ಉಸ್ತಾದ್ ತೌಫಿಕ್ ಖುರೇಷಿ, ವಿಜಯ್ ಪ್ರಕಾಶ್, ಪ್ರಿಯಾಂಕಾ ಬರ್ವೆ, ಸತ್ಯಜಿತ್ ತಲ್ವಾಲ್ಕರ್, ಶ್ರೀಧರ್ ಪಾರ್ಥಸಾರಥಿ, ಶಿಖರ್ ನಾಡ್, ಅಜಯ್ ಜೋಗ್ಲೇಕರ್ ಮತ್ತು ಕೌಶಿಕಿ ಜೋಗ್ಲೇಕರ್ ತಂಡದಿಂದ ಸಂಗೀತದ ರಸದೌತಣ

ಕನ್ಸರ್ಟ್ ಕುರಿತು ಮಾತನಾಡಿದ ತಬಲಾ ಕಲಾವಿದ ಮತ್ತು ಇನ್ಫಿನಿಟಿ ಇವೆಂಟ್ಸ್ ಸಂಸ್ಥಾಪಕ ಬೋಲ್ ಕನ್ಸರ್ಟ್‌ನ ಮಾಸ್ಟರ್ ಮೈಂಡ್ ಯತಿನ್ ಮೊಕಾಶಿ ಮೊಕಾಶಿ (ತಬಲಾ ಮಾಂತ್ರಿಕ ಉಸ್ತಾದ್ ಅಲ್ಲಾರಖಾ ಅವರ ಶಿಷ್ಯ), “ಬೆಂಗಳೂರು ನಗರ ಸಂಗೀತಕ್ಕೆ ನೀಡುವ ಪ್ರೋತ್ಸಾಹ ಅನನ್ಯವಾದುದು. ಇಂತಹ ಸ್ಥಳದಲ್ಲಿ ಪ್ರತಿಭೆಗಳ ಸಂಭ್ರಮವನ್ನು ಉಣಬಡಿಸಲು ನಮಗೆ ತುಂಬಾ ಸಂತೋಷವಾಗುತ್ತದೆ. ಎಂಟು ಕಲಾವಿದರ ಸಹಯೋಗವು ಪ್ರೇಕ್ಷಕರನ್ನು ಅತ್ಯುತ್ತಮ ಸಂಗೀತದ ಮತ್ತೊಂದು ಜಗತ್ತಿಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ”ಎಂದರು.

ಬೆಂಗಳೂರು: ಎಂಟು ಅತ್ಯಂತ ಪ್ರತಿಭಾವಂತ ಮತ್ತು ಪ್ರಸಿದ್ಧ ಸಂಗೀತಗಾರರು ಸಾವಿರಾರು ಬೆಂಗಳೂರಿಗರಿಗೆ ಸಂಗೀತದ ರಸದೌತಣ ಉಣಬಡಿಸಿದರು. ಈ ವಾರಾಂತ್ಯದ ಸಂಜೆ ಚೌಡಯ್ಯ ಸ್ಮಾರಕ ಸಭಾಂಗಣ ಸಂಗೀತ ಪ್ರೇಮಿಗಳಿಂದ ಕಿಕ್ಕಿರಿದಿತ್ತು. ಉಸ್ತಾದ್ ತೌಫಿಕ್ ಖುರೇಷಿ, ವಿಜಯ್ ಪ್ರಕಾಶ್, ಪ್ರಿಯಾಂಕಾ ಬರ್ವೆ, ಸತ್ಯಜಿತ್ ತಲ್ವಾಲ್ಕರ್, ಶ್ರೀಧರ್ ಪಾರ್ಥಸಾರಥಿ, ಶಿಖರ್ ನಾಡ್, ಅಜಯ್ ಜೋಗ್ಲೇಕರ್ ಮತ್ತು ಕೌಶಿಕಿ ಜೋಗ್ಲೇಕರ್ ತಂಡ ಬಹು ನಿರೀಕ್ಷಿತ ‘ಬೋಲ್’ಕನ್ಸರ್ಟ್‌ನಲ್ಲಿ ಪ್ರೇಕ್ಷಕರನ್ನು ಸಂಗೀತದ ಅಲೆಯಲ್ಲಿ ತೇಲುವಂತೆ ಮಾಡಿತು.

