ಬೆಂಗಳೂರು: ರಾಜ್ಯದಲ್ಲಿ ಹೊಸ ವಾಹನ ಖರೀದಿಗೆ ಸರ್ಕಾರದ ನೂತನ ತೆರಿಗೆ ನೀತಿ ಅನ್ವಯವಾಗಲಿದೆ. ವಾಹನ ತೆರಿಗೆ ಹೆಚ್ಚಳದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ನೀಡಿರುವುದರಿಂದ ಜಾರಿಗೆ ಬರಲಿದೆ. ಆ ಮೂಲಕ ಲಘು ಗೂಡ್ಸ್ ವಾಹನಗಳು ದುಬಾರಿಯಾಗಲಿದ್ದು, ಹೊಸದಾಗಿ ಯೆಲ್ಲೋ ಬೋರ್ಡ್ ವಾಹನ ಖರೀದಿ ಮಾಡುವವರಿಗೆ ಶಾಕ್ ಎದುರಾಗಿದೆ.
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
ವಾಹನಗಳ ಜೀವಿತಾವಧಿ ತೆರಿಗೆ ಹೆಚ್ಚಳ ಆಗಲಿದೆ. 10 ಲಕ್ಷದೊಳಗಿನ ಟ್ಯಾಕ್ಸಿ, ಲಘು ಗೂಡ್ಸ್ ವಾಹನಗಳ ಜೀವಿತಾವಧಿ ತೆರಿಗೆ ಶೇಕಡಾ 5ರಷ್ಟು ಏರಿಕೆ ಆಗಲಿದೆ.
ವಾಣಿಜ್ಯ ಉದ್ದೇಶ ಬಳಕೆಯ ಎಲೆಕ್ಟ್ರಿಕ್ ವಾಹನಗಳ ತೆರಿಗೆಯಲ್ಲಿ 25 ಲಕ್ಷಕ್ಕೂ ಹೆಚ್ಚಿನ ವಾಣಿಜ್ಯ ಬಳಕೆ ಇವಿಗೆ ಶೇ.10ರಷ್ಟು ತೆರಿಗೆ ಏರಿಕೆ ಆಗಲಿದೆ. ಈವರೆಗೆ 10 ಲಕ್ಷಕ್ಕಿಂತ ಕಡಿಮೆ ಮೌಲ್ಯದ ವಾಹನಗಳಿಗೆ ತೆರಿಗೆ ಇರಲಿಲ್ಲ. ಆದರೆ ಈ ಎಲ್ಲಾ ವಾಹನಗಳ ಜೀವಿತಾವಧಿ ತೆರಿಗೆ ಏರಿಕೆ ಆಗಲಿದೆ.
ಈ ಹಿಂದೆ ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಪ್ರತಿ ಸೀಟ್ ಗೆ ಮೂರು ತಿಂಗಳಿಗೊಮ್ಮೆ 100 ರೂ ಗಳಂತೆ, 4 ಸೀಟ್ ವಾಹನಕ್ಕೆ 400 ರೂ. ಪಾವತಿ ಮಾಡಬೇಕಿತ್ತು. ಆದರೆ ನೂತನ ತಿದ್ದುಪಡಿ ವಿಧೇಯಕದಲ್ಲಿ ಅದನ್ನು ಬದಲಿಸಿ, 10 ಲಕ್ಷ ದೊಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಜೀವಿತಾವಧಿ 5% ರಷ್ಟು ತೆರಿಗೆ ವಿಧಿಸಲಾಗಿದೆ.
10 ಲಕ್ಷ ರೂ ಯೆಲ್ಲೋ ಬೋರ್ಡ್ ಕಾರು ಖರೀದಿ ಮಾಡಿದರೆ 50 ಸಾವಿರ ರೂ. ಜೀವಿತಾವಧಿ ಟ್ಯಾಕ್ಸ್ ಪಾವತಿ ಮಾಡಬೇಕು. 25 ಲಕ್ಷ ರೂ ಮೇಲ್ಪಟ್ಟ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಗೆ,10% ರಷ್ಟು ಟ್ಯಾಕ್ಸ್ ಪಾವತಿ ಮಾಡಬೇಕು. ಅಂದರೆ 25 ಲಕ್ಷ ರೂ. ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದರೆ 2.5 ಲಕ್ಷ ರೂ ಟ್ಯಾಕ್ಸ್ ಪಾವತಿ ಮಾಡಬೇಕು.
ಈ ಹಿಂದೆ 25 ಲಕ್ಷ ರೂ ಮೇಲ್ಪಟ್ಟ ವಾಣಿಜ್ಯ ಬಳಕೆ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಕಟ್ಟಡ ಸಾಮಗ್ರಿಗಳ ಶಿಫ್ಟಿಂಗ್ ವಾಹನಗಳ ಮೇಲೆ ಈ ಹಿಂದೆ 6% ರಷ್ಟು ಜೀವಿತಾವಧಿ ತೆರಿಗೆ ವಿಧಿಸಲಾಗಿತ್ತು. ನೂತನ ಆದೇಶದಲ್ಲಿ 8% ರಷ್ಟು ಜೀವಿತಾವಧಿ ವಿಧಿಸಲಾಗಿದೆ.




