ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹೋರಾಟ
ಬೆಂಗಳೂರು: ಬಿಬಿಎಂಪಿಯಲ್ಲಿ ಕೆಟಿಪಿಪಿ ಕಾಯಿದೆ ಉಲ್ಲಂಘನೆ ಮಾಡಿ, ಟೆಂಡರ್ ಮಾಡದೇ ಕೊಟ್ಯಂತರ ರೂಪಾಯಿ ಬಿಲ್ಲು ಪಾವತಿ ಮಾಡಿರುವ ಕಾಮಗಾರಿಗಳ ಕುರಿತು ತನಿಖೆ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಚಳುವಳಿ ಕೆ.ಅಯ್ಯಪ್ಪ, ಜಿಲ್ಲಾಧ್ಯಕ್ಷ ಎನ್.ಪ್ರಸಾದ್ ರಾಜಭವನದಲ್ಲಿ ರಾಜ್ಯಪಾಲರಿಗೆ ದೂರು ನೀಡಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಚಳುವಳಿ ಕೆ.ಅಯ್ಯಪ್ಪ ಮಾತನಾಡಿ, ಸ್ಥಳೀಯ ಜನಪ್ರತಿನಿಧಿಗಳು ಇಲ್ಲ, ಅಧಿಕಾರಿಗಳ ಅಂಧಾ ದರ್ಬಾರ್ ನಿಂದ ಕಾನೂನಿನ ನಿಯಮಗಳನ್ನು ಉಲ್ಲಂಘನೆ ಮಾಡಿ ಬಿಲ್ಲುಗಳನ್ನು ಪಾವತಿ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಆರ್ಥಿಕ ನಷ್ಟವುಂಟು ಮಾಡಿರುತ್ತಾರೆ ಎಂದು ಆರೋಪಿಸಿದರು.
ದಿನಾಂಕ 01.05.2025 ರಂದು ಬೆಂಗಳೂರು ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಣೆ ಸಮಾರಂಭನಡೆಸಲು ಮೆ: ಫೆಬ್ರಿಕಾನ ಸಂಸ್ಥೆಯವರ ಖಾತೆಗೆ ರೂ.1,12,49,837-00 (ಒಂದು ಕೋಟಿ ಹನ್ನೆರಡು ಲಕ್ಷದ ನಲವತ್ತೊಂಬತ್ತು ಸಾವಿರದ ಎಂಟು ನೂರು ಮೂವತ್ತೇಳು ರೂ ಮಾತ್ರ) ಗಳನ್ನು ನಿಯಮವನ್ನು ಉಲ್ಲಂಘನೆ ಮಾಡಿ ಪಾವತಿ ಮಾಡಲು ಶಿಫಾರಸ್ಸು ಮಾಡಿರುತ್ತಾರೆ. ಮುಂದುವರಿದು ಮೇಲ್ಕಂಡ ಮೊತ್ತವನ್ನು ಪಾವತಿ ಮಾಡಲು ರೂ.2,87,50,419-00 ಗಳನ್ನು ಪಾವತಿ ಮಾಡಲು ವಿಷಯ ಸಂಖ್ಯೆ 81/2025-26 ವಲಯ ಆಯುಕ್ತರು (ಪಶ್ಚಿಮ) ರವರು ಮಂಡಿಸಿರುವ ಸಂಖ್ಯೆ ವ.ಆ(ಪ)/ಪಿಆರ್/987/2025-26 ದಿನಾಂಕ 29.04.2025 ರಂತೆ ಟಿಪ್ಪಣಿ ಒಪ್ಪಿಗೆ ಪತ್ರದಂತೆ ಆಡಳಿತಗಾರರ ಅನುಮೋದನೆ ಪಡೆದು ವಲಯ ಆಯುಕ್ತರು ಪಶ್ಚಿಮ, ಜಂಟಿ ಆಯುಕ್ತರು (ಪಶ್ಚಿಮ) ಹಾಗೂ ಮುಖ್ಯ ಲೆಕ್ಕಾಧಿಕಾರಿಗಳು (ಕೇಂದ್ರ) ರವರು ಕೆಟಿಪಿಪಿ ಕಾಯಿದೆ ಗಳನ್ನು ಪರಿಶೀಲಿಸದೆ ನಿಯಮಗಳನ್ನು ಪಾಲನೆ ಮಾಡದೆ ಸಂಬಂಧಪಟ್ಟ ಸಂಸ್ಥೆಯವರೊಂದಿಗೆ ಶಾಮೀಲಾಗಿ ನಿಯಮಗಳನ್ನು ಉಲ್ಲಂಘನೆ ಮಾಡಿ ಪಾವತಿ ಮಾಡಲು ಶಿಫಾರಸ್ಸು ಮಾಡಿರುತ್ತಾರೆ ಹಾಗೂ ಬಿಬಿಎಂಪಿಗೆ ಆರ್ಥಿಕ ನಷ್ಟ ಉಂಟುಮಾಡಿರುತ್ತಾರೆ ಎಂದರು.
ಆದ್ದರಿಂದ ಈ ಕೂಡಲೇ ಇದರ ಬಗ್ಗೆ ತನಿಖೆ ಮಾಡಿ ಕಾನೂನು ರಿತ್ಯಾ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಎನ್.ಪ್ರಸಾದ್ ಮಾತನಾಡಿ, 2 ಕೋಟಿಗಿಂತ ಅನುದಾನವನ್ನು ಯಾವುದೇ ನಿಯಮಗಳನ್ನು ಪಾಲಿಸದೇ ನೇರವಾಗಿ ಗುತ್ತಿಗೆ ನೀಡಿ, ಹಣ ಬಿಡುಗಡೆ ಮಾಡಲು ಕ್ರಮವಹಿಸಿರುತ್ತಾರೆ. ಬಿಬಿಎಂಪಿ ಎಲ್ಲ ವಲಯಗಳಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ. ಕೆಟಿಪಿಪಿ ಕಾಯಿದೆ ಉಲ್ಲಂಘನೆಯಾಗಿದೆ ಪೌರ ಕಾರ್ಮಿಕರ ದಿನಾಚರಣೆ ಹೆಸರಿನಲ್ಲಿ ಕೊಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ ಇದರ ವಿರುದ್ದ ಬೃಹತ್ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.




