ಬೊಮ್ಮನಹಳ್ಳಿಯಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ಕಡಿವಾಣ!

3 years ago

ಬೊಮ್ಮನಹಳ್ಳಿ: ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಬಿಜೆಪಿಯ ಸತೀಶ್ ರೆಡ್ಡಿ ಸತತವಾಗಿ ಆಯ್ಕೆಯಾಗುತ್ತಿದ್ದು ಕಾಂಗ್ರೆಸ್ ಈ ಬಾರಿ ಇದನ್ನು ಕೈವಶ ಮಾಡಿಕೊಳ್ಳಲು ಸಾಕಷ್ಟು ಬೆವರು ಹರಿಸತೊಡಗಿದೆ.

ಕ್ಷೇತ್ರದಲ್ಲಿ ಸತೀಶ್ ರೆಡ್ಡಿ ಎದುರಿಸುತ್ತಿರುವ ವಿರೋಧ ಮತ್ತು ಆಡಳಿತ ವಿರೋಧಿ ಅಲೆಯನ್ನು ಪ್ರಬಲವಾಗಿ ನೆಚ್ಚಿಕೊಂಡಿರುವ ಕಾಂಗ್ರೆಸ್, ಯುವ ಉದ್ಯಮಿ ಉಮಾಪತಿ ಶ್ರೀನಿವಾಸಗೌಡ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರು ದಲಿತ ಮತ್ತು ಒಕ್ಕಲಿಗರನ್ನು ಸೆಳೆಯಲು ಸಾಕಷ್ಟು ಪ್ರಯತ್ನ ನಡೆಸಿದೆ. ಜೆಡಿಎಸ್ ನಿಂದ ನಾರಾಯಣ ರಾಜು ಕಣದಲ್ಲಿದ್ದರೂ ಕೂಡ ಸ್ಪರ್ಧೆ ಇರುವುದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ.

Leave a Reply