ಉಸ್ತಾದ್ ತೌಫಿಕ್ ಖುರೇಷಿ, ಡಿಜೆಂಬೆ ಮತ್ತು ಡ್ರಮ್‌ಗಳಿಂದ ಜನರನ್ನು ರಂಜಿಸಿದರು. ಗಾಯಕ ವಿಜಯ್ ಪ್ರಕಾಶ್ ತಮ್ಮ ಇಂಪಾದ ಗಾಯನದಿಂದ ಪ್ರೇಕ್ಷಕರನ್ನು ಮೋಡಿ ಮಾಡಿದರು. ಪ್ರಿಯಾಂಕಾ ಬಾರ್ವೆ ತಮ್ಮ ಮನಮೋಹಕ ಧ್ವನಿಯಿಂದ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರೆ, ಸತ್ಯಜಿತ್ ತಲ್ವಾಲ್ಕರ್, ಶ್ರೀಧರ್ ಪಾರ್ಥಸಾರಥಿ, ಶಿಖರ್ ನಾಡ್, ಅಜಯ್ ಜೋಗ್ಲೇಕರ್ ಮತ್ತು ಕೌಶಿಕಿ ಜೋಗ್ಲೇಕರ್ ಅನುಕ್ರಮವಾಗಿ ತಬಲಾ, ಮೃದಂಗಂ, ಹಾರ್ಮೋನಿಯಂ, ಡಿಜೆಂಬೆ ಮತ್ತು ಕೀಬೋರ್ಡ್‌ಗಳಲ್ಲಿ ತಮ್ಮ ಪರಿಣತಿಯೊಂದಿಗೆ ಸಂಗೀತ ಕಚೇರಿಯ ಮೆರಗು ಹೆಚ್ಚಿಸಿದರು.

ಭಾರತೀಯ ಶಾಸ್ತ್ರೀಯ ಮತ್ತು ಜನಪದ, ಗಜಲ್, ಬಾಲಿವುಡ್ ಮತ್ತು ಸಮಕಾಲೀನ ಸಂಗೀತದವರೆಗೆ ವಿವಿಧ ಸಂಗೀತ ಪ್ರಕಾರಗಳ ಮಧುರ ಸಂಜೆ ಇದಾಗಿತ್ತು.

ವಿಷಯಾಧಾರಿತ ‘ಬೋಲ್’ಕನ್ಸರ್ಟ್ ಅನ್ನು ಇನ್ಫಿನಿಟಿ ಈವೆಂಟ್ಸ್ ಇಂಡಿಯಾ ಯತಿನ್ ಮೊಕಾಶಿ ಇನಿಶಿಯೇಟಿವ್ (ತಬಲಾ ಕಲಾವಿದ) ಟಿಂಬ್ರೆ ವರ್ಲ್ಡ್ ಸ್ಟುಡಿಯೋ ಮತ್ತು ವೆರಿಸ್ಪಿಕ್ ಈವೆಂಟ್‌ಗಳ ಸಹಯೋಗದಲ್ಲಿ ಆರ್ಟ್ ವರ್ಕ್ ಸ್ಟುಡಿಯೋ ಈ ಕಾರ್ಯಕ್ರಮ ನಡೆಸಿಕೊಟ್ಟಿತು ಮತ್ತು ಈವೆಂಟ್ ಅನ್ನು ಬ್ಯಾಂಕ್ ಆಫ್ ಬರೋಡಾ ಪ್ರಾಯೋಜಿಸಿತ್ತು.



