ಮಿನಿಮಮ್ ಬ್ಯಾಲೆನ್ಸ್ ಇಲ್ಲದವರಿಂದ 21,044 ಕೋಟಿ ರೂ. ಸಂಗ್ರಹಿಸಿರುವುದು ನಾಚಿಕೆಗೇಡು: ದಿನೇಶ್ ಗುಂಡೂರಾವ್

2 years ago

ಬ್ಯಾಂಕ್ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ನಿರ್ವಹಿಸಲು ವಿಫಲವಾದ ಖಾತೆದಾರರಿಂದ ಸರಕಾರಿ ಸ್ವಾಮ್ಯದ ಬ್ಯಾಂಕ್ಗಳು ಮತ್ತು ಪ್ರಮುಖ ಐದು ಖಾಸಗಿ ಬ್ಯಾಂಕ್ಗಳು ಬರೋಬ್ಬರಿ 21,044 ಕೋಟಿ ರೂ.ಗೂ ಹೆಚ್ಚು ಹಣವನ್ನು ಸಂಗ್ರಹಿಸಿರುವುದು ನಾಚಿಕೆಗೇಡಿನ ವಿಷಯವಾಗಿದೆ.

2018ರಿಂದ 2023ರವರೆಗೆಕ ವಿವಿಧ ಶುಲ್ಕಗಳ ನೆಪದಲ್ಲಿ ಬ್ಯಾಂಕುಗಳು 35,587 ಕೋಟಿ ರೂಪಾಯಿ ಹಣವನ್ನು ಗ್ರಾಹಕರಿಂದ ವಸೂಲಿ ಮಾಡಿವೆ. ಗ್ರಾಹಕರಿಗೆ ನೀಡಿರುವ ಎಸ್ಎಂಎಸ್ ಸೇವೆ ಹೆಸರಿನಲ್ಲಿ 6,254 ಕೋಟಿ ರೂಪಾಯಿ, ಅಧಿಕ ಎಟಿಎಂ ವಹಿವಾಟು ನಡೆಸಿದ ಗ್ರಾಹಕರಿಗೆ 8,289 ಕೋಟಿ ರೂಪಾಯಿ ಹಣವನ್ನು ಶುಲ್ಕವಾಗಿ ಪಡೆದು ದೇಶವಾಸಿಗಳಿಂದ ಲೂಟಿ ಮಾಡಿವೆ.

ವಿದೇಶಗಳಿಂದ ಕಪ್ಪು ಹಣ ತಂದು ದೇಶವಾಸಿಗಳ ಪ್ರತಿ ಕುಟುಂಬಕ್ಕೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದವರು, ದೇಶದಲ್ಲಿ ಅಚ್ಚೇದಿನ್ ತರುತ್ತೇವೆ ಎಂದವರು, ಅಮೆರಿಕಕ್ಕೆ ಸಾಲ ಕೊಡುವ ಮಟ್ಟಕ್ಕೆ ದೇಶವನ್ನು ಅಭಿವೃದ್ಧಿ ಮಾಡುತ್ತೇವೆ ಎಂದವರು, ದೇಶದಲ್ಲಿ ಚಿನ್ನದ ರಸ್ತೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದವರು ಈಗ ದೇಶದ ಜನರ ಬೆವರಗಳಿಕೆಯ ಹಣವನ್ನು ಹೇಗೆ ಲೂಟಿ ಮಾಡಿದ್ದಾರೆ ನೋಡಿ.

ವಿಶ್ವಗುರು ಮೋದಿಯವರೇ ಉತ್ತರ ಕೊಡಿ, ತಮ್ಮ ಬೆವರಗಳಿಕೆಯ ಹಣವನ್ನು ಬ್ಯಾಂಕ್ನಲ್ಲಿ ಇಟ್ಟು ಬ್ಯಾಂಕ್ಗಳನ್ನು ಉದ್ಧಾರ ಮಾಡುವ ಜನರಿಂದಲೇ ಸುಲಿಗೆ ಮಾಡುತ್ತಿರುವ ಬ್ಯಾಂಕ್ಗಳು ದೇಶದಲ್ಲಿ ಇರುವಾಗ ಅಚ್ಚೇದಿನ್ ಎಲ್ಲಿ ಬರುತ್ತದೆ? ಹೇಗೆ ಬರುತ್ತದೆ?

ಕೇಂದ್ರ ಸರ್ಕಾರ ದೇಶದ ಇಂಚಿಂಚನ್ನೂ ಬಿಡದೇ ಲೂಟಿ ಮಾಡಿ ಹಣ ಸಂಗ್ರಹಣೆ ಮಾಡುತ್ತಿರುವಾಗ ಭಾರತದ ಮೇಲಿನ ಸಾಲ ಕಡಿಮೆಯಾಗಬೇಕಿತಲ್ವಾ? ವಿಶ್ವಗುರುವಾಗಿರುವ ಮೋದಿಯವರು ದೇಶದ ಪ್ರಧಾನಿಯಾಗಿರುವಾಗ ದೇಶದ ಸಾಲ ₹168 ಲಕ್ಷ ಕೋಟಿಗೆ ಏರಿಕೆ ಆಗಿದ್ದಾದ್ರೂ ಹೇಗೆ?

  • ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

Leave a Reply