ಚಾಮರಾಜನಗರ: ಕರ್ನಾಟಕದ ಜಾನಪದ ಪ್ರೇಮಿಗಳಿಗೆ, ಮಂಟೇಸ್ವಾಮಿ, ಮಲೆಮಹದೇಶ್ವರ ಜನಪದ ಮಹಾಕಾವ್ಯ ಕೇಳುಗರಿಗೆ ಬಂಗಾರ ಶೆಟ್ಟರ ಹೆಸರು ಚಿರಪರಿಚಿತ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೊಡ್ಡಗವಿ ಬಸಪ್ಪ ಮತ್ತು ಅವರ ತಂಡದ ಖಾಯಂ ಸದಸ್ಯರಾಗಿ ಬಂಗಾರಶೆಟ್ಟರು ಜನಪದ ಮಹಾಕಾವ್ಯಗಳನ್ನು ಹಾಡುತ್ತಿದ್ದರು.
ಪ್ರೊ.ಕಿ.ರಂ.ನಾಗರಾಜ ಅವರು ಆಯೋಜಿಸುತ್ತಿದ್ದ ಕಾವ್ಯಶಿವರಾತ್ರಿ ಮತ್ತು ಅವರ ನಂತರದ ಕಾವ್ಯಶಿವರಾತ್ರಿಗಳಲ್ಲಿ ಹಾಗೂ ಕಾಡುವ ಕಿರಂ ಕಾರ್ಯಕ್ರಮಗಳಲ್ಲೂ ದೊಡ್ಡಗವಿ ಬಸಪ್ಪ ತಂಡದವರೊಂದಿಗೆ ಬಂಗಾರಶೆಟ್ಟರ ಗಾಯನ ಇರುತ್ತಿತ್ತು.
ನಿರಂತರವಾಗಿ 7 ಹಗಲು, 7 ರಾತ್ರಿ ಹಾಡಿದರೂ ಮುಗಿಸಲಾರದಷ್ಟು ಬೃಹತ್ ಕಾವ್ಯಗಳನ್ನು ತಮ್ಮ ಅಗಾಧ ನೆನಪಿನ ಶಕ್ತಿಯ ಮೂಲಕ ಮರು ರೂಪಿಸುವ, ಮರುಕಟ್ಟುವ, ಜನಪದ ಮಹಾಕಾವ್ಯಗಳನ್ನೇ ಉಸಿರಾಡುತ್ತಿರುವ ಇಂತಹ ಕಲಾವಿದರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಿನಾಂಕ 26/07/2021ರಂದು ಇವರಿಗೆ ಪಾರ್ಶ್ವವಾಯು ಹೊಡೆದಿದ್ದು, ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಮಡದಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ಇವರಿಗೆ ಚಿಕಿತ್ಸೆಗೆ ಹಣಕಾಸು ನೆರವಿನ ಅಗತ್ಯವಿದೆ. ಮೈಸೂರಿನ ನುರಿತ ವೈದ್ಯರ ತಂಡ ಅವರ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿದ್ದು, ದೊಡ್ಡಗವಿ ಬಸಪ್ಪನವರ ಮಾಹಿತಿಯ ಪ್ರಕಾರ, ಬಂಗಾರಶೆಟ್ಟರ ಚಿಕಿತ್ಸೆಗೆ ಪ್ರತಿದಿನ 8,000 ರೂ.ಗಳ ಅಗ್ಯವಿದೆ. ನಿಮಗೆಲ್ಲ ಗೊತ್ತಿರುವಂತೆ ಜನಪದ ಕಲಾವಿದರಾದ ಇವರಿಗೆ ಕಳೆದ ಒಂದೂ ಮುಕ್ಕಾಲು ವರ್ಷದಿಂದ ಕೊರೊನಾ ಕಾರಣದಿಂದಾಗಿ ಕಾರ್ಯಕ್ರಮಗಳು ನಡೆಯದೆ ಜೀವನ ನಡೆಸುವುದೇ ಕಷ್ಟಕರವಾಗಿದೆ.
ಈ ಹಿನ್ನೆಲೆಯಲ್ಲಿ ಕಲಾಪ್ರೇಮಿಗಳು, ಜನಪದಪ್ರೇಮಿಗಳು, ಮಂಟೇಸ್ವಾಮಿ, ಮಲೆಮಹದೇಶ್ವರ ಕಾವ್ಯಗಳ ಕೇಳುಗರು ಬಂಗಾರಶೆಟ್ಟರಿಗೆ ನಿಮ್ಮ ಕೈಲಾದ ಹಣಕಾಸಿನ ನೆರವನ್ನು ನೀಡಿ. ಅವರ ಕುಟುಂಬದವರಿಗೆ ನಾವು ಏನನ್ನು ಕೊಟ್ಟರು ಅದರಿಂದ ಲಾಭವಿಲ್ಲ. ಒಬ್ಬ ಕಲಾವಿದನನ್ನು ಅವರ ಕುಟುಂಬದವರಿಗೆ ಉಳಿಸಿಕೊಡಿ ಎಂದು ಈ ಮೂಲಕ ಮನವಿ ಮಾಡಿಕೊಳ್ಳಲಾಗಿದೆ.
ಚಿಕಿತ್ಸೆಪಡೆಯುತ್ತಿರುವ ಬಂಗಾರಶೆಟ್ಟರ ಖಾತೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಅವರು ಮಾತನಾಡಲು ಕೂಡ ಅಶಕ್ತರಾಗಿದ್ದಾರೆ. ಅವರ ಖಾತೆ ಸಂಖ್ಯೆ ಮತ್ತು ಇತ್ಯಾದಿ ವಿವರಗಳನ್ನು ಪಡೆಯಲು ಆಗಿಲ್ಲ. ಅವರ ಕುಟುಂಬದವರ ಹೆಸರಿನಲ್ಲಿ ಬ್ಯಾಂಕ್ ಖಾತೆ ಇಲ್ಲ. ಆದ್ದರಿಂದ ದೊಡ್ಡಗವಿ ಬಸಪ್ಪ ಅವರ ಖಾತೆಗೆ ನಿಮ್ಮ ಕೈಲಾದಷ್ಟು ಧನ ಸಹಾಯವನ್ನು ನೀಡಿ, ಕಲಾವಿರೊಬ್ಬರ ಕುಟುಂಬದ ನೆರವಿಗೆ ನಿಲ್ಲಿ.
ಹಣ ಸಂದಾಯ ಮಾಡಬೇಕಾದ ವಿವರ
ಹೆಸರು: ದೊಡ್ಡಗವಿ ಬಸಪ್ಪ / Doddagavi Basappa
ಬ್ಯಾಂಕ್: ಕೆನರಾ ಬ್ಯಾಂಕ್ / Canara Bank
ಬ್ರಾಂಚ್: ಚಾಮರಾಜನಗರ / Chamarajanagara
ಖಾತೆ ಸಂಖ್ಯೆ: 17062210031095
IFSC Code: CNRB0011706




