ಚಾಮರಾಜನಗರ: ದೇಶ ಸೇವೆಗಾಗಿಯೇ ಬದುಕು ಮೀಸಲಿಟ್ಟಿದ್ದ ಐಎನ್ಎ ರಾಮರಾವ್ ಅಪ್ರತಿಮ ದೇಶಭಕ್ತರಾಗಿದ್ದರು. ಅವರು ಭಾರತ ಸೇವಾದಳದ ಮೊಟ್ಟ ಮೊದಲ ದಳಪತಿಗಳಾಗಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂದು ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ಹೇಳಿದರು.
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
- ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ತಾಲೂಕು ಭಾರತ ಸೇವಾ ದಳದ ವತಿಯಿಂದ ಐ ಎನ್ ಎ ರಾಮರಾವ್ ಅವರ 99ನೇ ಜನ್ಮದಿನಾಚರಣೆ ಅಂಗವಾಗಿ ಹೆಬ್ಬಸೂರು ಗ್ರಾಮದಲ್ಲಿ ವಾಸವಾಗಿರುವ ಐ ಎನ್ ಎ ರಾಮರಾವ್ ಅವರ ಧರ್ಮಪತ್ನಿ ಭಾಗ್ಯಮ್ಮ ಅವರಿಗೆ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಸನ್ಮಾನಿಸಿ ಮಾತನಾಡಿದ ಅವರು, ದೇಶಪ್ರೇಮ ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ರಾಮರಾವ್ ಅವರ ರಾಷ್ಟ್ರಭಕ್ತಿ ಅತ್ಯಂತ ಅಗತ್ಯವಾಗಿದೆ. ಮುಂದಿನ ವರ್ಷಕ್ಕೆ ಐಎನ್ಎ ರಾಮರಾವ್ ಅವರಿಗೆ ನೂರು ವರ್ಷ ತುಂಬಲಿದೆ. ಈ ಸಂಬಂಧ ಭಾರತ ಸೇವಾದಳದ ಕೇಂದ್ರ ಕಚೇರಿ ಹಾಗೂ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದು ಐಎನ್ಎ ರಾಮರಾವ್ ಶತಮಾನೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ಒತ್ತಾಯಿಸುವುದಾಗಿ ಹೇಳಿದರು.

ಭಾರತ ಸೇವಾದಳದ ಉಪಾಧ್ಯಕ್ಷ ಪ್ರಸಾದ್ ಮಾತನಾಡಿ, ಐಎನ್ಎ ರಾಮರಾವ್ ಅವರ ಆದರ್ಶಗಳನ್ನು ಇಂದಿನ ಯುವಜನತೆ ಮೈಕೂಡಿಸಿಕೊಳ್ಳಬೇಕು ಎಂದು ಕರೆನೀಡಿದರು.
ಭಾರತ ಸೇವಾದಳದ ಕಾರ್ಯದರ್ಶಿ ನಾಗರಾಜು ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ಎಚ್ ವಿ ನಾಗರಾಜ್, ಐಎನ್ಎ ರಾಮರಾವ್ ಅವರ ಸುಪುತ್ರಿ ಕಲ್ಯಾಣಿ , ಅಂಜನ್ ಕುಮಾರ್, ಭೋಜರಾಜ್ ಮತ್ತಿತರರು ಹಾಜರಿದ್ದರು.



