಲಿ ತನ್ನ ಎರಡು ಅಂಗಸಂಸ್ಥೆಗಳು ಹೊಂದಿರುವ ಶೇ.100ರಷ್ಟು ಪಾಲನ್ನು ಕೆಕೆಆರ್ ಅಧೀನದ ಹೈವೇಸ್ ಇನ್‌ಫ್ರಾಸ್ಟ್ರಕ್ಚರ್ ಟ್ರಸ್ಟ್ ಗೆ ವರ್ಗಾಯಿಸಲು ಎನ್ಎಚ್ಎಐನಿಂದ ತಾತ್ವಿಕ ಅನುಮೋದನೆ ಪಡೆದಿದೆ.
ಜೊತೆಗೆ ಪಿ ಎನ್ ಸಿ ಇನ್ಫ್ರಾಟೆಕ್ ಕಂಪನಿಯು ವಹಿವಾಟಿಗೆ ಪೂರಕವಾದ ಷರತ್ತುಗಳ ಪೂರ್ವನಿದರ್ಶನಗಳನ್ನು ಪೂರೈಸುವ ಪ್ರಕ್ರಿಯೆಯಲ್ಲಿದ್ದು, ಪಿಎನ್ ಸಿ ಕೆ ಕೆ ಆರ್ ಒಪ್ಪಂದ ಮಾರ್ಚ್ 31ರಂದು ಮುಕ್ತಾಯವಾಗಲಿದೆ.
ಹೆದ್ದಾರಿ ಅಧಿಕಾರಿಗಳಿಂದ ನಿಯಂತ್ರಣ ಅನುಮೋದನೆಗಳಲ್ಲಿ ಬದಲಾವಣೆ ಮಾಡಬೇಕಾದುದು ಒಪ್ಪಂದದ ಅಡಿಯಲ್ಲಿನ ಪ್ರಮುಖ ನಿಬಂಧನೆಗಳಲ್ಲಿ ಒಂದಾಗಿದೆ ಜೊತೆಗೆ ಯೋಜನೆಯ ಸಾಲದಾತರಿಂದ ನಿರಾಕ್ಷೇಪಣಾ ಪತ್ರ ತಂದುಕೊಡಬೇಕೆನ್ನುವ ನಿಬಂಧನೆ ವಿಧಿಸಲಾಗಿದೆ.




