ಬೆಂಗಳೂರು: ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೇಂದ್ರ ರೈಲ್ವೆ ಇಲಾಖೆಯ ವಿಭಾಗೀಯ ರೈಲ್ವೆ ಅಧಿಕಾರಿಗಳನ್ನು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯರೆಡ್ಡಿ ಮಹಿಳಾ ಕಾರ್ಯಕರ್ತೆರ ಜೊತೆಯಲ್ಲಿ ತೆರಳಿದಾಗ ಮನವಿ ಸ್ವೀಕರಿಸಲು ಹಿಂದೇಟು ಮತ್ತು ಗೆಜೆಡ್ ಪ್ರತಿ ನೀಡಲು ತಿರಸ್ಕಾರ ಮಾಡಿರುವುದನ್ನ ಖಂಡಿಸಿದರು. 35ಕ್ಕೂ ಹೆಚ್ಚು ಮಹಿಳೆಯರನ್ನ ವಿನಾಕರಣ ಬಂಧಿಸಿದರು. ಎಂ.ಇ.ಐ.ಅಧ್ಯಕ್ಷ ಎಸ್.ಮನೋಹರ್ ಮತ್ತು ಮಹಿಳಾ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಪದಾಧಕಾರಿಗಳು ಭಾಗವಹಿಸಿದ್ದರು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಇದೇ ಸಂದರ್ಭದಲ್ಲಿ ಮಾತನಾಡಿದ ಸೌಮ್ಯರೆಡ್ಡಿ, ಕೇಂದ್ರ ಬಿಜೆಪಿ ಸರ್ಕಾರಕ್ಕೆ ಹಿಂದೂಗಳ ಓಟ್ ಬೇಕು, ಅದರೆ ಹಿಂದೂಗಳ ಭಾವನೆಗಳು ಬೇಡವೆನ್ನುತ್ತಾರೆ. ಕೇಂದ್ರ ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ ಮತ್ತು ಜನಿವಾರ ತೆಗೆಯುವಂತೆ ಆದೇಶ ಮಾಡಿದರು. ಮನವಿ ಸಲ್ಲಿಸಲು ವಿಭಾಗೀಯ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಲು ಬಂದರೂ ನಿನ್ನೆ ಮನವಿ ಸ್ವೀಕರಿಸಲಿಲ್ಲ, ಇಂದು ಗೆಜೆಟ್ ಪ್ತತಿ ಪಡೆಯಲು ಬಂದರೆ ಮಹಿಳೆ ಕಾಂಗ್ರೆಸ್ ನವರನ್ನು ಬಂಧಿಸುತ್ತಾರೆ ಎಂದರು.
ಹಿಂದೂ ವಿರೋಧಿ ಬಿಜೆಪಿ ಸರ್ಕಾರ ಪಹಾಲ್ಗಾಮ್ ನಲ್ಲಿ ಮೃತಪಟ್ಟ 26 ಕುಟುಂಬಗಳಗೆ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ, 2500 ಕೋಟಿ ಬ್ಯಾಂಕ್ ಹಗರಣದಲ್ಲಿ 50ಕ್ಕೂ ಹೆಚ್ಚು ಹಿರಿಯ ನಾಗರಿಕರು ಬ್ಯಾಂಕ್ ನಿಂದ ಹಣ ಸಿಗದೇ ಕೊರಗಿ ಸತ್ತರೂ ಅದಕ್ಕೆ ಗಮನಹರಿಸಲಿಲ್ಲ. ಪಹಾಲ್ಗಾಮ್ ನಲ್ಲಿ ಭದ್ರತಾ ವೈಫಲ್ಯ ಇದಕ್ಕೆಲ್ಲ ಕೇಂದ್ರ ಸರ್ಕಾರ ಉತ್ತರಿಸಬೇಕು ಎಂದರು.
ನ್ಯಾಯ ಕೇಳಲು ಬರುವ ಮಹಿಳೆಯರ ಮೇಲೆ ಎ.ಸಿ.ಪಿ. ದಬ್ಬಾಳಿಕೆ ಮಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರದ ಆಣತಿಯಂತೆ ಅಧಿಕಾರಿಗಳು ವರ್ತನೆ ಮಾಡುತ್ತಿದ್ದಾರೆ ಎಂದರು.



