ರಂಗಾಯಣ ಆಡಳಿತಾಧಿಕಾರಿಯಾಗಿ ಬಸವರಾಜ ಹೂಗಾರ ಅಧಿಕಾರ ಸ್ವೀಕಾರ

5 years ago

ಧಾರವಾಡ: ಧಾರವಾಡದ ರಂಗಾಯಣ ಆಡಳಿತಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಅಧಿಕಾರ ವಹಿಸಿಕೊಂಡರು.

ಮೂಲತಃ ಬಾಗಲಕೋಟ ಜಿಲ್ಲೆಯ ಸೀಮೀಕೇರಿ ಗ್ರಾಮದವರಾದ ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕೊಪ್ಪಳ, ಮಂಡ್ಯ, ಬಾಗಲಕೋಟೆ, ಕಾರವಾರ, ಧಾರವಾಡಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಜೊತೆಗೆ, ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಉಪನಿರ್ದೇಶಕರಾಗಿ, ಕರ್ನಾಟಕ ಲಲಿತಾ ಕಲಾ ಅಕಾಡೆಮಿ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಪಡೆದಿದ್ದಾರೆ. ಇದೀಗ ಜಂಟಿ ನಿರ್ದೇಶಕ ಹುದ್ದೆಗೆ ಬಡ್ತಿ ಪಡೆದು ಧಾರವಾಡ ರಂಗಾಯಣ ಆಡಳಿತಾಧಿಕಾರಿ ಹುದ್ದೆಗೆ ನಿಯೋಜನೆಯಾಗಿದ್ದಾರೆ.

ಅವರು ಅಧಿಕಾರ ಸ್ವೀಕರಿಸುವ ಸಮದಲ್ಲಿ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್, ರಂಗಸಮಾಜದ ಸದಸ್ಯ ಸಿದ್ಧರಾಮ ಹಿಪ್ಪರಗಿ ಹಾಜರಿದ್ದು ಶುಭಕೋರಿದರು.

Leave a Reply